ರಾಮ್‌ಚರಣ್ ಅವಳಿ ಮಕ್ಕಳ ಹೆಸರು ರಿವೀಲ್ – ಮೆಗಾ ಫ್ಯಾಮಿಲಿಯಲ್ಲಿ ನಾಮಕರಣ ಮಹೋತ್ಸವದ ಸಂಭ್ರಮ

ರಾಮ್‌ಚರಣ್ ಅವಳಿ ಮಕ್ಕಳ ಹೆಸರು ರಿವೀಲ್ – ಮೆಗಾ ಫ್ಯಾಮಿಲಿಯಲ್ಲಿ ನಾಮಕರಣ ಮಹೋತ್ಸವದ ಸಂಭ್ರಮ

ಮೆಗಾ ಸ್ಟಾರ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳಾಗಿದ್ದು, ಈಗ ನಾಮಕರಣ ಕೂಡಾ ನಡೆದಿದೆ. ಜೊತೆಗೆ ಮುದ್ದಾದ ಮಕ್ಕಳ ಹೆಸರು ಕೂಡಾ ಅಭಿಮಾನಿಗಳ ಮನ ಗೆದ್ದಿದೆ.

ಇದನ್ನೂ ಓದಿ:ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್ – ಗೌತಮ್ ದಿವಾನ್ ಗ್ರೇಟ್ ಕಂಬ್ಯಾಕ್..!

ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದವು. ಇದೀಗ ರಾಮ್ ಚರಣ್ ತಮ್ಮ ಇಬ್ಬರು ಅವಳಿ ಮಕ್ಕಳ ಹೆಸರನ್ನ ರಿವೀಲ್ ಮಾಡಿದ್ದಾರೆ. ನಟ ರಾಮ್ ಚರಣ್ – ಉಪಾಸನಾ ಕೊನಿಡೇಲಾ ದಂಪತಿ ತಮ್ಮ ಅವಳಿ ಮಕ್ಕಳ ನಾಮಕರಣ ಸಮಾರಂಭವನ್ನ ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಾಮಕರಣ ಸಮಾರಂಭವನ್ನ ಅದ್ದೂರಿಯಾಗಿ, ಸಂಪ್ರದಾಯಬದ್ಧವಾಗಿ ನಡೆಸಿದ್ದಾರೆ. ರಾಮ್ ಚರಣ್- ಉಪಾಸನಾ ಮುದ್ದಾದ ಮಕ್ಕಳಿಗೆ ಶಿವರಾಮ್ ಕೊನಿಡೇಲಾ ಹಾಗೂ ಕಿರಿಯ ಮಗಳಿಗೆ ಅನ್ವೀರಾ ದೇವಿ ಕೊನಿಡೇಲಾ ಎಂದು ಹೆಸರಿಡಲಾಗಿದೆ.

ಮಗನ ಹೆಸರಿನಲ್ಲಿ ಶಿವ ಮತ್ತು ರಾಮ ಎಂಬ ಇಬ್ಬರು ದೇವರುಗಳ ಹೆಸರನ್ನು ಜೋಡಿಸಿ ಶಿವರಾಮ್ ಎಂಬ ಹೆಸರನ್ನು ಇಡಲಾಗಿದೆ. ರಾಮ್ ಚರಣ್ ತಂದೆ ಚಿರಜೀವಿ ಮೂಲ ಹೆಸರು ಶಿವ ಶಂಕರ ವರ ಪ್ರಸಾದ್. ಈಗ ಅಪ್ಪನ ಹೆಸರು ಶಿವ ಎಂಬ ಪದವನ್ನು ಮೊಮ್ಮಗನ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ರಾಮ್ ಚರಣ್ ಬಹಿರಂಗಪಡಿಸಿದ್ದಾರೆ. ರಾಮ್ ಚರಣ್ ತಮ್ಮ ಮಗಳಿಗೆ ಇಟ್ಟಿರುವ ಅನ್ವೀರಾ ದೇವಿ ಎಂಬ ಹೆಸರಿನ ಅರ್ಥವನ್ನ ಕೂಡ ವಿವರಿಸಿದ್ದಾರೆ. ಅನ್ವೀರಾ ದೇವಿ ಎಂದ್ರೆ ಅಪರಿಮಿತ ಧೈರ್ಯ ಮತ್ತು ದೈವತ್ವ. ವೀರ ಎಂದರೆ ಧೈರ್ಯ, ಅನ್ ಎಂದರೆ ಅಪರಿಮಿತ, ಮತ್ತು ದೇವಿ ಎಂದರೆ ದೈವಿಕ ಎಂದು ಮಗಳ ಹೆಸರ ಅರ್ಥವನ್ನ ರಾಮ್ ಚರಣ್ ವಿವರಿಸಿದ್ದಾರೆ.

Sulekha

Leave a Reply

Your email address will not be published. Required fields are marked *