ಸಾವು ಗೆದ್ದು ಬಂದ ರಾಮಾಚಾರಿ.. ಕೃಷ್ಣ ಬಲಿ.. ಚಾರುಗೆ ಸತ್ಯ ಹೇಳ್ತಾನಾ? – ಗುಂಡು ಬಿದ್ರೂ ಚಾರಿ ಬದುಕಿದ್ಹೇಗೆ? 

ಸಾವು ಗೆದ್ದು ಬಂದ ರಾಮಾಚಾರಿ.. ಕೃಷ್ಣ ಬಲಿ.. ಚಾರುಗೆ ಸತ್ಯ ಹೇಳ್ತಾನಾ? – ಗುಂಡು ಬಿದ್ರೂ ಚಾರಿ ಬದುಕಿದ್ಹೇಗೆ? 

ವೀಕ್ಷಕರ ಲೆಕ್ಕಾಚಾರ ಸರಿಯಾಗೇ ಇದೆ.. ರಾಮಾಚಾರಿ ಸತ್ತಿಲ್ಲ.. ಸತ್ತಿದ್ದು ಕೃಷ್ಣ ಅಂತಾ ಹೇಳ್ತಾನೇ ಇದ್ರು.. ಇದೀಗ ಕಡೆಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾನೆ.. ಅಷ್ಟೇ ಅಲ್ಲ ಸತ್ತಿದ್ದು ನಾನಾಲ್ಲ.. ಕೃಷ್ಣ ಅನ್ನೋದನ್ನ ರಿವೀಲ್‌ ಮಾಡಿದ್ದಾನೆ.. ಇದೀಗ ತಮ್ಮನ ಸಾವಿಗೆ ಕಾರಣವಾದವರ ವಿರುದ್ಧ ಸಮರ ಸಾರಲು ರಾಮಾಚಾರಿ ಮುಂದಾಗಿದ್ದಾನೆ. ರಾಮಾಚಾರಿ ಸೇಡು ತೀರಿಸಿಕೊಳ್ಳೋದಂತೂ ಪಕ್ಕಾ.. ಇದೀಗ ರುಕ್ಮಿಣಿ, ಮಾನತ್ಯಾ, ನವದೀಪ್‌ ಸಕ್ಸೇನಾಗೆ ಮುಂದೈತೆ ಮಾರಿ ಹಬ್ಬ ಅಂತಾ ವೀಕ್ಷಕರು ಹೇಳ್ತಿದ್ದಾರೆ.

ಇದನ್ನೂ ಓದಿ: ಹೃದಯವಂತ ರಿಷಭ್ ಪಂತ್ – ಬಡ ವಿದ್ಯಾರ್ಥಿನಿ ಭವಿಷ್ಯಕ್ಕೆ ‘ಜ್ಯೋತಿ’

ರಾಮಾಚಾರಿ ಸೀರಿಯಲ್‌ ಈಗ ರೋಚಕ ಘಟ್ಟ ತಲುಪಿದೆ. ಶತ್ರುಗಳು ರಾಮಾಚಾರಿಯನ್ನ ಕೊಲ್ಲಬೇಕು ಅಂತ ಇಷ್ಟು ದಿನ ಹೊಂಚು ಹಾಕಿ ಕಾಯ್ತಾ ಇದ್ರು.. ಆದ್ರೆ ಎಷ್ಟೇ ಷಡ್ಯಂತರ ನಡೆಸಿದ್ರೂ ಕೂಡ ರಾಮಾಚಾರಿ ಬಚಾವ್‌ ಆಗ್ತಾ ಬಂದಿದ್ದಾನೆ. ಇದೀಗ ಮತ್ತೊಮ್ಮೆ ರಾಮಾಚಾರಿ ಸಾವನ್ನ ಗೆದ್ದಿದ್ದಾನೆ.. ರಾಮಾಚಾರಿ ಕಡೆಗೂ ಮನೆಗೆ ಬಂದಿದ್ದಾನೆ. ನಡೆದಿರೋ ಘಟನೆಯನ್ನ ಈಗ ಬಾಯ್ಬಿಟ್ಟಿದ್ದಾನೆ.. ನನ್ನನ್ನ ಉಳಿಸಲು ಕೃಷ್ಣ ಪ್ರಾಣ ತ್ಯಾಗ ಮಾಡಿದ್ದಾನೆ ಅನ್ನೋದನ್ನ ಮುರಾರಿ ಮುಂದೆ ಬಾಯಿಬಿಟ್ಟಿದ್ದಾನೆ.

