ಬಿಜೆಪಿ ಭೀಷ್ಮನಿಗೆ ಇದೆಂಥಾ ಅವಮಾನ? – ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸದೇ ಇರಲು ಕಾರಣ ಏನು?

ಬಿಜೆಪಿ ಭೀಷ್ಮನಿಗೆ ಇದೆಂಥಾ ಅವಮಾನ? – ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸದೇ ಇರಲು ಕಾರಣ ಏನು?

ಜನವರಿ 22ರಂದು ಭಾರತ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿ. ಕೋಟಿ ಕೋಟಿ ಹಿಂದೂಗಳ ಕನಸಿನ ರಾಮ ಮಂದಿರ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 4000 ಮಂದಿ ಸಂತರು ಮತ್ತು 2,200ಕ್ಕೂ ಅಧಿಕ ಅತಿಥಿಗಳು ಅಯೋಧ್ಯೆಗೆ ಆಗಮಿಸಲಿದ್ದಾರೆ. ಈವನ್ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕ್ರಿಕೆಟ್ ಲೆಜೆಂಡ್ಸ್ ಸಚಿನ್​ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕೂಡ ಗೆಸ್ಟ್ ಲಿಸ್ಟ್​ನಲ್ಲಿದ್ದಾರೆ. ಆದ್ರೆ ಆರಂಭದಲ್ಲಿ ಗೆಸ್ಟ್​ ಲಿಸ್ಟ್​ ರೆಡಿ ಮಾಡುವಾಗ ಬಿಜೆಪಿಯ ಇಬ್ಬರು ಪ್ರಮುಖ, ಹಿರಿಯ ನಾಯಕರನ್ನ ಲಿಸ್ಟ್​ನಿಂದ ಕೈ ಬಿಡಲಾಗಿತ್ತು. ಬಿಜೆಪಿ ಭೀಷ್ಮ ಎಲ್​​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ.. ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದಿದೆ ಅಂದ್ರೆ, ಅಷ್ಟೇ ಯಾಕೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಅಂದ್ರೆ ಅಡ್ವಾಣಿ ಮತ್ತು ಜೋಶಿ ಪಾತ್ರ ಅತ್ಯಂತ ದೊಡ್ಡ ಮಟ್ಟದಲ್ಲಿದೆ. ಆದ್ರೂ ಕೂಡ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಬ್ಬರೂ ನಾಯಕರನ್ನ ಆಹ್ವಾನಿಸದೇ ಇರಲು ರಾಮಮಂದಿರದ ಆಡಳಿತ ಮಂಡಳಿ ಮೊದಲಿಗೆ ತೀರ್ಮಾನಿಸಿತ್ತು. ಆದ್ರೆ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಲೇ ಮಂದಿರದ ಟ್ರಸ್ಟ್ ಯೂ ಟರ್ನ್ ಹೊಡೆದಿದೆ. ಹಾಗಿದ್ರೆ ಆರಂಭದಲ್ಲಿ ನಿಜಕ್ಕೂ ಅಡ್ವಾಣಿ ಮತ್ತು ಜೋಶಿಯವರನ್ನ ಉದ್ಘಾಟನೆಗೆ ಆಹ್ವಾನಿಸದೇ ಇರಲು ಕಾರಣ ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಶ್ರೀರಾಮನಿಗಾಗಿ ಸಿದ್ಧವಾಯ್ತು 108 ಅಡಿ ಉದ್ದದ ಊದುಬತ್ತಿ! –  ಅಯೋಧ್ಯೆಯಲ್ಲಿ 48 ದಿನ ಪರಿಮಳ ಬೀರಲಿದೆ ವಿಶೇಷ ಅಗರಬತ್ತಿ!

ಕೃಪಿಯಾ ನಾ ಆಯಿಯೇ.. ದಯವಿಟ್ಟು ಬರಬೇಡಿ.. ಇದು ಕೆಲ ದಿನಗಳ ಹಿಂದೆ ರಾಮಮಂದಿರ ಟ್ರಸ್ಟ್ ಬಿಜೆಪಿ ಧುರೀಣರಾದ ಎಲ್​​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್​​ ಜೋಶಿ ಮಾಡಿದ್ದಂಥಾ ಮನವಿ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸದಂತೆ ಇಬ್ಬರೂ ಹಿರಿಯ ನಾಯಕರಿಗೆ ಮನವಿ ಮಾಡಲಾಗಿತ್ತು. ನೀವು ಬರ್ಬೇಡಿ ಅಂತಾ ಕಡ್ಡಿ ತುಂಡು ಮಾಡಿದ ಹಾಗೆ ಹೇಳದಿದ್ರೂ, ಉದ್ಘಾಟನಾ ಕಾರ್ಯಕ್ರಮದ ದಿನ ನೀವು ಅಯೋಧ್ಯೆಯಲ್ಲಿ ಇರಬಾರದು ಅನ್ನೋ ಕ್ಲೀಯರ್​ ಮೆಸೇಜ್​​ನ್ನಂತೂ ಪಾಸ್ ಮಾಡಲಾಗಿತ್ತು. ಇಲ್ಲಿ ರಾಮಮಂದಿರದ ಆಡಳಿತ ಮಂಡಳಿ ಕೊಟ್ಟ ಕಾರಣ ಇಷ್ಟೇ. ಅಡ್ವಾಣಿ ಮತ್ತು ಜೋಶಿ ಇಬ್ಬರೂ ನಮ್ಮ ಕುಟುಂಬದ ಗೌರವಾನ್ವಿತ ಸದಸ್ಯರೇ. ಆದ್ರೆ, ಅವರ ಆರೋಗ್ಯ ಮತ್ತು ಇಳಿ ವಯಸ್ಸಿನ ಕಾರಣ ಉದ್ಘಾಟನಾ ಕಾರ್ಯಕ್ರಮಕ್ಕೆ  ಬಾರದಂತೆ ಮನವಿ ಮಾಡಿದ್ದೇವೆ. ಅದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ ಅಂತಾ ಮಂದಿರದ ಟ್ರಸ್ಟ್ ಹೇಳಿದೆ. ಎಲ್​.ಕೆ. ಅಡ್ವಾಣಿಗೆ ಈಗ 96 ವರ್ಷವಾಗಿದೆ. ಮುರಳಿ ಮನೋಹರ್ ಜೋಶಿಯವರಿಗೆ 90 ವರ್ಷವಾಗಿದೆ. ಆದ್ರೆ ಇಬ್ಬರೂ ಕೂಡ ತಾವಾಗಿಯೇ ಉದ್ಘಾಟನಾ ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತಾ ಎಲ್ಲೂ ಹೇಳಿಲ್ಲ. ಆ್ಯಕ್ಚುವಲಿ 96 ವರ್ಷದ ಎಲ್​.ಕೆ.ಅಡ್ವಾಣಿ ನವೆಂಬರ್​​ನಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಅಂತಾ ತಮ್ಮ ಇಚ್ಛೆಯನ್ನ ವ್ಯಕ್ತಪಡಿಸಿದ್ರು. ಆದ್ರೆ ರಾಮ ಮಂದಿರ ಆಡಳಿತ ಮಂಡಳಿ ಯೇಬರಬೇಡಿ ಅಂತಾ ಮನವಿ ಮಾಡಿಕೊಂಡಿದ್ದಕ್ಕೆ ಅಡ್ವಾಣಿ ಮತ್ತು ಜೋಶಿ ಒಪ್ಪಿಕೊಂಡಿದ್ರಷ್ಟೇ. ಆದ್ರೆ ಅದೇ 90 ವರ್ಷದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರನ್ನ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಸದ್ಯ ದೇವೇಗೌಡರು ವ್ಹೀಲ್​ಚೇರ್​​ನಲ್ಲೇ ಓಡಾಡ್ತಿದ್ದು, ಅಯೋಧ್ಯೆಯಲ್ಲೂ ವ್ಹೀಲ್​ಚೇರ್​ನ ವ್ಯವಸ್ಥೆ ಮಾಡೋದಾಗಿ ಮಂದಿರದ ಟ್ರಸ್ಟ್ ಹೇಳಿದೆ. ಇನ್ನು 88 ವರ್ಷದ ಬೌದ್ಧ ಧರ್ಮಗುರು ದಲೈ ಲಾಮಾರಿಗೂ ಆಹ್ವಾನ ನೀಡಲಾಗಿದೆ. ಆದ್ರೆ ಎಲ್​ಕೆ ಅಡ್ವಾಣಿ ಮತ್ತು ಜೋಶಿಯವರಿಗೆ ಮಾತ್ರ ಕಾರ್ಯಕ್ರಮ ಬಾರದಂತೆ ಮನವಿ ಮಾಡಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. ಯಾವಾಗ ಈ ವಿಚಾರ ಬಯಲಾಯ್ತೋ, ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಡ್ವಾಣಿ ಮತ್ತು ಜೋಶಿಯವರನ್ನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲೇಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಾಮಮಂದಿರ ಟ್ರಸ್ಟ್ ಕೂಡ ತನ್ನ ನಿರ್ಧಾರವನ್ನ ವಾಪಸ್ ಪಡೆದಿದ್ದು ಎಲ್​ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರನ್ನ ಆಹ್ವಾನಿಸೋಕೆ ನಿರ್ಧರಿಸಿದೆ. ಅಷ್ಟೇ ಅಲ್ಲ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಶರ್ಮಾ, ಆರ್​ಎಸ್​ಎಸ್ ಸೆಕ್ರೆಟರಿ ಕೃಷ್ಣ ಗೋಪಾಲ್ ಸೇರಿದಂತೆ ಕೆಲ ಪ್ರಮುಖ ಅಡ್ವಾಣಿಯವರನ್ನ ಭೇಟಿ ಮಾಡಿ ರಾಮಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಆಹ್ವಾನಿಸಿದ್ದಾರೆ. ಅಡ್ವಾಣಿಯವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಅಂತಾ ಒಪ್ಪಿಕೊಂಡಿದ್ದಾರೆ.

ಆದ್ರೆ ಮೋದಿ ಸರ್ಕಾರ ಮತ್ತು ರಾಮಮಂದಿರ ಟ್ರಸ್ಟ್ ಬಗ್ಗೆ ಎಲ್​.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರ ಆಪ್ತರು ತೀವ್ರ ಅಸಮಾಧಾನಗೊಂಡಿದ್ದಾರೆ. ಇಡೀ ರಾಮಮಂದಿರ ನಿರ್ಮಾಣದ ಕ್ರೆಡಿಟ್​ನ್ನ ತಾವೇ ಪಡೀಬೇಕು ಅಂತಾ ಅಂದುಕೊಂಡಿದ್ದಾರೆ. ಇಂದು ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ ಅಂದ್ರೆ ಅದಕ್ಕೆ ವಾಜಪೇಯಿ, ಅಡ್ವಾಣಿ, ಜೋಶಿಯವರ ಶ್ರಮವೇ ಕಾರಣ. ಆದ್ರೆ ಅಡ್ವಾಣಿ, ಜೋಶಿಯಂಥಾ ನಾಯಕರಿಗೆ ಸಲ್ಲಬೇಕಿರೋ ಕ್ರೆಡಿಟ್​​ನ್ನ ಕಿತ್ತೊಕೊಳ್ಳೋಕೆ ಯತ್ನಿಸಿರೋದು ಚೀಪ್ ಪಾಲಿಟಿಕ್ಸ್ ಅಂತಾ ಬಿಜೆಪಿ ಧುರೀಣರಿಬ್ಬರ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shwetha M