ರಕ್ಷಿತಾಳ R ಕೂಡ ನಿಮ್ಮಿಂದ ಆಗಲು ಸಾಧ್ಯವಿಲ್ಲ! – ಕಾಟ ಕೊಡಲು ಬಂದ ಧ್ರುವಂತ್ ಗೆ ರಕ್ಷಿತಾ ಕ್ಲಾಸ್!

ಬಿಗ್ ಬಾಸ್ ಮನೆ ಈಗ ರಣರಂಗವಾಗಿದೆ. ಒಂದ್ಕಡೆ ಟಾಸ್ಕ್ ವಿಚಾರವಾಗಿ ಮನೆ ಮಂದಿ ಕಿತ್ತಾಡ್ತಿದ್ರೆ, ಮತ್ತೊಂದ್ಕಡೆ ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ, ಧ್ರುವಂತ್ ಕಿತ್ತಾಟ ಜೋರಾಗಿದೆ. ಒಂದೊಂದು ವಿಚಾರ ಇಟ್ಕೊಂಡು ಧ್ರುವಂತ್ ರಕ್ಷಿತಾ ತಲೆ ತಿನ್ನುತ್ತಿದ್ದಾರೆ. ಇದ್ರಿಂದಾಗಿ ರಕ್ಷಿತಾಗೆ ತಲೆ ಕೆಟ್ಟುಹೋಗಿದೆ.
ಇದನ್ನೂ ಓದಿ: 66ನೇ ವಸಂತಕ್ಕೆ ಕಾಲಿಟ್ಟ ಹೆಚ್.ಡಿ. ಕುಮಾರಸ್ವಾಮಿ – ಪ್ರಧಾನಿ ಮೋದಿ ಶುಭಹಾರೈಕೆಗೆ ಭಾವುಕರಾದ ಕೇಂದ್ರ ಸಚಿವ
ರಕ್ಷಿತಾ ಹಾಗೂ ಧ್ರುವಂತ್ ಇಬ್ಬರ ಸ್ವಭಾವವೂ ತದ್ವಿದ್ಧ. ಧ್ರುವಂತ್ ರಕ್ಷಿತಾಳನ್ನ ಮೊದಲಿನಿಂದಲೂ ಟಾರ್ಗೆಟ್ ಮಾಡಿದ್ದಾರೆ. ಬೇಕಂತಲೇ ಕೆಣಕುತ್ತಾ ಬಂದಿದ್ದಾರೆ. ಇದೀಗ ಇಬ್ಬರನ್ನೂ ಒಂದೇ ರೂಮ್‌ನಲ್ಲಿ ಕೂರಿಸಲಾಗಿದೆ. ಇದೀಗ ಸೀಕ್ರೆಟ್ ರೂಮ್‌ನಲ್ಲೂ ಇಬ್ಬರು ಕಿತ್ತಾಡಲು ಶುರುಮಾಡಿದ್ದಾರೆ.
ರಕ್ಷಿತಾ ಧ್ರುವಂತ್ ಬಳಿ, ನೀವು ಯಾಕೆ ಇಷ್ಟು ಸ್ಟೈಲ್ ಮಾಡ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ಧ್ರುವಂತ್ ನನ್ನನ್ನು ನಾನು ಪ್ರೀತಿಸುತ್ತೇನೆ ಎಂದಿದ್ದಾರೆ. ಬಳಿಕ ನಿಮ್ಮನ್ನು ಸೀಕ್ರೆಟ್ ರೂಮ್‌ಗೆ ಹಾಕಿ ತಪ್ಪಾಯ್ತು ಎಂದು ಬಿಗ್‌ಬಾಸ್ ಸಹ ವಿಷಾದ ವ್ಯಕ್ತಪಡಿಸುತ್ತಿದ್ದಾರೆ ಎಂದು ಧ್ರುವಂತ್‌ಗೆ ರಕ್ಷಿತಾ ಹೇಳುತ್ತಾರೆ. ಅದಕ್ಕೆ ಸಿಟ್ಟಾದ ಧ್ರುವಂತ್ ರಕ್ಷಿತಾ ಮೇಲೆ ಕೂಗಾಡಿದ್ದಾರೆ. ನಿನ್ನ ಆಟಿಟ್ಯೂಡ್, ಬಿಹೇವ್ ಮಾಡುವ ರೀತಿ, ನಿನ್ನ ಒಳ್ಳೆಯದಕ್ಕೆ ಹೇಳಿದರೂ ನೀವು ಮಾಡುವ ವರ್ತನೆ ಸರಿಯಿಲ್ಲ ಎಂದು ರಕ್ಷಿತಾ ರೀತಿಯಲ್ಲಿಯೇ ಧ್ರುವಂತ್ ಮಾಡಿ ತೋರಿಸುತ್ತಾರೆ. ಇದರಿಂದ ಕೋಪಗೊಂಡ ರಕ್ಷಿತಾ, ಕ್ಯಾಮೆರಾ ತೋರಿಸಿ ನಿಮಗೆ ಫೂಟೇಜ್ ಬೇಕಾ ಎಂದು ಖಾರವಾಗಿ ಪ್ರಶ್ನೆ ಮಾಡುತ್ತಾರೆ. ಅಷ್ಟೇ ಅಲ್ಲ, ರಕ್ಷಿತಾ ರೀತಿ ಯಾಕೆ ಮಾಡ್ತಿದ್ದೀರಾ? ನೀವು ರಕ್ಷಿತಾ ಆಗಬೇಕಾ? ರಕ್ಷಿತಾಳ R ಕೂಡ ನಿಮ್ಮಿಂದ ಆಗಲು ಸಾಧ್ಯವಿಲ್ಲ ಎಂದು ಧ್ರುವಂತ್‌ಗೆ ಕ್ಲಾಸ್ ತೆಗೆದುಕೊಳ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧ್ರುವಂತ್, ಈ ಹಿಂದಿನ ಅಶ್ವಿನಿ ಜೊತೆಗಿನ ಜಗಳದ ಸನ್ನೆಯನ್ನು ಮಾಡಿ ತೋರಿಸುತ್ತಾರೆ. ಇದೀಗ ಇವರಿಬ್ಬರ ಕಿತ್ತಾಟ ಯಾವ ಹಂತಕ್ಕೆ ತಲುಪುತ್ತೆ ಅಂತಾ ಕಾದು ನೋಡ್ಬೇಕು.
