ಮಗಳನ್ನು ಅಪ್ಪಿಕೊಂಡೇ ಮನೆಗೆ ಬಂದ ರಾಮ್‌ ಚರಣ್‌ – ದಂಪತಿ ಮುಖದಲ್ಲಿ ಸಂತಸ

ಮಗಳನ್ನು ಅಪ್ಪಿಕೊಂಡೇ ಮನೆಗೆ ಬಂದ ರಾಮ್‌ ಚರಣ್‌ – ದಂಪತಿ ಮುಖದಲ್ಲಿ ಸಂತಸ

ತೆಲುಗಿನ ಖ್ಯಾತ ನಟ ರಾಮ್‌ ಚರಣ್‌ ಹಾಗೂ ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಆ ಮಗುವನ್ನು ಮನೆಗೆ ಕರೆತರಲು ಇಡೀ ಕುಟುಂಬವೇ ಕಾಯುತ್ತಿತ್ತು. ಇದೀಗ ರಾಮ್‌ ಚರಣ್‌ ಮಗುವನ್ನು ಅಪ್ಪಿಕೊಂಡೇ ಮನೆಗೆ ಕರೆತಂದಿದ್ದಾರೆ.

ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಸಾಕಷ್ಟು ಅಭಿಮಾನಿಗಳು ರಾಮ್‌ ಚರಣ್‌ ಹಾಗೂ ಉಪಾಸನಾ ದಂಪತಿಗೆ ಶುಭಾಶಯ ತಿಳಿಸಿದ್ದರು. ಪೋಷಕರಾದ ರಾಮ್ ಚರಣ್ ಹಾಗೂ ಉಪಾಸನಾ ಮಗುವಿನೊಂದಿಗೆ ಮನೆಗೆ ಹೊರಟಿದ್ದಾರೆ. ಇದರ ಫೋಟೋಗಳು ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಏಕಕಾಲದಲ್ಲಿ ಮೂರು ಸಿನಿಮಾಗಳ ಶೂಟಿಂಗ್ – ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಫುಲ್ ಬ್ಯುಸಿ

ಆಸ್ಪತ್ರೆಯಿಂದ ಹೊರಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಖುಷಿಯನ್ನು ಅವರ ಖುಷಿಯಾಗಿ ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಬಳಿಕ ಮೆಗಾ ಕುಡಿಯನ್ನು ನೋಡಲು ಆಸ್ಪತ್ರೆ ಬಳಿ ಸೇರಿದ್ದ ಅಭಿಮಾನಿಗಳತ್ತ ರಾಮ್ ಚರಣ್-ಉಪಾಸನಾ ಕೈಬೀಸಿದ್ದಾರೆ.

ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು.

suddiyaana