ತಲೆ ಬೋಳಿಸಿಕೊಂಡ ಚಾರು..! – ರಾಮಚಾರಿ ನಾಯಕಿಗೆ ಏನಾಯ್ತು?
ಮೌನ ಗುಡ್ಡೆಮನೆ ಈ ಸ್ಥಿತಿಗೇನು ಕಾರಣ?

ತಲೆ ಬೋಳಿಸಿಕೊಂಡ ಚಾರು..! – ರಾಮಚಾರಿ ನಾಯಕಿಗೆ ಏನಾಯ್ತು?ಮೌನ ಗುಡ್ಡೆಮನೆ ಈ ಸ್ಥಿತಿಗೇನು ಕಾರಣ?

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ತಲೆ ಬೋಳಿಸಿಕೊಳ್ಳೋ ಟಾಸ್ಕ್ ಇರುತ್ತೆ. ಬಹುತೇಕ ತಲೆ ಬೋಳಿಸಿಕೊಂಡ ಸ್ಪರ್ಧಿಗಳು ಗೆದ್ದಿದ್ದು ಇದೆ. ಈಗ ತಲೆಬೋಳಿಸಿಕೊಂಡಿರೋ ಒಂದು ದೃಶ್ಯ ಸೀರಿಯಲ್‌ನಲ್ಲೂ ಕಂಡು ಬಂದಿದೆ. ಇಲ್ಲಿ ತಲೆಬೋಳಿಸಿಕೊಂಡಿದ್ದು ಸೀರಿಯಲ್ ಹೀರೋಯಿನ್. ಹೌದು.. ರಾಮಚಾರಿ ಸೀರಿಯಲ್‌ನ ನಾಯಕಿ ಚಾರು ತಲೆಬೋಳಿಸಿಕೊಂಡಿದ್ದಾರೆ. ಈ ಸೀನ್ ಈ ಸೀರಿಯಲ್‌ಗೆ ಬೇಕಿತ್ತಾ?, ಇದು ಟಿಆರ್‌ಪಿ ಗಿಮಿಕ್ಕಾ? ನಿಜಕ್ಕೂ ಸೀರಿಯಲ್‌ಗೆ ಅವಶ್ಯಕತೆಯಿತ್ತಾ?, ಚಾರು ಮಾಡಿರೋ ಈ ದಿಟ್ಟ ನಿರ್ಧಾರಕ್ಕೆ ವೀಕ್ಷಕರ ರೆಸ್ಪಾನ್ಸ್ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಗುಡ್‌ನ್ಯೂಸ್‌ – LPG ಸಿಲಿಂಡರ್ ಬೆಲೆ ಇಳಿಕೆ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಕಥೆ ಎಲ್ಲೆಲ್ಲೋ ಸಾಗಿ, ಮತ್ತೆ ನಾರಾಯಣ ಆಚಾರ್ಯರ ಮನೆಗೆ ಬಂದು ನಿಂತಿದೆ. ಆ ಮನೆ, ಈ ಮನೆ ಅಂತಾ ಸುತ್ತಾಡಿದ ಚಿತ್ರಕಥೆ ಈಗ ಮನೆಯಲ್ಲೇ ಸುತ್ತುತ್ತಿದೆ. ಇದ್ರಲ್ಲೇ ಸ್ವಲ್ಪ ಚೇಂಜ್ ಇರಲಿ ಅಂತಾ ನಿರ್ದೇಶಕರು ಚಾರುವಿನ ತಲೆಯನ್ನೇ ಬೋಳಿಸಿದ್ದಾರೆ. ಹೌದು. ಚಾರು ಪಾತ್ರದಲ್ಲಿ ಮಿಂಚುತ್ತಿರುವ ಕಿರುತೆರೆ ನಟಿ ಮೌನ ಗುಡ್ಡೆಮನೆ ತಲೆ ಬೋಳಿಸಿಕೊಂಡ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೀರಿಯಲ್ ಕಥೆಗೆ ಅವಶ್ಯವಿರೋದ್ರಿಂದ  ಚಾರು ತಲೆ ಬೋಳಾಗಿದೆ.

ಜೈಲು ಸೇರಿದ್ದ ಹಿರಿಯ ಸೊಸೆ ವೈಶಾಖಾ ಈಗ ನಾರಾಯಣ ಆಚಾರ್ಯರ ಮನೆಗೆ ಮತ್ತೆ ಬಂದಿದ್ದಾಳೆ. ಹಿರಿ ಸೊಸೆ ಬಂದಿದ್ದಕ್ಕೆ ಮನೆಯಲ್ಲಿ ಸಂಭ್ರಮವಿದೆ. ಆದ್ರೆ, ಇದರಲ್ಲಿ ವೈಶಾಖಾಗೆ ವಿಲನ್ ರೋಲ್. ಹೀಗಾಗಿ ಮನೆ ಮಂದಿಗೆ ಇವಳ ಮೇಲೆ ನಂಬಿಕೆಯಂತೂ ಇಲ್ಲ. ಜೈಲಿಂದ ಬಂದ ವೈಶಾಖಾ, ಕಾಲಿಗೆ ಸ್ವಾಧೀನವಿಲ್ಲ ಎಂದು ನಾಟಕ ಮಾಡುತ್ತಿದ್ದಾಳೆ. ದೇವರಲ್ಲಿ ಹರಕೆ ಹೊತ್ತಿದ್ದೆ. ಈಗ ಪಾಲಿಸಲು ನನಗೆ ಶಕ್ತಿ ಇಲ್ಲ ಎಂದು ಚಾರು ಬಳಿ ವೈಶಾಖಾ ತನ್ನ ಬೇಸರ ತೋಡಿಕೊಳ್ತಾಳೆ. ಆಗ ಚಾರು , ಅಕ್ಕ ಹರಕೆ ಏನೇ ಇದ್ದರೂ ನಾನು ಮಾಡುತ್ತೀನಿ ಎಂದು ಮಾತು ಕೊಟ್ಟುಬಿಡುತ್ತಾಳೆ. ಮಾತು ಕೊಟ್ಟ ಮೇಲೆ ತಲೆ ಬೋಳಿಸಿಕೊಳ್ಳಬೇಕು, ಉಪವಾಸವಿದ್ದು ದೇವರ ಪೂಜೆ ಮಾಡಬೇಕು ಎಂದು ವೈಶಾಖಾ ಹೇಳುತ್ತಾಳೆ.

