ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ!? – ಹೀರೋ ಫಿನಿಶ್‌.. ಇದೆಂಥಾ ಟ್ವಿಸ್ಟ್‌ ?

ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ!? – ಹೀರೋ ಫಿನಿಶ್‌.. ಇದೆಂಥಾ ಟ್ವಿಸ್ಟ್‌ ?

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ರಾಮಾಚಾರಿ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ರಾಮಾಚಾರಿಯನ್ನ ಕೊಲ್ಲಲು ಮಾನ್ಯತಾ ಹಾಗೂ ನವದೀಪ್‌ ಸಕ್ಸೇನಾ ಪ್ಲ್ಯಾನ್‌ ಮಾಡ್ತಾ ಬಂದಿದ್ರು.. ಇದೀಗ ಕುತಂತ್ರಿಗಳು ಒಂದಾಗಿ ರಾಮಾಚಾರಿಗೆ ಚಾಚು ಇರಿದಿದ್ದಾರೆ.. ರಾಮಾಚಾರಿ ಇನ್ನಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಮನೆಯವರೆಲ್ಲಾ ಶೋಕ ಸಾಗರದಲ್ಲಿ ಮುಳುಗಿದ್ದಾರೆ.. ಆದ್ರೀ ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್‌ ಕಾದಿದ್ಯಾ ಅನ್ನೋ ಅನುಮಾನ ವೀಕ್ಷಕರಿಗೆ ಮೂಡಿದೆ.

ಇದನ್ನೂ ಓದಿ: ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡ್ತಿದ್ದ ಆಪ್‌ಗಳಿಗೆ ಶಾಕ್‌ -25 APP ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ!

ರಾಮಾಚಾರಿ ಸೀರಿಯಲ್‌ ಈಗ ಟ್ವಿಸ್ಟ್‌ ಅಂಡ್‌ ಟರ್ನ್‌ನಿಂದ ಕೂಡಿದೆ. ತನ್ನ ಮಗಳ ಜೀವನ ಹಾಳಾದ್ರೂ ಪರವಾಗಿಲ್ಲ. ರಾಮಾಚಾರಿಯನ್ನ ಮುಗಿಸ್ಬೇಕು ಅಂತಾ ಮಾನ್ಯತಾ ಆರಂಭದಿಂದಲೂ ಅಂದ್ಕೊಂಡಿದ್ಲು. ಆದ್ರೆ ಮಾನ್ಯತಾ ಏನೇ  ಪ್ಯಾನ್‌ ಮಾಡಿದ್ರೂ ಅದು ಅವಳಿಗೇ ಉಲ್ಟಾ ಹೊಡಿತಾ ಇತ್ತು. ಇದೀಗ ಕುತಂತ್ರಿ ಮಾನ್ಯತಾ ಜೊತೆ ನವದೀಪ್‌ ಸಕ್ಸೇನಾ ಸೇರಿಕೊಂಡಿದ್ದಾನೆ. ಆತ ಕೂಡ ರಾಮಾಚಾರಿಯನ್ನ ಕೊಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದ. ಆ ಪ್ಲಾನ್‌ ಪ್ರಕಾರ ರಾಜಿ ಎಂಬಾಕೆ ರಾಮಾಚಾರಿ ಮನೆ ಸೇರಿದ್ದಳು. ಇದೀಗ ಕುತಂತ್ರಿಗಳು ಸೇರಿಕೊಂಡು ರಾಮಾಚಾರಿಗೆ ಚಾಕು ಚುಚ್ಚಿದ್ದಾರೆ. ಇದೀಗ ಕುತಂತ್ರಿಗಳು ತಮ್ಮ ಪ್ಲ್ಯಾನ್‌ ಸಕ್ಸಸ್‌ ಆಯ್ತು ಅನ್ನೋ ಖುಷಿಯಲ್ಲಿದ್ದಾರೆ. ಆದ್ರೀಗ ಸೀರಿಯಲ್‌ ಡೈರೆಕ್ಟರ್‌ ಹೊಸ ಟ್ವಿಸ್ಟ್‌ ಕೊಟ್ರಾ? ರಾಮಾಚಾರಿ ಸತ್ತಿಲ್ವಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.

ನವದೀಪ್‌ ಹಾಗೂ ಮಾನ್ಯತಾ ಸೇರಿ ರಾಜಿ ಎಂಬಾಕೆಯನ್ನ ರಾಮಾಚಾರಿ ಮನೆಗೆ ಕಳುಹಿಸ್ರು. ಅದಾದ ಅಮೇಲೆ ರಾಜಿ ಅವ್ರ ತಾಳಕ್ಕೆ ತಕ್ಕಂತೆ ಕುಣಿದಿದ್ದಾಳೆ. ಅವ್ರ ಪ್ಲ್ಯಾನ್‌ನಂತೆ ರಾಮಾಚಾರಿಯನ್ನ ರಾಜಿ ಫ್ಯಾಕ್ಟರಿವೊಂದಕ್ಕೆ ಕರೆದುಕೊಂಡು ಬಂದಿದ್ಲು.. ಫ್ಯಾಕ್ಟರಿಯಲ್ಲಿ ಅದಾಗಲೇ ನವದೀಪ್, ಮಾನ್ಯತಾ ಹಾಗೂ ರುಕ್ಮಿಣಿ ಇದ್ದರು. ಬಳಿಕ ರಾಮಾಚಾರಿ ಹೊಟ್ಟೆಗೆ ನವದೀಪ್ ಸಕ್ಸೇನಾ, ರಾಜಿ ಹಾಗೂ ಮಾನ್ಯತಾ ಚೂರಿ ಚುಚ್ಚಿದ್ದಾರೆ. ಇದ್ರಿಂದಾಗಿ ರಾಮಾಚಾರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಇನ್ನು ಚಾರು ತುಂಬು ಗರ್ಭಿಣಿ.. ರಾಮಾಚಾರಿ ಹುಷಾರಾಗಿ ವಾಪಸ್ ಬರಲಿ ಅಂತ ಬೇಡಿಕೊಳ್ಳುತ್ತಿದ್ದಾಳೆ. ದೇವರಿಗೆ ದೀಪ ಹಚ್ಚಿದ್ಲು.. ಇತ್ತ ಪಾಪಿಗಳು ರಾಮಾಚಾರಿಗೆ ಚೂರಿ ಚುಚ್ಚುತ್ತಿದ್ದಂತೆ ಹಚ್ಚಿದ ದೀಪ ಆರಿಹೋಗಿದೆ. ಇತ್ತ ರಾಮಾಚಾರಿಯನ್ನ ರೋಡ್‌ನಲ್ಲಿ ಬಿಟ್ಟು ಹೋಗಿದ್ದಾರೆ. ಈ ವಿಚಾರವನ್ನ ರಾಮಾಚಾರಿ ಮನೆಗೆ ಯಾರೋ ಫೋನ್‌ ಮಾಡಿ ತಿಳಿಸಿದ್ದಾರೆ. ರಾಮಾಚಾರಿ ಇನ್ನಿಲ್ಲ ಅಂತ ಎಲ್ಲರು ಅತ್ತು ಗೋಳಾಡುತ್ತಿದ್ದಾರೆ. ಆದ್ರೆ ರಾಮಾಚಾರಿ ನಿಜಕ್ಕೂ ಸತ್ತಿದ್ದಾನಾ? ಬದುಕಿದ್ದಾನಾ? ಅಥವಾ ರಾಮಾಚಾರಿ ಬದಲು ಕೃಷ್ಣ ಅಲ್ಲಿಗೆ ಹೋಗಿದ್ನಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಮೂಡಿದೆ.

ರಾಮಾಚಾರಿ ಹಾಗೂ ಕೃಷ್ಣ ಅವಳಿ – ಜವಳಿ. ಇವರಿಬ್ರ ಹುಟ್ಟುಹಬ್ಬ ಬೇರೆ. ಇಬ್ಬರೂ ಒಂದೇ ಟಿ-ಶರ್ಟ್ ಧರಿಸಿದ್ರು.. ಹೀಗಾಗಿ ರಾಮಾಚಾರಿ ಬದಲು ಕೃಷ್ಣ ಫ್ಯಾಕ್ಟರಿಗೆ ಹೋದ್ನಾ? ಇಲ್ಲಿ ಏನಾದ್ರೂ ಪವಾಡ ಸಂಭವಿಸುತ್ತಾ? ರಕ್ತದ ಮಡುವಿನಲ್ಲಿ ಬಿದ್ದವನನ್ನ ಯಾರಾದ್ರೂ ಕಾಪಾಡ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಂದ್ವೇಳೆ ರಾಮಾಚಾರಿ ಸತ್ತು ಹೋಗಿದ್ರೆ ಸೀರಿಯಲ್‌ ಮುಗಿದಂಗೆ ಲೆಕ್ಕ.. ಬಿಗ್‌ಬಾಸ್‌ಗಾಗಿ ಈ ಸೀರಿಯಲ್‌ನ ಮುಗಿಸುತ್ತಿದ್ದಾ ಅನ್ನೋ ಅನುಮಾನ ಕೂಡ ವೀಕ್ಷಕರಿಗೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗೊತ್ತಾಗಲಿದೆ. ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ದೊಡ್ಡದಾಗೇ ಟ್ವಿಸ್ಟ್‌ ಕಾದಿದೆ.

Shwetha M