ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ
ಎಲ್ಲೆಲ್ಲೂ ಶ್ರೀರಾಮನ ಜಪ ಶುರುವಾಗಿದೆ. ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರದಲ್ಲಿ ಭಾಗಿಯಾಗಲಿರುವ ಮೋದಿ ಇಂದಿನಿಂದ 11 ದಿನಗಳ ವ್ರತ ಆರಂಭಿಸಿದ್ದಾರೆ.
ಇದನ್ನೂ ಓದಿ: ಎಷ್ಟು ಎಚ್ಚರಿಕೆ ನೀಡಿದ್ದರೂ ಬುದ್ಧಿ ಕಲಿಯದ ಹೌತಿಗಳು! – ಬಂಡುಕೋರರಿಗೆ ಖಡಕ್ ಎಚ್ಚರಿಕೆ ಕೊಟ್ಟ ಬೈಡನ್!
ಆಡಿಯೋ ಮೂಲಕ ದೇಶದ ಜನರಿಗೆ ಸಂದೇಶ ನೀಡಿದ ಮೋದಿ ಮೊದಲ ಬಾರಿಗೆ ನನ್ನ ಜೀವನದಲ್ಲಿ ಭಾವುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಸಮಾರಂಭದಲ್ಲಿ, ಈ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದರು.
ನಾನು 11 ದಿನ ವಿಶೇಷ ವ್ರತ ಆರಂಭಿಸುತ್ತೇನೆ. ಪ್ರಭು ಶ್ರೀರಾಮನು ಕಾಲ ಕಳೆದ ಪಂಚವಟಿಯ ನಾಸಿಕ್ ಧಾಮದಿಂದ ನಾನು ವ್ರತ ಆರಂಭಿಸುತ್ತೇನೆ. ಸ್ವಾಮಿ ವಿವೇಕಾನಂದರ ಜಯಂತಿಯಂದೇ ನಾನು ವ್ರತ ಆರಂಭಿಸುತ್ತಿರುವುದು ಪ್ರಮುಖ ಸಂಗತಿಯಾಗಿದೆ ಎಂದು ತಿಳಿಸಿದರು.