ಒಂದು ಕ್ಷಣವೂ ಯೋಚಿಸದೇ ಚಾರು, ಎಲ್ಲಾ ಹರಕೆ ನಾನೇ ತೀರಿಸ್ತಾನಿ ಅಂತಾ ತಲೆ ಬೋಳಿಸಿಕೊಳ್ತಾಳೆ. ಚಾರು ತಲೆ ಬೋಳಿಸಿಕೊಂಡಿರುವ ಸೀನ್ ಈಗ ವೈರಲ್ ಆಗ್ತಿದೆ. ಜೊತೆಗೆ ಸೀರಿಯಲ್ ಗೋಸ್ಕರ ಚಾರು ಈ ರೀತಿ ತಲೆ ಬೋಳಿಸಿಕೊಂಡಿರೋ ದೃಶ್ಯ ನಿರ್ವಹಿಸಿದ್ದಕ್ಕೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅದೇನೇ ಇದ್ರೂ ವೈಶಾಖಾ ತೋಡಿದ ಹಳ್ಳಕ್ಕೆ ಚಾರು ಬಿದ್ದಾಗಿದೆ. ಇತ್ತ ರಾಮಚಾರಿ, ಆಫೀಸ್‌ಲ್ಲಿ ಕೂತು ಚಾರು ಕೂದಲನ್ನೇ ಹೊಗಳುತ್ತಿದ್ದಾನೆ. ನನ್ ಹೆಂಡ್ತಿ ಕೂದಲೇ ಚೆಂದ, ಫ್ರೀ ಹೇರ್ ಬಿಟ್ರೂ ಬ್ಯೂಟಿಫುಲ್, ಚಾರು ಮುಂಗುರುಳು ಎಷ್ಟು ಚೆಂದ ಅಂತಾ ಬರೀ ಹೆಂಡ್ತಿ ಕೂದಲನ್ನೇ ಹೊಗಳುತ್ತಿದ್ದಾನೆ. ಇತ್ತ ಚಾರು, ನಾನು ದೇವರಿಗೆ ಮಾತು ಕೊಟ್ಟಿದ್ದೇನೆ, ಕೊಟ್ಟ ಮಾತಂತೆ ಮುಡಿ ಕೊಡ್ತೇನೆ ಅಂತಾ ಹಠ ತೊಟ್ಟ ಚಾರು ಮುಡಿ ತೆಗೆಸಿಕೊಳ್ತಾಳೆ. ಹೋಗಿರೋ ಕೂದಲು ಮತ್ತೆ ಬರುತ್ತೆ ಅನ್ನೋ ನಂಬಿಕೆ ಚಾರುವಿನದ್ದು. ಮನೆಯ ಒಳಿತಿಗಾಗಿ ಎಷ್ಟೆಲ್ಲಾ ಸಾಹಸ ಮಾಡಿದ ಚಾರು ಈಗ ಭಕ್ತಿಯಲ್ಲೇ ಮಿಂದೇಳುತ್ತಿದ್ದಾಳೆ. ಸಾಹಸಿ ಚಾರು ಈಗ ಅಪ್ಪಟ ದೈವ ಭಕ್ತೆಯಾಗಿ ಮುಡಿ ಕೊಟ್ಟಿದ್ದಾಳೆ.  ಇದೀಗ ಮುಂದಿನ ಎಪಿಸೋಡ್‌ಗಳಲ್ಲಿ ಚಾರು ಕೂದಲನ್ನ ಇಷ್ಟ ಪಡೋ ಗಂಡನಿಗೆ ಚಾರು  ನೋಡಿದಾಗ ಶಾಕ್ ಆಗುತ್ತಾ?, ವೈಶಾಖ ಅಂದುಕೊಂಡಂತೆ ಮಾತ್ರ ಆಗೋದು ಯಾಕೆ? ಕೃಷ್ಣಗೆ ಯಾಕೆ ಸತ್ಯ ಗೊತ್ತಾಗಲ್ಲ? ಚಾರುನಾ ಯಾಕೆ ತಡೆಯಲ್ಲಾ ಅನ್ನೋದೇ ವೀಕ್ಷಕರ ಮುಂದಿರುವ ಪ್ರಶ್ನೆ. ಮುಂದಿನ ದಿನಗಳಲ್ಲಿ ಸೀರಿಯಲ್‌ ಕತೆ ಎತ್ತ ಸಾಗುತ್ತೆ ಅಂತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *