ರಕ್ಷಿತಾಗೆ ಅತಿರೇಕದ ವರ್ತನೆಯೇ ಮುಳುವಾಯ್ತಾ? – ಬ್ಯಾಕ್‌ ಟು ಬ್ಯಾಕ್‌ ಎಡವಟ್ಟು.. ರಕ್ಷಿತಾಗೆ ಕ್ಲಾಸ್‌ ಫಿಕ್ಸ್‌

ರಕ್ಷಿತಾಗೆ ಅತಿರೇಕದ ವರ್ತನೆಯೇ ಮುಳುವಾಯ್ತಾ? – ಬ್ಯಾಕ್‌ ಟು ಬ್ಯಾಕ್‌ ಎಡವಟ್ಟು.. ರಕ್ಷಿತಾಗೆ ಕ್ಲಾಸ್‌ ಫಿಕ್ಸ್‌

ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಆಟವನ್ನ ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗ್ತಿಲ್ಲ. ಈಕೆ ಕ್ಷಣಕ್ಕೊಮ್ಮೆ ಬದಲಾಗ್ತಿದ್ದಾರೆ. ಒಮ್ಮೆ ಕೂಲ್‌ ಆಗಿ ಇದ್ರೆ, ಮತ್ತೊಂದ್ಸಲ ಅತಿರೇಕದ ವರ್ತನೆ ತೋರುತ್ತಿದ್ದಾರೆ. ಇದೀಗ ರಕ್ಷಿತಾ ಆಟಕ್ಕೆ ಆಕೆ ವರ್ತನೆಯೇ ಮುಳುವಾಯ್ತಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ಇದನ್ನೂ ಓದಿ: ಸೂರ್ಯನಿಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದ್ದೀನಿ ಚಿನ್ನ! – ಡೆವಿಲ್‌ನಲ್ಲಿ ದಾಸನ ಮಾಸ್‌ ಡೈಲಾಗ್‌ಗೆ ಫ್ಯಾನ್ಸ್‌ ಥ್ರಿಲ್!

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮೊದಲ ದಿನದಿಂದಲೇ ಹೈಲೈಟ್‌ ಆಗಿದ್ದಾರೆ. ಮೊದಲ ದಿನ ಇವಿಕ್ಟ್‌ ಆಗಿದ್ದ ರಕ್ಷಿತಾ ಪರವಾಗಿ ವೀಕ್ಷಕರು ಧನಿ ಎತ್ತಿದ್ರು. ಮನೆ ಮಂದಿ ಆಕೆಗೆ ಕಾಟ ಕೊಟ್ಟಾಗಲು ಆಕೆ ಪರ ಜನರು ಧ್ವನಿ ಎತ್ತಿದ್ರು. ಪ್ರತಿವಾರ ನಾಮಿನೇಟ್‌ ಆದಾಗಲೂ ರಕ್ಷಿತಾಗೆ ವೋಟ್‌ ಹಾಕಿ ಜನ ಉಳಿಸಿಕೊಂಡಿದ್ರು. ಆದ್ರೀಗ ರಕ್ಷಿತಾ ಇದನ್ನೇ ಅಡ್ವಾಂಟೇಜ್‌ ಆಗಿ ತೆಗೆದುಕೊಂಡ್ರಾ ಅನ್ನೋ ಅನುಮಾನ ವೀಕ್ಷಕರನ್ನ ಕಾಡಿದೆ. ಯಾಕಂದ್ರೆ ಈ ವಾರ ರಕ್ಷಿತಾ ಅತಿರೇಕದ ವರ್ತನೆ ತೋರಿದ್ದಾರೆ.

