ರಾಶಿಕಾಗೆ ಹೊಡೆದ ರಕ್ಷಿತಾ? – ನಾಮಿನೇಷನ್‌ನಲ್ಲಿ ನಡೆಯಿತು ದೊಡ್ಡ ಹೈಡ್ರಾಮಾ!

ರಾಶಿಕಾಗೆ ಹೊಡೆದ ರಕ್ಷಿತಾ? – ನಾಮಿನೇಷನ್‌ನಲ್ಲಿ ನಡೆಯಿತು ದೊಡ್ಡ ಹೈಡ್ರಾಮಾ!

ಬಿಗ್‌ಬಾಸ್‌ ಮನೆಯಲ್ಲಿ ವೀಕ್‌ ಕಂಟೆಸ್ಟೆಂಟ್‌ ಅನಿಸಿಕೊಂಡಿದ್ದ ಸ್ಪದಂನಾ ಕಡೆಗೂ ಎಲಿಮಿನೇಟ್‌ ಆಗಿದ್ದಾರೆ. ಸ್ಪಂದನಾ ದೊಡ್ಮನೆಯಿಂದ ಔಟ್‌ ಆಗ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಫಿನಾಲೆ ವೀಕ್‌ಗೆ ಒಂದೇ ವಾರ ಇರುವಾಗಲೇ ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ಫೈಟ್‌ ನಡೆದಿದೆ. ರಾಶಿಕಾ, ರಕ್ಷಿತಾಳನ್ನ ನಾಮಿನೇಟ್‌ ಮಾಡ್ತಿದ್ದಂತೆ ರಕ್ಷಿತಾ ತಾಳ್ಮೆ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ಇನ್ನಿಲ್ಲ! – ಹೋಗೋ ಮುಕ್ಕಾ ಅಂತ ಪ್ರೇಕ್ಷಕರ ರಂಜಿಸಿದ ಸಿಂಗ್ರೀಗೌಡ ಇನ್ನು ನೆನಪು ಮಾತ್ರ! 

ಬಿಗ್‌ಬಾಸ್‌ ನಾಮಿನೇಷನ್‌ ಪ್ರಕ್ರಿಯೆಗೆ ಒಂದು ಟಾಸ್ಕ್‌ ನೀಡಿದ್ರು. ಒಬ್ಬ ಸದಸ್ಯರನ್ನ ನಾಮಿನೇಟ್‌ ಮಾಡಿ, ಬಾಲ್‌ಗೆ ಅವರ ಫೋಟೋವನ್ನ ಅಂಟಿಸಿ ಮನೆಯಿಂದ ಹೊರ ಹೋಗುವಂತೆ ಕಿಕ್‌ ಔಟ್‌ ಮಾಡಬೇಕು ಎಂದು ಬಿಗ್‌ಬಾಸ್‌ ತಿಳಿಸಿದ್ದಾರೆ. ಈ ವೇಳೆ ರಾಶಿಕಾ ಅವರು ರಕ್ಷಿತಾ ಹೆಸರನ್ನು ಸೂಚಿಸಿದರು. ವಾರ ಪೂರ್ತಿ ರಕ್ಷಿತಾ ತುಂಬಾ ಚೆನ್ನಾಗಿ ಮಾತಾಡ್ತಾರೆ. ವೀಕೆಂಡ್‌ ಬಂದಾಗ ಏನು ಮಾತಾಡಬೇಕು ಅದು ನಿಮಗೆ ಅರ್ಥ ಆಗಲ್ಲ. ಆಚೆ ಕಡೆನೂ ಗೊತ್ತಾಗಿದೆ. ನಮ್ಮ ಮನೆಯವರಿಗೆ ಗೊತ್ತಾಗಿದೆ. ಎಷ್ಟು ಮ್ಯಾನುಪುಲೆಟ್‌ ಹಾಗೂ ನಾಟಕ ಇದ್ದೀರಿ ಅನ್ನೋದು ಎಂದು ಹೇಳಿದ್ದಾರೆ. ಈ ಮಾತು ಕೇಳಿ ರಕ್ಷಿತಾ ಫುಲ್‌ ಗರಂ ಆಗಿದ್ದಾರೆ.

ನಿಮಗೆ ಫ್ಯಾಮಿಲಿ ಬಂದು ಎಲ್ಲವನ್ನು ಹೇಳಿಕೊಟ್ಟಿದ್ರಾ ಎಂದು ಕೇಳಿದ್ದಾರೆ ರಕ್ಷಿತಾ. ಫ್ಯಾಮಿಲಿಯನ್ನ ಮಧ್ಯಕ್ಕೆ ತರಬೇಡ ಅಂತ ರಕ್ಷಿತಾ ಮೇಲೆ ಗರಂ ಆಗಿದ್ದಾರೆ ರಾಶಿಕಾ. ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಹೋಗಿದ್ದಾರೆ.

ಇನ್ನು ಸುದೀಪ್ ಅವರು ಸಹ ಈ ವಾರದ ಎಲಿಮಿನೇಷನ್ ಅನ್ನು ಸರಳವಾಗಿಯೇ ಮುಗಿಸಿದರು. ಈ ಹಿಂದಿನ ಕೆಲ ವಾರ ಬೇರೆ ಬೇರೆ ರೀತಿಯಲ್ಲಿ ಎವಿಕ್ಷನ್ ಅನ್ನು ಕೆಲ ಆಕ್ಟಿವಿಟಿಗಳ ಮೂಲಕ ಮಾಡಲಾಗಿತ್ತು. ನಾಮಿನೇಷನ್​​ನಿಂದ ಸೇಫ್ ಆಗುವುದಕ್ಕೂ ಆಕ್ಟಿವಿಟಿ ನೀಡಲಾಗಿತ್ತು. ಆದರೆ ಈ ವಾರ ಅದೇನೂ ಇಲ್ಲದೆ, ಬಹಳ ಸರಳವಾಗಿ ಸ್ಪಂದನಾರ ಹೆಸರು ಹೇಳುವ ಮೂಲಕ ಎವಿಕ್ಷನ್ ಪ್ರಕ್ರಿಯೆ ಪೂರ್ಣ ಮಾಡಲಾಯ್ತು. ಸ್ಪಂದನಾ ಇಷ್ಟ ದಿನ ಚೆನ್ನಾಗಿಯೇ ಆಡಿದರು. ಯಾರೊಟ್ಟಿಗೂ ವೈರತ್ವ ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೂ ಬಾಂಧವ್ಯ ಇರಿಸಿಕೊಂಡು, ಸ್ನೇಹದೊಂದಿಗೆ ಆಟ ಆಡಿದರು. ಧನುಶ್, ಕಾವ್ಯಾ ಜೊತೆಗೆ ವಿಶೇಷ ಬಂಧ ಇರಿಸಿಕೊಂಡಿದ್ದ ಸ್ಪಂದನಾ, ರಘು, ಗಿಲ್ಲಿ ಅವರಿಗೂ ಗೆಳೆಯರಾಗಿದ್ದರು. ಆದರೆ ರಕ್ಷಿತಾ ಜೊತೆಗೆ ಕಳೆದ ಕೆಲ ವಾರಗಳಿಂದಲೂ ವೈರತ್ವ ಬೆಳೆಸಿಕೊಂಡಿದ್ದರು.

Shwetha M