ಗರ್ಭಿಣಿ ಚಾರುಗೆ 2ನೇ ಮದ್ವೆ..  ಹೆಂಡ್ತಿ ಕಾಪಾಡ್ತಾನಾ ರಾಮಾಚಾರಿ? – ರುಕ್ಮಿಣಿಗೆ ದೆವ್ವವಾಗಿ ಕಾಡಿದ ಕೃಷ್ಣ!

ಗರ್ಭಿಣಿ ಚಾರುಗೆ 2ನೇ ಮದ್ವೆ..  ಹೆಂಡ್ತಿ ಕಾಪಾಡ್ತಾನಾ ರಾಮಾಚಾರಿ? – ರುಕ್ಮಿಣಿಗೆ ದೆವ್ವವಾಗಿ ಕಾಡಿದ ಕೃಷ್ಣ!

ಕುತಂತ್ರಿಗಳ ಬಲೆಯಲ್ಲಿ ಸಿಲುಕಿದ್ದ ರಾಮಾಚಾರಿ ಕಡೆಗೂ ಸಾವನ್ನ ಗೆದ್ದು ಬಂದಿದ್ದಾನೆ. ಈಗ ತಮ್ಮನ ಸಾವಿಗೆ ಕಾರಣವಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಆದ್ರೆ ಕುತಂತ್ರಿಗಳು ಮಾತ್ರ ರಾಮಾಚಾರಿ ಕತೆ ಮುಗಿಸಿದ್ದೇವಲ್ಲಾ ಅಂತಾ ಖುಷಿಯಲ್ಲಿ ತೇಲಾಡ್ತಿದ್ದಾರೆ.. ಆದ್ರೆ ಸತ್ತಿದ್ದು ಕೃಷ್ಣ ಅನ್ನೋದು ಯಾರಿಗೂ ಗೊತ್ತಿಲ್ಲ.. ಒಂದ್ಕಡೆ ರಾಮಾಚಾರಿ ಮಾನ್ಯತಾ, ರುಕ್ಮಿಣಿ, ನವದೀಪ್‌ ವಿರುದ್ಧ ಸರಿಯಾಗೇ ಬಲೆ ಬೀಸಿದ್ರೆ, ಇತ್ತ ಮಾನ್ಯತಾ ಮಗಳು ಗರ್ಭಿಣಿ ಅಂತಾ ನೋಡದೆಯೇ ಚಾರುಗೆ ಎರಡನೇ ಮದುವೆ ಮಾಡಿಸಿ, ಫಾರಿನ್‌ಗೆ ಹಾರಲು ಮುಂದಾಗಿದ್ದಾಳೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಸೂಟ್‌ಕೇಸ್‌ಗೂ ಶುಲ್ಕ! – ದೊಡ್ಡ ಬ್ಯಾಗ್‌ ತೆಗೆದುಕೊಂಡು ಹೋಗುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!  

ರಾಮಾಚಾರಿ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಂಡಿದೆ.  ಆರಂಭದಿಂದಲೂ ಮಗಳ ಜೀವನ ಹಾಳಾದ್ರೂ ಪರವಾಗಿಲ್ಲ.. ರಾಮಾಚಾರಿಯನ್ನ ಸಾಯಿಸ್ಬೇಕು ಅಂತಾ ಮಾನ್ಯತಾ ಹೊಂಚು ಹಾಕಿ ಕುಳಿತಿದ್ರು. ಆದ್ರೆ ಏನ್‌ ಪ್ಲ್ಯಾನ್‌ ಮಾಡಿದ್ರು ಅಷ್ಟೇ ರಾಮಾಚಾರಿ ಆಯಸ್ಸು ಗಟ್ಟಿಯಾಗಿದೆ.. ಈಗಾಗಲೇ ಎರಡ್ಮೂರು ಬಾರಿ ಸಾವಿನಿಂದ ಬಚಾವ್‌ ಆಗಿದ್ದ.. ಇದೀಗ ಮತ್ತೊಮ್ಮೆ ರಾಮಾಚಾರಿ ಸಾವಿನ ಕದ ತಟ್ಟಿ ಬಂದಿದ್ದಾನೆ.. ಆದ್ರೆ ರಾಮಾಚಾರಿಗಾಗಿ ಕೃಷ್ಣ ಬಲಿಯಾಗಿದ್ದಾನೆ.. ಇದೀಗ ತಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ರಾಮಾಚಾರಿ ಮುಂದಾಗಿದ್ರೆ, ಇತ್ತ ಕುತಂತ್ರಿಗಳು ಬೇರೆಯದ್ದೇ ಪ್ಲ್ಯಾನ್‌ ಮಾಡಿದ್ದಾರೆ.. ಇದೀಗ ಕುತಂತ್ರಿ ಮಾನ್ಯತಾ ಗರ್ಭಿಣಿ ಚಾರುಗೆ ಎರಡನೇ ಮದುವೆ ಮಾಡಿಸಲು ಮುಂದಾಗಿದ್ದಾಳೆ.

ಹೌದು, ರಾಮಾಚಾರಿ ಬದುಕಿ ಬಂದ ಮೇಲೆ ಕೃಷ್ಣನ ಹಾಗೆ ಆಕ್ಟ್‌ ಮಾಡ್ತಿದ್ದಾನೆ.. ರಾಮಾಚಾರಿ ಸತ್ತು ಹೋಗಿದ್ದಾನೆ ಅನ್ನೋ ರೀತಿಯಲ್ಲಿ ಬಿಂಬಿಸಿದ್ದಾನೆ. ಆದ್ರೆ ಸತ್ತಿರೋದು ರಾಮಾಚಾರಿ ಅಲ್ಲ.. ಕೃಷ್ಣ ಅನ್ನೋದು ಚಾರು ಹಾಗೇ, ಮುರಾರಿಗೆ ಗೊತ್ತು.. ಇನ್ನೂ ಕೃಷ್ಣನ ಸಾವಿಗೆ ಕಾರಣ ಯಾರು ಎಂದು ಕೂಡ ಗೊತ್ತು.. ಈಗಾಗಲೇ ರಾಮಾಚಾರಿ ಕುತಂತ್ರಿಗಳ ಬಳಿ ಹೋಗಿ, ರಾಮಾಚಾರಿಯನ್ನ ನಾನೇ ಸಾಯಿಸ್ಬೇಕಿತ್ತು.. ಆದ್ರೆ ನೀವೇ ಸಾಯಿಸಿದ್ರಿ, ಒಳ್ಳೆಯದ್ದೇ ಆಯ್ತು ಅಂತ ಹೇಳಿದ್ದ. ಆತನ ಮಾತು ನಂಬಿದ ಕುತಂತ್ರಿಗಳು ಏನೆಲ್ಲಾ ನಡೀತು.. ರಾಮಾಚಾರಿಯನ್ನ ಸಾಯಿಸಿದ್ದು ಹೇಗೆ ಎಂದು ಬಾಯ್ಬಿಟ್ಟಿದ್ರು.. ಇತ್ತ ರುಕ್ಮಿಣಿ ಮನೆಗೆ ಬರ್ತಿದ್ದಂತೆ ಮುರಾರಿ ಸರಿಯಾಗೇ ಸಮಕ್‌ ಕೊಟ್ಟಿದ್ದಾನೆ.. ಇಲಿಗೆ ಹಾಕಿದ್ದ ಪಾಷಾಣವನ್ನ ರುಕ್ಮಿಣಿ ತಿಂದಿದ್ದಾಳೆ ಎಂದು ಮುರಾರಿ ಹೇಳಿದ್ದಾನೆ.. ಬಳಿಕ ಆಕೆ ಬದ್ಬೇಕಾದ್ರೆ ತಾನು ಹೇಳಿದ್ದೆಲ್ಲಾ ಮಾಡ್ಬೇಕು ಅಂತಿದ್ದಾನೆ.. ಒಂದ್ಕಡೆ ರುಕ್ಮಿಣಿಗೆ ತಾನು ಸಾಯ್ತೀನಿ ಅನ್ನೋ ಚಿಂತೆ ಶುರುವಾಗಿದೆ.. ಮತ್ತೊಂದ್ಕಡೆ ರುಕ್ಮಿಣಿಗೆ ದೆವ್ವದ ಕಾಟ ಶುರುವಾಗಿದೆ.. ಹೌದು.. ರುಕ್ಮಿಣಿ ರೂಮ್‌ಗೆ ರಾಮಾಚಾರಿ ದೆವ್ವದ ವೇಷ ಹಾಕಿಕೊಂಡು ಬಂದಿದ್ದಾನೆ.. ನನ್ನನ್ನ ಯಾರೆ ಚಾರು ಮೇಡಂನಿಂದ ದೂರ ಮಾಡಿದೆ.. ನಿನ್ನನ್ನ ಸುಮ್ನೆ ಬಿಡಲ್ಲ ಅಂತಾ ಹೇಳಿದ್ದಾನೆ.. ರಾಮಾಚಾರಿ ಮಾತು ಕೇಳಿದ ರುಕ್ಮಿಣಿ ಭಯಗೊಂಡಿದ್ದಾಳೆ.. ನನ್ನನ್ನ ಈ ದೆವ್ವ ಸಾಯಿಸದೇ ಸುಮ್ನೆ ಬಿಡಲ್ಲ ಅಂತಾ ಆತಂಕಗೊಂಡಿದ್ದಾಳೆ.

ಮತ್ತೊಂದ್ಕಡೆ, ಮಾನ್ಯತಾ ಚಾರುಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಮಾನ್ಯತಾ ನವದೀಪ್‌ ಜೊತೆ ಮಾತುಕತೆ ನಡೆಸಿದ್ದಾಳೆ. ನಿನ್ನ ಮಗನ ಜೊತೆ ಚಾರು ಜೊತೆ ಮದುವೆ ಮಾಡಿಸ್ಬೇಕು.. ಆಗ ನೀನು ಹೇಳಿದ ಕೆಲಸವನ್ನ ಮಾಡ್ತೀನಿ.. ನಾನು ಫೈಲ್‌ಗೂ ಸಿಗ್ನೇಚರ್‌ ಮಾಡ್ತೀನಿ ಅಂತಾ ಹೇಳಿದ್ದಾಳೆ.. ನವದೀಪ್‌ ಮಗನನ್ನ ಚಾರು ಮದುವೆ ಆಗ್ಬೇಕು. ಬಳಿಕ ಚಾರು ಫಾರಿನ್‌ ಗೆ ಹೋಗಿ ಸೆಟಲ್‌ ಆಗ್ಬೇಕು.. ಚಾರು ಜೊತೆ ತಾನೂ ವಿದೇಶಕ್ಕೆ ಹೋಗ್ಬೇಕು ಅಂತಾ ಪ್ಲ್ಯಾನ್‌ ಮಾಡಿದ್ದಾಳೆ.. ಬಳಿಕ ಈ ವಿಚಾರವನ್ನ ಚಾರು ಹತ್ರ ಕೂಡ ಹೇಳಿದ್ದಾಳೆ.. ಇದ್ರಿಂದಾ ಚಾರು ಆತಂಕಗೊಂಡಿದ್ದಾಳೆ. ಇದನ್ನ ರಾಮಾಚಾರಿ ಬಳಿ ಕೂಡ ಹೇಳಿದ್ದಾಳೆ.. ಇದೀಗ ಚಾರು ಮದುವೆಯನ್ನ ಮಾನ್ಯತಾ ಮಾಡಿಸ್ತಾ? ಮಾನ್ಯತಾ ಬೀಸಿರೋ ಬಲೆಯಿಂದ ಹೆಂಡ್ತಿಯನ್ನ ರಾಮಾಚಾರಿ ಹೇಗೆ ಕಾಪಾಡ್ತಾನೆ? ಸತ್ತಿರೋದು ಕೃಷ್ಣ.. ರಾಮಾಚಾರಿ ಅಂತಾ ಬಾಯ್ಬಿಡ್ತಾನಾ? ರುಕ್ಮಿಣಿ ಕತೆ ಏನು ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M