ಇಷ್ಟು ದಿನ ರಾಮಾಚಾರಿ ಸತ್ತಿದ್ದಾನೆ ಅಂತಾನೇ ಸೀರಿಯಲ್‌ನಲ್ಲಿ ತೋರಿಸಲಾಗಿತ್ತು. ರಾಮಾಚಾರಿ ಅಂದ್ಕೊಂಡು ಅಂತಿಮ ಕಾರ್ಯ ಕೂಡ ಮಾಡಲಾಗಿದೆ. ರಾಮಾಚಾರಿ ಸತ್ತಿದ್ದಾನೆ ಅಂದ್ಕೊಂಡು ಕುತಂತ್ರಿಗಳು ಕೂಡ ಸಂಭ್ರಮಿಸುತ್ತಿದ್ದಾರೆ. ರುಕ್ಮಿಣಿ ಚಾರು ಮೇಲೆ ಸೇಡು ತೀರಿಸಿಕೊಳ್ಬೇಕು ಅಂತಾ ಕುಂಕುಮ ಅಳಿಸೋ ಶಾಸ್ತ್ರ ಕೂಡ ಮಾಡಿಸಿದ್ದಾಳೆ. ಆದ್ರೆ ವೀಕ್ಷಕರು ಆರಂಭದಿಂದಲೂ ರಾಮಾಚಾರಿ ಸತ್ತಿಲ್ಲ ಅಂತ ಹೇಳ್ತಾ ಬಂದಿದ್ರು. ಅದು ನಿಜವಾಗಿದೆ. ಇದೀಗ ರಾಮಾಚಾರಿ ಎಂಟ್ರಿಯಾಗಿದೆ. ರಾಮಾಚಾರಿ ಮನೆಗೆ ಬಂದು ತಾನು ಬಚಾವ್‌ ಆಗಿದ್ದು ಹೇಗೆ? ಕೃಷ್ಣ ಸತ್ತಿದ್ದು ಹೇಗೆ ಅನ್ನೋದನ್ನ ವಿವರವಾಗಿ ಹೇಳಿದ್ದಾನೆ..

ಹೌದು, ಚಾರು ತಂದೆಯನ್ನ ಬಿಡಿಸಲು ಹೋಗಿ ರಾಮಾಚಾರಿ ಕುತಂತ್ರಿಗಳ ಬಲೆಯಲ್ಲಿ ಸಿಲುಕಿಕೊಂಡಿದ್ದ.. ಇದು ಕೃಷ್ಣನಿಗೆ ಇದು ಗೊತ್ತಾಗಿದೆ.. ರಾಮಾಚಾರಿಗೆ ಇದನ್ನ ತಿಳಿಸ್ಬೇಕು ಅಂತ ಕೃಷ್ಣ ಹಿಂಬಾಲಿಸಿದ್ದ.. ಆದ್ರೆ ಅದು ಸಾಧ್ಯವಾಗಿಲ್ಲ..  ರಾಮಾಚಾರಿ ಫ್ಯಾಕ್ಟರಿಗೆ ಬರ್ತಿದ್ದಂತೆ ನವದೀಪ್‌ ರಾಮಾಚಾರಿಗೆ ಶೂಟ್‌ ಮಾಡಿದ್ದ. ಈ ವೇಳೆ ರಾಮಾಚಾರಿ ಹೇಗೋ ತಪ್ಪಿಸಿಕೊಂಡು ಹೋಗಿ ಬಚಾವ್‌ ಆಗಿದ್ದ. ರಾಮಾಚಾರಿಯನ್ನ ಆಟೋ ಚಾಲಕನೊಬ್ಬ ಆಸ್ಪತ್ರೆಗೆ ಸೇರಿಸಿ ಬಚಾವ್‌ ಮಾಡಿದ್ರು.. ಆದ್ರೆ ಅಲ್ಲಿಗೆ ಬಂದ ಕೃಷ್ಣ ಹೋಗಿ ಸಿಕ್ಕಾಕೊಂಡಿದ್ದಾನೆ. ಕೃಷ್ಣನನ್ನೇ ರಾಮಾಚಾರಿ ಅಂದ್ಕೊಂಡು ಮಾನ್ಯತಾ, ನವದೀಪ್‌ ಸಕ್ಸೇನಾ, ರುಕ್ಮಿಣಿ ಚಾಕು ಚುಚ್ಚಿದ್ದಾರೆ ಅನ್ನೋದನ್ನ ಮುರಾರಿ ಬಳಿ ಹೇಳಿದ್ದಾನೆ.. ಇದೀಗ ರಾಮಾಚಾರಿ ಬದುಕಿರೋ ವಿಚಾರ ಚಾರುಗೆ ಗೊತ್ತಾದ್ರೆ ಖುಷಿಯಲ್ಲಿ ತೇಲಾಡೋದು ಪಕ್ಕಾ.. ಮತ್ತೊಂದ್ಕಡೆ ರುಕ್ಮಿಣಿ ಚಾರುವನ್ನ ವಿಧವೆ ಆಗುವಂತೆ ಮಾಡಿ ಸೇಡು ತೀರಿಸಿಕೊಂಡೆ ಎಂದು ಸಂಭ್ರಮಿಸುತ್ತಿದ್ದಾಳೆ. ಇದೀಗ ಆಕೆಗೆ ಕೃಷ್ಣ ಬದುಕಿಲ್ಲ ಅನ್ನೋದು ಗೊತ್ತಾದ್ರೆ ಆಕೆ ಕತೆ ಏನಾಗಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಆದ್ರೆ  ರಾಮಾಚಾರಿ ತಮ್ಮನ್ನ ಸಾಯಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳೋದು ಪಕ್ಕಾ.. ಮುಂದಿನ ಎಪಿಸೋಡ್‌ನಲ್ಲಿ ರಾಮಾಚಾರಿ ಹೊಸ ಅವತಾರ ತಾಳೋ ಸಾಧ್ಯತೆ ಇದೆ. ಇನ್ಮುಂದೆ ಚಾರು ಗಂಡ ರೆಬಲ್‌ ರಾಮಾಚಾರಿಯಾಗೋ ಸಾಧ್ಯತೆ ಇದೆ.

Shwetha M