ಸತ್ತಿದ್ದು ಕಿಟ್ಟಿ.. ರಾಮಾಚಾರಿ ಎಲ್ಲಿ? – ಕೃಷ್ಣನನ್ನ ಸಾಯಿಸಿದ್ಲಾ ರುಕ್ಮಿಣಿ?
ಸಾಕಮ್ಮ.. ಚಾರು ನಿನ್ನ ಗೋಳಾಟ!

ಸತ್ತಿದ್ದು ಕಿಟ್ಟಿ.. ರಾಮಾಚಾರಿ ಎಲ್ಲಿ? – ಕೃಷ್ಣನನ್ನ ಸಾಯಿಸಿದ್ಲಾ ರುಕ್ಮಿಣಿ?ಸಾಕಮ್ಮ.. ಚಾರು ನಿನ್ನ ಗೋಳಾಟ!

ರಾಮಾಚಾರಿ ಬರ್ತಾನೆ.. ಅವ್ನಿಗೆ ಇಷ್ಟವಾಗಿದ ಅಡುಗೆ ಮಾಡುಕೊಡ್ಬೇಕು ಅಂತಾ ಕಾದು ಕುಳಿತಿದ್ದ ಚಾರುಗೆ ಈಗ ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಇದೀಗ ಗರ್ಭಿಣಿ ಚಾರುಗೆ ಗಂಡ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗಿದೆ. ರಾಮಾಚಾರಿ ಶವದ ಮುಂದೆ ಗೋಳಾಡ್ತಿದ್ದಾಳೆ ಚಾರುಲತಾ.. ರಾಮಾಚಾರಿ ಸತ್ತು ಹೋದ ಅನ್ನೋ ಖುಷಿಯಲ್ಲಿ ಕುತಂತ್ರಿಗಳು ಇದ್ದಾರೆ.. ಆದ್ರೀಗ ಸೀರಿಯಲ್‌ ಪ್ರೇಮಿಗಳ ವಾದ ಬೇರೆಯೇ.. ರಾಮಾಚಾರಿ ಸತ್ತಿರೋದು ಡೌಟ್.‌ ಕೃಷ್ಟ ಎಲ್ಲಿ ಹೋದ ಅಂತ ಸೀರಿಯಲ್‌ ಫ್ಯಾನ್ಸ್‌ ಕೇಳ್ತಿದ್ದಾರೆ.

ಇದನ್ನೂ ಓದಿ: ಡಿವೈನ್‌ ಸ್ಟಾರ್‌ ಹೊಸ ಸಿನಿಮಾ ಅನೌನ್ಸ್‌ – ರಿಷಭ್‌ ಶೆಟ್ಟಿ ಹೊಸ ಸಿನಿಮಾ ಯಾವುದು?