ಇನ್ನು ಬಿಗ್ ಬಾಸ್ ಆರಂಭದಲ್ಲಿ ರಕ್ಷಿತಾ ಶೆಟ್ಟಿ ಇದ್ದಿದ್ದೇ ಬೇರೆ ತರ,ಮ ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಕಂಪ್ಲೀಟ್ ಚೇಂಜ್ ಆಗಿದ್ದಾರೆ ಎಂಬ ಮಾತಿದೆ. ಅದೆಷ್ಟರ ಮಟ್ಟಿಗೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಈಗ ಇಲ್ಲ. ಈ ಬದಲಾವಣೆಯನ್ನು ಧ್ರುವಂತ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಾಳು ಅವರನ್ನು ಸೇವ್ ಮಾಡಿ, ಕಾವ್ಯಾ ಅವರನ್ನು ನಾಮಿನೇಟ್ ಮಾಡಬೇಕು ಎಂಬುದು ರಕ್ಷಿತಾ ಶೆಟ್ಟಿ ವಾದ ಆಗಿತ್ತು. ಆದರೆ, ಈ ವಾದವನ್ನು ಧ್ರುವಂತ್ ಅವರು ಒಪ್ಪಿಲ್ಲ. ಮಾಳುಗೆ ಹೋಲಿಸಿದರೆ ಕಾವ್ಯಾ ಸಮರ್ಥ ವ್ಯಕ್ತಿ. ಅವರನ್ನು ನಾಮಿನೇಟ್ ಮಾಡೋದು ಸರಿ ಅಲ್ಲ ಎಂದು ಧ್ರುವಂತ್ ವಾದ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈ ರೀತಿ ಹೇಳಲು ಒಂದು ಕಾರಣ ಇದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಗಿಲ್ಲಿ ಹಾಗೂ ಕಾವ್ಯಾ ಒಟ್ಟಾಗಿ ಸಮಯ ಕಳೆಯುತ್ತಾರೆ. ಈ ಕಾರಣದಿಂದಲೇ ಕಾವ್ಯಾ ಬಗ್ಗೆ ರಕ್ಷಿತಾ ದ್ವೇಷ ಕಾರುತ್ತಿದ್ದಾರೆ ಎಂಬುದು ಕೆಲವರ ವಾದ. ಇನ್ನು ಎದುರಿನವರು ಏನಾದರೂ ಹೇಳುವಾಗ ರಕ್ಷಿತಾ ಶೆಟ್ಟಿ ಓಡೋಡಿ ಹೋಗುತ್ತಾರೆ. ಮಾತನ್ನು ಕೇಳಿಸಿಕೊಳ್ಳುವುದೇ ಇಲ್ಲ. ಈ ವಿಷಯವನ್ನು ಧ್ರುವಂತ್ ಅವರು ಎತ್ತಿ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ ಅವರು ನಿದ್ದೆ ಮಾಡುತ್ತಿದ್ದರು. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಈ ವೇಳೆ ಧ್ರುವಂತ್ ಒಂದೇ ಮಾತನ್ನು ಹೇಳಿದರು. ‘ನೀನು ಜನರನ್ನು ಮಂಗ ಮಾಡಬಹುದು ಆದರೆ, ಬಿಗ್ ಬಾಸ್ನ ಅಲ್ಲ’ ಎಂದಿದ್ದಾರೆ. ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನೋಡಿರಿ

