ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ದರ ಡಬಲ್‌!

ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ದರ ಡಬಲ್‌!

ಎಲ್ಲೆಲ್ಲೂ ರಾಮನ ಜಪ ಶುರುವಾಗಿದೆ. ಕೋಟ್ಯಂತರ ಹಿಂದೂಗಳ ಆಶಯದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯಾ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ. 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ರಾಮನ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಆಯೋಧ್ಯೆಗೆ ತೆರಳುವ ವಿಮಾನದ ಟಿಕೆಟ್‌ ದರ ಡಬಲ್‌ ಆಗಿದೆ.

ಇದನ್ನೂ ಓದಿ: ಹೆಚ್ಚು ಓಡಿದವರಿಗೆ ಹೆಚ್ಚು ಬೋನಸ್‌ – ಉದ್ಯೋಗಿಗಳಿಗೆ ಬಂಪರ್‌ ಆಫರ್‌ ಘೋಷಿಸಿದ ಕಂಪನಿ!

ಹೌದು, ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ಅಯೋಧ್ಯೆಗೆ ತೆರಳಲಿದ್ದಾರೆ. ಅಂತೆಯೇ, ಮರ್ಯಾದ ಪುರುಷೋತ್ತಮ ಶ್ರೀ ರಾಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ನಾಮಾಂಕಿತವಾಗಿರುವ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನಗಳಿಗೆ ಭಾರೀ ಬೇಡಿಕೆ ಶುರುವಾಗಿವೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಗಗನಕ್ಕೇರಿದೆ.

ದೇಶದ ಒಳಗೆ ವಿವಿಧ ನಗರಗಳಿಂದ ಅಯೋಧ್ಯೆಗೆ ಇಂಡಿಗೋ ಏರ್‌ಲೈನ್ಸ್‌ ವಿಮಾನಗಳು ಸಂಚಾರ ನಡೆಸುತ್ತವೆ. ರಾಮಮಂದಿರ ಉದ್ಘಾಟನಾ ಸಮಾರಂಭ ಇರುವ ಜನವರಿ 21ರಂದು ಹಾಗೂ ಸುತ್ತಮುತ್ತಲ ಕೆಲ ದಿನ ಅಲ್ಲಿಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ ಹೆಚ್ಚಿದೆ. ಬಹುತೇಕ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಡಬಲ್ ಇದೆ. ದೆಹಲಿಯಲ್ಲಿ ಟಿಕೆಟ್ ಬೆಲೆ ಮೂರು ಪಟ್ಟು ಹೆಚ್ಚಿದೆ. ಜೈಪುರದಿಂದ ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆ 10,000 ರೂಗಿಂತ ಕಡಿಮೆ ಇರುತ್ತದೆ. ಆದರೆ, ಜನವರಿ 21ರಂದು ಟಿಕೆಟ್ ಬೆಲೆ 19,000 ರೂ ಇದೆ. ಜನವರಿ 23ರಂದು 30,000 ರೂ ಆಗಿದೆ.

  • ಜನವರಿ 21ರಂದು ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ಬೆಲೆಯ ವಿವರ ಇಲ್ಲಿದೆ..
  • ಮುಂಬೈನಿಂದ – 19,000 ರೂನಿಂದ 20,000 ರೂ; ಇತರ ದಿನಗಳಲ್ಲಿ ಸುಮಾರು 10,000 ರೂ
  • ಬೆಂಗಳೂರಿನಿಂದ – 22,000 ರೂ; ಇತರ ದಿನಗಳಲ್ಲಿ 12,000 ರೂ
  • ಚೆನ್ನೈನಿಂದ – 20,000 ರೂ; ಇತರ ದಿನಗಳಲ್ಲಿ 13,000 ರೂ
  • ದೆಹಲಿಯಿಂದ – 10,199 ರೂ; ಇತರ ದಿನಗಳಲ್ಲಿ 3,500 ರೂ
  • ಕೋಲ್ಕತಾದಿಂದ – 20,768 ರೂ; ಇತರ ದಿನಗಳಲ್ಲಿ 10,000 ರೂ
  • ಜೈಪುರದಿಂದ -ಜನವರಿ 21ಕ್ಕೆ ಟಿಕೆಟ್ ಬೆಲೆ 19,000 ರೂ ಇದೆ. ಜನವರಿ 23ಕ್ಕೆ 30,000 ರೂ ಇದೆ. ಬೇರೆ ದಿನಗಳಲ್ಲಿ ಫ್ಲೈಟ್ ಟಿಕೆಟ್ 10,000 ರೂಗಿಂತ ಕಡಿಮೆ ಇರುತ್ತದೆ.

Shwetha M