ರಾಮಾಚಾರಿ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ರಾಮಾಚಾರಿ ಚಾರುನಾ ಮದುವೆ ಆಗಿದ್ದಾಳೆ ಅನ್ನೋ ಕಾರಣಕ್ಕೆ ಮಾನ್ಯತಾಗೆ ಆತನ ಮೇಲೆ ದ್ವೇಷ.. ತನ್ನ ಮಗಳ ಜೀವನ ಹಾಳಾದ್ರೂ ಪರವಾಗಿಲ್ಲ. ರಾಮಾಚಾರಿನಾ ಸಾಯಿಸ್ಬೇಕು ಅಂತಾ ಮಾನ್ಯತಾ ಒಂದಲ್ಲ ಒಂದು ಕುತಂತ್ರ ಮಾಡ್ತಾನೇ ಇದ್ಲು.. ಆದ್ರೆ ಅದು ಸಕ್ಸಸ್‌ ಆಗಿಲ್ಲ.. ಇದೀಗ ಕುತಂತ್ರಿಗಳೆಲ್ಲಾ ಒಟ್ಟಾಗಿದ್ದಾರೆ. ಕೃಷ್ಣನ ಹೆಂಡ್ತಿ ರುಕ್ಮಿಣಿ, ನವದೀಪ್‌ ಸಕ್ಸೇನಾ ಎಲ್ಲಾ ಒಟ್ಟಾಗಿ ರಾಮಾಚಾರಿಯನ್ನ ಮುಗಿಸ್ಬೇಕು ಅಂತ ಪ್ಲ್ಯಾನ್‌ ಮಾಡಿದ್ರು.. ಅವ್ರು ಪ್ಲ್ಯಾನ್‌ ಪ್ರಕಾರವೇ ಎಲ್ಲ ನಡೆದಿದೆ. ರಾಮಾಚಾರಿ ಫ್ಯಾಕ್ಟರಿಗೆ ಬರ್ತಿದ್ದಂತೆ ಆತನನ್ನ ಕಟ್ಟಿಹಾಕಿ, ಚಾಕು ಚುಚ್ಚಿದ್ದಾರೆ. ಅದಾದ ಬಳಿಕ ರಸ್ತೆಗೆ ತಂದು ಬಿಟ್ಟಿದ್ದಾರೆ. ಇತ್ತ ಮನೆಯಲ್ಲಿ ರಾಮಾಚಾರಿಗಾಗಿ ಚಾರು ಕಾಯ್ತಾ ಇದ್ಲು.. ಆದ್ರೀಗ ರಾಮಾಚಾರಿ ಇಲ್ಲ ಅನ್ನೋ ಸುದ್ದಿ ಗರ್ಭಿಣಿ ಚಾರುಗೆ ಗೊತ್ತಾಗಿದೆ. ರಾಮಾಚಾರಿ ಬಾಡಿನಾ ಮನೆಗೆ ತಂದಿದ್ದು, ಚಾರು ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೀಗ ರಾಮಾಚಾರಿ ಸತ್ತಿಲ್ಲ.. ಇನ್ನೂ ಬದುಕಿದ್ದಾನೆ ಅನ್ನೋದು ವೀಕ್ಷಕರ ಬಲವಾದ ವಾದ..

ರಾಮಾಚಾರಿ ಹಾಗೂ ಕೃಷ್ಣ ಅವಳಿ – ಜವಳಿ. ನೋಡೋಕೆ ಒಂದೇ ತರಹ ಇದ್ದಾರೆ.  ಒಂದೇ ಡ್ರೆಸ್‌ ಹಾಕಿದ್ರೆ ಅವರಿಬ್ಬರಲ್ಲಿ ರಾಮಾಚಾರಿ ಯಾರು? ಕೃಷ್ಣ ಯಾರು ಅನ್ನೋದು ಗೊತ್ತಾಗಲ್ಲ.. ಬರ್ತ್‌ಡೇ ದಿನ ರಾಮಾಚಾರಿ ಹಾಗೂ ಕೃಷ್ಣ ಸೇಮ್‌ ಡ್ರೆಸ್‌ ಹಾಕೊಂಡಿದ್ರು.. ಇತ್ತ ರಾಜಿ ಕೂಡ ರಾಮಾಚಾರಿ ಅಂತ ಆತನನ್ನ ಫ್ಯಾಕ್ಟರಿಗೆ ಕರ್ಕೊಂಡು ಹೋಗಿದ್ದಾಳೆ.. ಅಲ್ಲಿಗೆ ತಲುಪ್ತಿದ್ದಂತೆ ರೌಡಿಗಳು ಆತನನ್ನ ಕಟ್ಟಿಹಾಕಿದ್ರು.. ಬಳಿಕ ಬಾಯಿಗೆ ಬಟ್ಟೆ ತುರುಕಿ, ಸರಿಯಾಗೇ ಹೊಡೆದಿದ್ದಾರೆ. ಹೀಗಾಗಿ, ಕೊಲೆಗಾರರಿಗೆ ರಾಮಾಚಾರಿ ಹಾಗೂ ಕೃಷ್ಣ ಮಧ್ಯೆ ವ್ಯತ್ಯಾಸ ಗೊತ್ತಾಗಲಿಲ್ಲ. ರುಕ್ಮಿಣಿಯಂತೂ ರಾಮಾಚಾರಿಯನ್ನ ಸಾಯಿಸ್ಬೇಕು ಅಂತ ತನ್ನ ಗಂಡನ ಬಗ್ಗೆ ಕೂಡ ಯೋಚಿಸಿಲ್ಲ.. ಸೇಡು ಸೇಡು ಅಂತ ಹೇಳ್ಕೊಂಡು ಚಾಕು ಚುಚ್ಚಿದ್ದಾಳೆ. ಆದ್ರೀಗ ಸತ್ತಿರೋದು ರಾಮಾಚಾರಿ ಅಲ್ಲ.. ಆತ ಬದುಕಿದ್ದಾನೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

