ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್ ಹೊಡೆಯೋವ ಆಟ ಅಲ್ಲ. ಸಾವಿಗೆ ಎದೆಯೊಡ್ಡೋ ಆಟ! – ಪೆದ್ದಿ ಟೀಸರ್ ರಿಲೀಸ್!

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರಿಗೆ ಹಬ್ಬದ ಸಂಭ್ರಮ. ರಾಮ್ ಚರಣ್ ಅವರ 41ನೇ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದ ವಿಶೇಷ ಟೀಸರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು! – ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 3,600ರೂ.!
ರಾಮ್ ಚರಣ್ ಅವರು ನಟಿಸಿದ್ದ ಪೆದ್ದಿ ಸಿನಿಮಾದ ಟೀಸರ್ ಆಗಿದೆ. ಇದ್ರಲ್ಲಿ ರಾಮ್ ಚರಣ್ ಫುಲ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಕೆಲ ಟೀಸರ್ಗಳಲ್ಲಿ ಕ್ರಿಕೆಟರ್ ಆಗಿದ್ದ ರಾಮ್ ಚರಣ್ ಈಗ ಪೈಲ್ವಾನ್ ಆಗಿದ್ದಾರೆ. ಪೈಲ್ವಾನ್ ರೀತಿ ಹುರಿಗಟ್ಟಿದ ದೇಹಹೊಂದಿದ್ದು, ಕುಸ್ತಿ ಅಖಾಡದಲ್ಲೂ ಮಿಂಚಿದ್ದಾರೆ. ಅಲ್ಲದೇ ಧಾನ್ಯದ ಚೀಲಗಳನ್ನು ಎತ್ತಿ ಬಿಸಾಡುತ್ತಾ ದೈಹಿಕ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಆಂಜನೇಯನ ಗದೆಯಂಥಹಾ ವಸ್ತುವನ್ನು ತಿರುಗಿಸುತ್ತಾ ತಮ್ಮ ಭುಜಬಲ ಸಹ ಪ್ರದರ್ಶಿಸಿದ್ದಾರೆ. ಅಖಾಡದಲ್ಲಿ ಕುಸ್ತಿ ಸಹ ಮಾಡಿದ್ದಾರೆ.
ಟೀಸರ್‌ನಲ್ಲಿ, ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್ ಹೊಡೆಯೋವ ಆಟ ಅಲ್ಲ. ಸಾವಿಗೆ ಎದೆಯೊಡ್ಡೋ ಆಟ. ಈಗ್ ಹೇಳು, ಇರ್ತಿಯೋ? ಹೋಗ್ತೀಯೋ? ಎಂಬ ಹಿನ್ನೆಲೆ ದನಿಯೊಂದಿಗೆ ಗ್ಲಿಂಪ್ಸ್ ಆರಂಭವಾಗಿದೆ. ನಂತರ ಗ್ಲಿಂಪ್ಸ್ ರಾಮ್ ಚರಣ್ ಗದೆಯೊಂದಿಗೆ ಅಭ್ಯಾಸ ಮಾಡುತ್ತಿರುವುದನ್ನು ತೋರಿಸಿದೆ. ‘ನೋಡಪ್ಪಿ ಆಟನೇ ನನ್ನ ಪೊಗರು ಎಂದು ರಾಮ್ ಚರಣ್ ಹೇಳುವುದರೊಂದಿಗೆ ಈ 44 ಸೆಕೆಂಡುಗಳ ಗ್ಲಿಂಪ್ಸ್ ಪೂರ್ಣಗೊಂಡಿದೆ.
ಈ ಹಿಂದೆ ಬಿಡುಗಡೆ ಆಗಿದ್ದ ಪೆದ್ದಿ ಸಿನಿಮಾದ ಕೆಲವು ಟೀಸರ್, ಹಾಡುಗಳಲ್ಲಿ ರಾಮ್ ಚರಣ್ ಪಾತ್ರವನ್ನು ಹಳ್ಳಿಯ ಕ್ರಿಕೆಟರ್ ಪಾತ್ರವನ್ನಾಗಿ ತೋರಿಸಲಾಗಿತ್ತು. ಸದಾ ಬ್ಯಾಟು ಹಿಡಿದುಕೊಂಡೆ ಓಡಾಡುವ ಯುವಕನ ರೀತಿ ತೋರಿಸಲಾಗಿತ್ತು. ಆದರೆ ಈಗ ಪೈಲ್ವಾನ್ ರೀತಿ ತೋರಿಸಲಾಗಿದೆ. ಇದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದ್ದು, ಪೆದ್ದಿಸಿನಿಮಾನಲ್ಲಿ ರಾಮ್ ಚರಣ್ ಅವರದ್ದು ದ್ವಿಪಾತ್ರವಾ? ಅಥವಾ ತಂದೆ-ಮಗನ ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.
ಈ ಚಿತ್ರದಲ್ಲಿ ಕನ್ನಡದ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿ ಆಗಿದ್ದು ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ದಿವ್ಯೇಂದು ಶರ್ಮಾ, ಜಗಪತಿ ಬಾಬು ಮತ್ತು ಬೋಮನ್ ಇರಾನಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ಉಪ್ಪೆನ ಹೆಸರಿನ ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಈ ಚಿತ್ರವು ಏಪ್ರಿಲ್ 30, 2026 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನೋಡಿರಿ

