ರಾಮ್‌ ಚರಣ್‌ ಮಗಳ ಹೆಸರು ಕ್ಲಿಕಾಕೊ! – ವಿಚಿತ್ರ ಹೆಸರಿನ ಅರ್ಥವೇನು ಗೊತ್ತಾ?

ರಾಮ್‌ ಚರಣ್‌ ಮಗಳ ಹೆಸರು ಕ್ಲಿಕಾಕೊ! – ವಿಚಿತ್ರ ಹೆಸರಿನ ಅರ್ಥವೇನು ಗೊತ್ತಾ?

ನಟ ರಾಮ್ ಚರಣ್‌ ತೇಜ ಹಾಗೂ ಉಪಾಸನಾ ದಂಪತಿಗಳು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಜೂ.20 ರಂದು ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿ ಹನ್ನೊಂದು ದಿನಗಳಾಗಿದ್ದು ಮಗುವಿನ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣ ಶಾಸ್ತ್ರ ನೆರವೇರಿದೆ. RRR ಹೀರೋ ಮಗಳಿಗೆ ಕ್ಲಿಕಾಕೊ ಹೆಸರು ನಾಮಕರಣ ಮಾಡಿದ್ದಾರೆ.

ರಾಮ್‌ ಚರಣ್‌ ಹಾಗೂ ಉಪಾಸನಾ ಅವರು ಮುದ್ದು ಮಗಳಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಜೂನ್ 30 ರಂದು ಮಗುವಿನ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣ ಶಾಸ್ತ್ರವನ್ನು ರಾಮ್ ಚರಣ್ ಹಾಗೂ ಉಪಾಸನಾ ಹಾಗೂ ಎರಡೂ ಕಡೆಯ ಕುಟುಂಬದವರು ನೆರವೇರಿಸಿದ್ದಾರೆ. ರಾಮ್–ಉಪಾಸನಾ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಆದಿವಾಸಿ ದೇವತೆ ಚೆಂಚುದೇವಿ ಹಾಗು ಬೋರಮ್ಮ ದೇವಿಯವರ ಆಶೀರ್ವಾದದೊಂದಿಗೆ ಕ್ಲಿನ್ ಕಾರಾ ಕೋನಿಡೇಲಾ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ‘ಕಿಸ್’ ಮನೆಯಲ್ಲಿ ಮಾಡಿಕೊಳ್ಳಿ, ಊರಿಗೆಲ್ಲಾ ಯಾರಿಗೆ ತೋರಿಸ್ತೀರಾ? – ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿಗೆ ಫುಲ್ ಕ್ಲಾಸ್

ಉಪಾಸನಾ ಅವರು ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ನಾಮಕರಣದ ಸಂತಸ ಕ್ಷಣಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಮಗಳ ಮುದ್ದಾದ ಹೆಸರು ಹಾಗೂ ಅದರ ಅರ್ಥವನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕ್ಲಿನ್ ಕಾರಾ ಎಂಬುದು ವಿದೇಶಿ ಹೆಸರಿನಂತೆ ಕೇಳುತ್ತದೆಯಾದರೂ ಹೆಸರಿನ ಹಿಂದೆ ಒಂದು ವಿಶೇಷತೆ ಇದೆ. ಕ್ಲಿನ್ ಕಾರಾ ಎಂಬ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಂಡಿದ್ದಾರಂತೆ. ಕ್ಲಿನ್ ಕಾರಾ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ ಎಂದು ವಿವರಣೆ ನೀಡಿದ್ದಾರೆ.  ಜೊತೆಗೆ ಮಗುವಿನ ಅಜ್ಜ-ಅಜ್ಜಿಯರಿಗೆ ಧನ್ಯವಾದವನ್ನು, ಪ್ರೀತಿಯನ್ನು ಅರ್ಪಿಸಿದ್ದಾರೆ.

ಉಪಾಸನಾ ಕೋನಿಡೆಲಾ, ಅಧ್ಯಾತ್ಮಕದ ಬಗ್ಗೆ, ಪಾಸಿಟಿವಿಟಿ ಬಗ್ಗೆ ಆಸಕ್ತಿವುಳ್ಳವರಾಗಿದ್ದಾರೆ. ಆಗಾಗ್ಗೆ ಅಧ್ಯಾತ್ಮದ ವಿಷಯಗಳನ್ನು, ಪಾಸಿಟಿವಿಟಿ ಬಗ್ಗೆ, ದೇಹಾರೋಗ್ಯ, ಮಾನಸಿಕ ಆರೋಗ್ಯದ ಬಗ್ಗೆ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಮ್ ಚರಣ್ ಸಹ ಅಧ್ಯಾತ್ಮದಲ್ಲಿ ಪಾಸಿಟಿವ್ ಎನರ್ಜಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರು ಇಬ್ಬರೂ ಸೇರಿ ತಮ್ಮ ಆಲೋಚನೆಗಳಿಗೆ ಹೊಂದುವ ಹೆಸರನ್ನೇ ಮಗಳಿಗೆ ಇರಿಸಿದ್ದಾರೆ. ‘ಕ್ಲೀಂಕಾರೀ’ ಹೆಸರು ಲಲಿತಾ ಸಹಸ್ರನಾಮದ 125 ನೇ ಪಾದದಲ್ಲಿ ಬರುತ್ತೆ, ಅದರಿಂದಲೇ ಸ್ಪೂರ್ತಿ ಪಡೆದು ಕ್ಲಿನ್ ಕಾರಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ ರಾಮ್-ಉಪಾಸನಾ.

ಉಪಾಸನಾರ ಇನ್​ಸ್ಟಾಗ್ರಾಂ ಪೋಸ್ಟ್‌ ಗೆ  ಪ್ರತಿಕ್ರಿಯಿಸಿರುವ ನೆಟ್ಟಿಗರು ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಕೆಲವರು ಇದೆಂಥಹಾ ಹೆಸರು ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಮಂತ್ರಗಳ ರೀತಿಯಲ್ಲಿಯೇ ತುಸು ಕ್ಲಿಷ್ಟವಾಗಿದೆ ಎಂದಿದ್ದಾರೆ.

suddiyaana