ಹೌದು.. ಈ ಹಿಂದೆಯೇ ಜೋತಿಷಿಯೊಬ್ರು ರಾಮಾಚಾರಿ ಹಾಗೂ ಕೃಷ್ಣ ಜಾತಕ ನೋಡಿ ಆಘಾತಕಾರಿ ವಿಷಯ ಹೇಳಿದ್ರು. ಅವರಿಬ್ರು ಟ್ವಿನ್ಸ್‌ ಆಗಿದ್ರೂ ಒಟ್ಟಿಗೆ ಬದುಕೋ ಭಾಗ್ಯ ಇಲ್ಲ.. ಇದೇ ಕಾರಣಕ್ಕೋ ಏನೋ.. ಚಿಕ್ಕವಯಸ್ಸಿನಲ್ಲಿ ಜಾತ್ರೆ ವೇಳೆ ಕೃಷ್ಣ ತಪ್ಪಿಸಿಕೊಂಡು ಬೇರೆಡೆ ಬೆಳೆದ. ಮಾನ್ಯತಾ ಕೃಪೆಯಿಂದ ಕೃಷ್ಣ ವಾಪಸ್‌ ಮನೆ ಸೇರಿದ್ದ.. ಆದ್ರೀಗ ಕುತಂತ್ರಿಗಳು ರಾಮಾಚಾರಿಗೆ ಚೂರಿ ಚುಚ್ಚಿದಾಗಿನಿಂದ ಕೃಷ್ಣನ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗೇ ರಾಮಾಚಾರಿ ಸತ್ತಿಲ್ಲ ಅಂತ ವೀಕ್ಷಕರು ಹೇಳ್ತಿದ್ದಾರೆ.

ಹೌದು.. ಸೀರಿಯಲ್‌ ಹೆಸ್ರೇ  ರಾಮಾಚಾರಿ. ಸೀರಿಯಲ್‌ ಸ್ಟೋರಿ ಕೂಡ ರಾಮಾಚಾರಿ ಸುತ್ತವೇ ಇಷ್ಟು ದಿನ ಸಾಗ್ತಾ ಇತ್ತು.. ಹೀಗಾಗೇ ಸೀರಿಯಲ್‌ ಹೀರೋ ರಾಮಾಚಾರಿ ಸಾಯೋಕೆ ಸಾಧ್ಯ ಇಲ್ಲ..  ಒಂದ್ವೇಳೆ ರಾಮಾಚಾರಿ ಸತ್ತರೆ ‘ರಾಮಾಚಾರಿ’ ಸೀರಿಯಲ್ ಹೆಸರಿಗೆ ಅರ್ಥವೇ ಇಲ್ಲ.. ರಾಮಾಚಾರಿ ಸತ್ತರೆ ಕಥೆಯೇ ಎಂಡ್‌ ಆದಂತೆ ಲೆಕ್ಕಾ ಅಂತ ವೀಕ್ಷಕರು ಹೇಳ್ತಿದ್ದಾರೆ. ಇದೀಗ ರಾಮಾಚಾರಿ ಸತ್ತಿಲ್ಲ ಅಂದ್ರೆ ಆತ ಎಲ್ಲಿ? ರಾಮಾಚಾರಿಯನ್ನ ಯಾಕೆ ಸೀರಿಯಲ್‌ನಲ್ಲಿ ತೋರಿಸ್ತಿಲ್ಲ ಅಂತಾ ಸೀರಿಯಲ್‌ ಪ್ರೇಮಿಗಳು ಕೇಳ್ತಿದ್ದಾರೆ.. ಇನ್ನೂ ಕೆಲವರು ಆದಷ್ಟು ಬೇಗ ರಾಮಾಚಾರಿಯನ್ನ ತೋರಿಸಿ ಬಿಡಿ.. ತುಂಬು ಗರ್ಭಿಣಿ ಚಾರು ಗೋಳಾಟ ನೋಡೋಕೆ ಆಗಲ್ಲ.. ಅಂತ ಕಾಮೆಂಟ್‌ ಮಾಡ್ತಿದ್ದಾರೆ.

Shwetha M