ಈ ವಾರ ಕಾವ್ಯ ಅವರನ್ನು ನಾಮಿನೇಟ್‌ ಮಾಡುವಾಗ, ರಕ್ಷಿತಾ ಶೆಟ್ಟಿ ಸಾಕಷ್ಟು ಹೈಡ್ರಾಮಾ ಸೃಷ್ಟಿಸಿದರು. ಸ್ಟ್ರಾಟೆಜಿ ಏನು ಅಂತ ಗೊತ್ತಿಲ್ಲದೆ ಕಾವ್ಯ ಅವರನ್ನ ರಕ್ಷಿತಾ ಶೆಟ್ಟಿ ಡೇಂಜರ್ ಝೋನ್‌ಗೆ ತಳ್ಳಿದ್ದರು. ಈ ಬಗ್ಗೆ ಮನೆಯಲ್ಲಿ ಚರ್ಚೆಗಳೂ ನಡೆದಿತ್ತು. ಅಷ್ಟೇ ಅಲ್ಲ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ರಕ್ಷಿತಾ ನಿಯಮ ಉಲ್ಲಂಘಟನೆ ಮಾಡಿದ್ರು. ಬಳಿಕ ತಾಳ್ಮೆ ಕಳೆದುಕೊಂಡು ಧ್ರುವಂತ್‌ ಮೇಲೆ ಕೂಗಾಡಿದ್ರು. ಇದರ ಜೊತೆಗೆ ಉಳಿದವರು ಏನೂ ಹೇಳಿದರೂ ಕೇಳದೆ, ವ್ಯಂಗ್ಯ ಮಾಡಿದ್ದರು. ಆಮೇಲೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿದ್ದ ನೀರಿನಲ್ಲಿ ಕೋಲಿನಿಂದ ಹೊಡೆದಿದ್ದರು. ನಿಲ್ಲಿಸು ಎಂದರೂ ಕೂಡ ಅವರು ಕೇಳಲಿಲ್ಲ. ಇದೆಲ್ಲವೂ ರಕ್ಷಿತಾಗೆ ಮೈನಸ್‌ ಆಗಿದೆ.  ಇದೀಗ ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ನಲ್ಲಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ರಕ್ಷಿತಾ ಯೋಗ್ಯರಲ್ಲ ಎಂದು ಮಂದಿ ಹೇಳಿದ್ದಾರೆ.

ಇಂದಿನ ಸಂಚಿಕೆಯ ಪ್ರೋಮೋದಲ್ಲಿ, ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ಸದಸ್ಯರನ್ನು ಘೋಷಿಸಬೇಕು ಎಂದು ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದರು. ಬಹುತೇಕ ಎಲ್ಲ ಸದಸ್ಯರು ರಕ್ಷಿತಾ ಹೆಸರನ್ನೇ ಹೇಳಿದ್ದಾರೆ. ಸ್ಪಂದನಾ, ನನ್ನನ್ನು ನಾಮಿನೇಟ್‌ ಮಾಡುವಾಗ ಕೊಟ್ಟ ಕಾರಣಕ್ಕೆ ಅರ್ಥವೇ ಇರಲಿಲ್ಲ ಎಂದಿದ್ದಾರೆ. ಅಭಿಷೇಕ್‌ ಕೂಡ, ರಕ್ಷಿತಾ ಅವರು ಪ್ಯಾನಿಕ್‌ ಆಗಿ ಯಾವುದು ತಲೆಗೆ ಬರುತ್ತೋ ಅದನ್ನ ಕಾರಣಗಳನ್ನು ಕೊಡೋದು ಅಲ್ಲ ಎಂದಿದ್ದಾರೆ. ಕಾವ್ಯ ಮಾತನಾಡಿ, `ಚಿಕ್ಕ ಹುಡುಗಿ ನಿರ್ಧಾರ ತೆಗೆದುಕೊಳ್ಳಲು ಆಗ್ತಾ ಇಲ್ವಾ ಅಂತ ಹೇಳೋದಾ? ಅಥವಾ ಸ್ಮಾರ್ಟೋ?’ ಅಂತ ಹೇಳಿದ್ದಾರೆ. ಮನೆ ಮಂದಿ ಕಮೆಂಟ್‌ ಮಾಡಿದ್ದಂತೆ ಮತ್ತೆ ರಕ್ಷಿತಾ ರೊಚ್ಚಿಗೆದ್ದಿದ್ದಾರೆ. ನನಗೆ ಯಾವಾಗ ಏನು ನಿರ್ಧಾರ ತೆಗೆದುಕೊಂಡು ಹೇಳಬೇಕೋ ಅದನ್ನ ಆ ಕ್ಷಣಕ್ಕೆ ಯೋಚನೆ ಮಾಡಿಯೇ ಹೇಳುತ್ತೇನೆ ಎಂದಿದ್ದಾರೆ.

Shwetha M