ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮೊದಲ ಪ್ರತಿಕ್ರಿಯೆ –ರಾಮಚರಣ್ ಮತ್ತುಉಪಾಸನಾ ಭಾವುಕರಾಗಿದ್ದು ಯಾಕೆ?

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮೊದಲ ಪ್ರತಿಕ್ರಿಯೆ –ರಾಮಚರಣ್ ಮತ್ತುಉಪಾಸನಾ ಭಾವುಕರಾಗಿದ್ದು ಯಾಕೆ?

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಈಗ ಸಂಭ್ರಮವೋ ಸಂಭ್ರಮ. ತೆಲುಗು ಸ್ಟಾರ್ ರಾಮಚರಣ್ ಮತ್ತು ಉಪಾಸನಾ ದಂಪತಿ ಇತ್ತೀಚಿಗೆ ಅವಳಿ ಮಕ್ಕಳು ಜನಿಸಿದ ಖುಷಿಯಲ್ಲಿದ್ದಾರೆ.ಈ ಮೊದಲು ರಾಮಚರಣ್ ದಂಪತಿಗೆ ಮುದ್ದಿನ ಮಗಳಿದ್ದಳು. ಇದೀಗ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆಯಿಂದ ಹಿಡಿದು ಆಸ್ಪತ್ರೆಯಲ್ಲಿ ನಡೆದ ಸಿದ್ಧತೆಗಳು, ಕುಟುಂಬದವರ ಬಗ್ಗೆ ಭಾವುಕರಾಗಿದ್ದಾರೆ ಉಪಾಸನಾ. ಈ ವಿಚಾರದ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಕ್ಕಸಪುರದೋಳ್ – ರಾಜ್ ಬಿ ಶೆಟ್ಟಿ VS ಅನಿರುದ್ಧ್ ಭಟ್ ಕಾಂಬಿನೇಷನ್ ಸೂಪರೋ ಸೂಪರ್

ತೆಲುಗು ನಟರಾಮ್ ಚರಣ್ ಮತ್ತು ಉಪಾಸನಾ ದಂಪತಿ ಜನವರಿ 31 ರಂದು ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಅವಳಿ ಮಕ್ಕಳು ಜನಿಸಿದ ನಂತರ ಉಪಾಸನಾ ಕೊನಿಡೆಲಾ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಅಪೋಲೋ ಆಸ್ಪತ್ರೆಗೆ ದಾಖಲು ಆಗಿರುವುದರಿಂದ ಹಿಡಿದು, ಮಕ್ಕಳು ಹುಟ್ಟಿ ಕುಟುಂಬ ಹಾಗೂ ಅಭಿಮಾನಿಗಳು ಸಂಭ್ರಮಿಸುವವರೆಗಿನ ಕ್ಷಣಗಳನ್ನು ಅವರು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಮ್ ಚರಣ್, ತಮ್ಮ ಪತ್ನಿ ಉಪಾಸನಾ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯಗಳಿವೆ. ಉಪಾಸನಾ ಅವರ ಹೆರಿಗೆಗಾಗಿ ವೈದ್ಯರ ತಂಡ ಸಿದ್ಧತೆ ನಡೆಸುತ್ತಿರುವುದನ್ನು ತೋರಿಸಲಾಗಿದೆ. ಇದೇ ವೇಳೆ, ಉಪಾಸನಾ ಅವರ ವೈಯಕ್ತಿಕ ಆಧ್ಯಾತ್ಮಿಕ ಗುರು ಮತ್ತು ಜ್ಯೋತಿಷಿ ಮಹೇಶ್ ಬಾಂಗ್ ಮಾತನಾಡಿರುವುದೂ ಈ ವಿಡಿಯೋದಲ್ಲಿದೆ. ಅಪೋಲೋ ಆಸ್ಪತ್ರೆಯ ನಿರ್ದೇಶಕ ಡಾ. ಕೆ ಸುಬ್ಬಾರೆಡ್ಡಿ ಅವರು ವಿವರಗಳನ್ನು ಹಂಚಿಕೊಂಡಿದ್ದಾರೆ. ಉಪಾಸನಾ ಅವರ ಸುರಕ್ಷಿತ ಹೆರಿಗೆಗಾಗಿ ಅಪೋಲೋ ಆಸ್ಪತ್ರೆಯಲ್ಲಿ 2 ವೈದ್ಯರ ತಂಡಗಳು ಕೆಲಸ ಮಾಡಿವೆ ಎಂದು ಅವರು ತಿಳಿಸಿದ್ದಾರೆ. ಡಾ. ಲತಾ ಮಾತನಾಡಿ, “ಖಂಡಿತವಾಗಿಯೂ ಒತ್ತಡವಿತ್ತು. ಯಾಕಂದ್ರೆ ಉಪಾಸನಾ ಅವರ ಸುರಕ್ಷಿತ ಹೆರಿಗೆ ಮತ್ತು ಅವರಿಗೆ ಆರೋಗ್ಯವಂತ ಮಕ್ಕಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿತ್ತು” ಎಂದು ಹೇಳಿದ್ದಾರೆ .

ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ, ಚಿರಂಜೀವಿ ಪತ್ರಿಕಾಗೋಷ್ಠಿ ನಡೆಸಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡ ಕ್ಷಣವನ್ನು ತೋರಿಸಲಾಗಿದೆ. ಹಾಗೆಯೇ, ಅಖಿಲ ಭಾರತ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ರವಣಂ ಸ್ವಾಮಿ ನಾಯ್ಡು ತಮ್ಮ ಸಂತಸ ವ್ಯಕ್ತಪಡಿಸಿದ ಮಾತುಗಳೂ ಈ ವಿಡಿಯೋದಲ್ಲಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಪಾಸನಾ, “ಈ ವಿಡಿಯೋ ನೋಡಿದಾಗಲೆಲ್ಲಾ ನನ್ನ ಹೃದಯ ತುಂಬಿ ಬರುತ್ತದೆ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತೇನೆ. ಅಪೋಲೋ ಆಸ್ಪತ್ರೆ ತಂಡಕ್ಕೆ ವಿಶೇಷ ಧನ್ಯವಾದಗಳು. ರಾಮ್ ಚರಣ್ ಅಭಿಮಾನಿಗಳು, ಹಿತೈಷಿಗಳು ಮತ್ತು ಆಪ್ತರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು” ಎಂದು ಭಾವುಕ ಪೋಸ್ಟ್ ಮಾಡಿದ್ದಾರೆ.ರಾಮಚರಣ್ ಮತ್ತು ಉಪಾಸನಾ ದಂಪತಿಗೆ ಈಗ ಮುದ್ದಾದ ಮೂವರು ಮಕ್ಕಳಿದ್ದಾರೆ. ಮೊದಲ ಮಗಳು ಜನಿಸಿದಾಗ ಕೂಡಾ ಕುಟುಂಬದಲ್ಲಿ ಸಂಭ್ರಮ ಹೇಗಿತ್ತು ಎಂಬ ವಿಡಿಯೋ ಹಂಚಿಕೊಂಡಿತ್ತು ಮೆಗಾಸ್ಟಾರ್ ಫ್ಯಾಮಿಲಿ.

Sulekha

Leave a Reply

Your email address will not be published. Required fields are marked *