ಬೆಂಕಿಯಲ್ಲಿ ಅರಳಿದ ಹೂ ರಕ್ಷಿತಾ.. ಕುಡ್ಲದ ಹುಡ್ಗಿ ತಾಕತ್ತು ಅಶ್ವಿನಿಗೇನು ಗೊತ್ತು? – ರೆಬಲ್‌ ರಕ್ಷಿತಾ.. ಈ ಸಲ ಕಪ್‌ ಇವಳದ್ದೇ!?  

ಬೆಂಕಿಯಲ್ಲಿ ಅರಳಿದ ಹೂ ರಕ್ಷಿತಾ.. ಕುಡ್ಲದ ಹುಡ್ಗಿ ತಾಕತ್ತು ಅಶ್ವಿನಿಗೇನು ಗೊತ್ತು? – ರೆಬಲ್‌ ರಕ್ಷಿತಾ.. ಈ ಸಲ ಕಪ್‌ ಇವಳದ್ದೇ!?  

ರಕ್ಷಿತಾ ಶೆಟ್ಟಿ.. ಮೊದಲ ದಿನದಿಂದಲೇ ಈಕೆ ಬಿಗ್‌ ಬಾಸ್‌ ಮನೆಯಲ್ಲಿ ಟಾರ್ಗೆಟ್‌. ಎಲ್ಲರಿಗೂ ಒಳ್ಳೆಯದ್ದೇ ಬಯಸೋ ರಕ್ಷಿತಾ ಶೆಟ್ಟಿನಾ ಕಂಡ್ರೆ ಅಶ್ವಿನಿ ಗ್ಯಾಂಗ್‌ಗೆ ಒಂಚೂರು ಆಗ್ತಿಲ್ಲ. ರಕ್ಷಿತಾ ಶೆಟ್ಟಿ ಮೇಲೆ ನಾನಾ ತರದ ಆರೋಪ, ಅವಮಾನ ಮಾಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ರೆಬಲ್‌ ರಕ್ಷಿತಾ ಕುಗ್ಗೋ ಮಾತೇ ಇಲ್ಲ. ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತು ಈಗ ಕರುನಾಡ ಮನೆಮಗಳಾಗಿದ್ದಾಳೆ. ಈ ವಾರ ಕಿಚ್ಚನ ಚಪ್ಪಾಳೆ ಕೂಡ ರಕ್ಷಿತಾಗೆ ಸಿಕ್ಕಿದೆ. ದೊಡ್ಮನೆಯಲ್ಲಿ ಸಾಕಷ್ಟು ನೋವು ತಿಂದ ಕೃಷ್ಣ ಸುಂದರಿ ನಿಜಕ್ಕೂ ಬೆಂಕಿಯಲ್ಲಿ ಅರಳುತ್ತಿರುವ ಹೂವು.

ಇದನ್ನೂ ಓದಿ: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ವಂಶದ ಕುಡಿ! – ಅಶ್ವಿನಿ ಡಮ್ಮಿ, ಫೇಕ್‌ ಎಂದು ಅಬ್ಬರಿಸಿದ ಧ್ರುವಂತ್‌

ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ಕಾಲಿಡೋವಾಗ ವೀಕ್ಷಕರಿಗೆ ಬೇರೆಯದ್ದೇ ಅಭಿಪ್ರಾಯ ಇತ್ತು.. ರೀಲ್ಸ್‌ ಮಾಡೋರನ್ನ ಯಾಕೆ ಕರೆಸ್ತೀರಾ? ಏನ್‌ ಸಾಧನೆ ಮಾಡಿದ್ದಾಳೆ ಅಂತ ಇವಳನ್ನ ಈ ಶೋಗೆ ಆಯ್ಕೆ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದವರೇ ಹೆಚ್ಚು.. ಕುಡ್ಲದ ಹುಡುಗಿ ಏನು ಅನ್ನೋದು ಆಕೆ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಎಲ್ಲರಿಗೂ ಗೊತ್ತಾಗಿತ್ತು. ದೊಡ್ಮನೆಯಲ್ಲಿ ರಕ್ಷಿತಾ ಶೆಟ್ಟಿ ಆಟಕ್ಕೆ ಜನರು ಫಿದಾ ಆಗಿದ್ದಾರೆ. ರಕ್ಷಿತಾ ಮಾತಿಗೂ ಸೈ, ಆಟದಲ್ಲೂ ಜೈ. ಆಟಕ್ಕೆ ತಕ್ಕಂತೆ ಮಾತನಾಡುತ್ತಾಳೆ, ಪ್ರತಿ ಬಾರಿ ಮಾತನಾಡುವಾಗಲೂ ಪಾಯಿಂಟ್ಸ್‌ ಹೇಳಿ ಮಾತಾಡ್ತಾಳೆ. ಇದು ವೀಕ್ಷಕರಿಗೂ ಸಖತ್‌ ಇಷ್ಟವಾಗಿದೆ. ಹೀಗಾಗೇ ರಕ್ಷಿತಾಗೆ ಅದೆಷ್ಟೋ ಫ್ಯಾನ್ಸ್‌ ಹುಟ್ಟಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಆಕೆಗೆ ಸಪೋರ್ಟ್‌ ಮಾಡ್ತಾ ಇದ್ದಾರೆ. ದೊಡ್ಮನೆಯಲ್ಲಿ ಸ್ಟ್ರಾಂಗ್‌ ಸ್ಪರ್ಧಿ ಅನ್ನಿಸ್ಕೊಂಡಿದ್ದಾರೆ. ಆದ್ರೆ ದೊಡ್ಮನೆಯಲ್ಲಿ ಮಾತ್ರ ರಕ್ಷಿತಾ ಎಲ್ಲರ ಟಾರ್ಗೆಟ್.‌ ಅಶ್ವಿನಿ ಗ್ಯಾಂಗ್‌ ಅಂತೂ ರಕ್ಷಿತಾಳನ್ನ ತುಂಬಾ ಕೇವಲವಾಗಿ ನಡೆಸಿಕೊಳ್ತಾ ಇದ್ದಾರೆ.

ರಕ್ಷಿತಾ ಶೆಟ್ಟಿ ದೊಡ್ಮನೆಗೆ ಕಾಲಿಟ್ಟ ಮೊದಲ ದಿನವೇ ಟಾರ್ಗೆಟ್‌ ಆಗಿದ್ರು. ಯ್ಯೂಟ್ಯೂಬರ್‌, ಫ್ಲೂಕ್‌ನಿಂದ ಫೇಮಸ್ ಆಗಿದ್ದಾಳೆ ಅನ್ನೋ ಕಾರಣ ನೀಡಿ, ಮೊದಲ ದಿನವೇ ಎಲಿಮಿನೇಟ್‌ ಮಾಡಿದ್ರು. ಅದಾದ ಬಳಿಕ ಮತ್ತೆ ದೊಡ್ಮನೆಗೆ ಕಾಲಿಟ್ಟ ರಕ್ಷಿತಾ ಟಾರ್ಗೆಟ್‌ ಆಗಿದ್ದು, ಅಶ್ವಿನಿ ಗ್ಯಾಂಗ್‌ಗೆ. ಆಕೆ ಕೂಡ ತಮ್ಮಂತೆ ಅನ್ನೋದನ್ನ ಮರೆತು ಅಶ್ವಿನಿ ಗ್ಯಾಂಗ್ ಕೊಡಬಾರದ ಟಾರ್ಚರ್‌ ಕೊಟ್ರು. ಅಶ್ವಿನಿ, ಜಾಹ್ನವಿ ಮನೆಯಲ್ಲಿ ಗೆಜ್ಜೆ ಸದ್ದು ಮಾಡಿ, ಆಕೆ ಮೈಮೇಲೆ ದೆವ್ವ ಬಂದಿದೆ ಅಂತ ಕತೆ ಕಟ್ಟಿದ್ರು. ಇದನ್ನ ಪ್ರಶ್ನಿಸಿದ್ದಕ್ಕೆ ಆಕೆ ಮೇಲೆಯೇ ರೇಗಾಡಿದ್ರು. ರಕ್ಷಿತಾ ಬಟ್ಟೆಯನ್ನ ನೋಡಿ, ಎಲ್ಲಿಂದ ಬಂದಿದ್ದೀಯಾ ಅಂತ ಹೀಯಾಳಿಸಿದ್ರು. ಆಕೆ ಎಸ್‌ ಕೆಟಗರಿ ಅಂತ ನಿಂದಿಸಿದ್ರು, ಅವಳು ಮಾಡಿದ ಅಡುಗೆ ಮುಟ್ಟಲ್ಲ ಅಂದ್ರು. ಆಕೆ ಮಾತಾಡೋ ಕನ್ನಡ ನೋಡಿ ಫೇಕ್‌ ಅಂತ ಹೀಯಾಳಿಸಿದ್ರು. ಕಾರ್ಟೂನ್‌, ಚೈಲ್ಡ್‌, ಅಂತ ಕರೆದ್ರು. ಅಷ್ಟೇ ಅಲ್ಲ ಅವಳ ಮೈಬಣ್ಣ ನೋಡಿ ಅಮವಾಸ್ಯೆ ಅಂತ ಹೀಯಾಳಿಸಿದ್ರು. ಟಾಸ್ಕ್‌ ವೇಳೆ ತಮ್ಮ ಗುಂಪಲ್ಲಿ ಸೇರಿದ್ರೆ, ದೂರ ಇಟ್ರು. ಇಷ್ಟೆಲ್ಲಾ ಅದ್ರೂ ರಕ್ಷಿತಾ ಎಲ್ಲವನ್ನ ಸಹಿಸಿಕೊಂಡ್ಲು. ಇದ್ರಿಂದ ತನಗೆ ನೋವಾದ್ರೂ Its Ok ಅಂತ ಹೇಳಿ ತನ್ನ ಆಟವನ್ನ ಆಟ ಆಡ್ತಾ ಬಂದಿದ್ದಾರೆ. ಇಷ್ಟು ದಿನ ಯಾರು ತನಗೆ ತೊಂದ್ರೆ, ಕೀಳಾಗಿ ನಡೆಸಿಕೊಂಡು, ಅವರ ಮುಂದೆಯೇ ರಕ್ಷಿತಾ ಹೆಮ್ಮರವಾಗಿ ಬೆಳಿತಾ ಇದ್ದಾಳೆ. ತನ್ನ ತಪ್ಪನ್ನ ತಿದ್ದಿಕೊಂಡು ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡ್ತಿದ್ದಾಳೆ. ಅಷ್ಟೇ ಅಲ್ಲ. ಅಶ್ವಿನಿ ಇಷ್ಟು ದಿನ ಎಷ್ಟು ತೊಂದ್ರೆ ಕೊಟ್ಟಿದ್ರು ಅದನ್ನ ಆಕೆ ಮನಸಲ್ಲಿ ಇಟ್ಟುಕೊಂಡಿಲ್ಲ. ದ್ವೇಷ ಸಾಧಿಸಿಲ್ಲ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಕಳೆದ ವಾರ ನಡೆದ ಇನ್ಸಿಡೆಂಟ್.‌ ಅಶ್ವಿನಿ ಊಟ ಬಿಟ್ಟು ಪ್ರೊಟೆಸ್ಟ್‌ ಮಾಡಿದಾಗ ಕಾಳಜಿ ತೋರಿದ್ರು. ಊಟ ಮಾಡಿ ಅಂತ ರಿಕ್ವೆಸ್ಟ್‌ ಮಾಡಿದ್ರು. ಅಷ್ಟೇ ಅಲ್ಲ ರಘು, ಗಿಲ್ಲಿ ಬಳಿ ನೀವು ಅವ್ರಿಗೆ ಬೇಜಾರು ಮಾಡಿದ್ದಿರಾ. Sorry ಕೇಳಿ ಅಂತ ಮನವೊಲಿಸಿದ್ರು. ಇದು ಕಿಚ್ಚ ಸುದೀಪ್‌ಗೂ ಇಷ್ಟವಾಗಿದೆ. ಹೀಗಾಗೇ ತಮ್ಮ ಹಿಂದಿನ ವ್ಯಕ್ತಿತ್ವಕ್ಕೆ ಹೋಗಿ, ತುಂಬಾ ಚೆನ್ನಾಗಿ ಆಟ ಆಡಿ, ತಿದ್ದಿಕೊಂಡು, ಮಾನವೀಯತೆ ತೋರಿಸಿ, ಬೈಯಿಸಿಕೊಂಡವರಿಂದಲೇ ಉತ್ತಮ ಅನಿಸಿಕೊಂಡ ರಕ್ಷಿತಾ ಅವರೇ ನಿಮಗೆ ಈ ವಾರದ ಕಿಚ್ಚನ ಚಪ್ಪಾಳೆ ಅಂತ ಸುದೀಪ್ ಹೇಳಿದರು.

ಒಟ್ಟಾರೆ ರಕ್ಷಿತಾ ಎಷ್ಟೇ ನೋವು ತಿಂದ್ರೂ ತನ್ನನ್ನ ತಾನು ಬಿಟ್ಟುಕೊಟ್ಟಿಲ್ಲ. ಅಷ್ಟೇ ಅಲ್ಲ ಎಲ್ಲೂ ಕೂಡ ತಾಳ್ಮೆ ಕಳೆದುಕೊಂಡಿಲ್ಲ. ತನ್ನನ್ನ ತುಳಿದವರ ಮುಂದೆಯೇ ರಕ್ಷಿತಾ ಹೆಮ್ಮರವಾಗಿ ಬೆಳೆಯುತ್ತಿದ್ದಾರೆ. ಈಕೆಯ ಆಟ ನಿಜಕ್ಕೂ ಮೆಚ್ಚುವಂತದ್ದು. , ಅಪಮಾನ, ಅವಮಾನ ಆದ್ರೂ ಜಗ್ಗದೇ, ಕುಗ್ಗದೇ, ಮತ್ತೆ ಮತ್ತೆ ಎದ್ದು ನಿಂತ ರಕ್ಷಿತಾ ಬೆಂಕಿಯಲ್ಲಿಅರಳಿದ ಹೂವು ಅಂತ ವೀಕ್ಷಕರು ಕೂಡ ಹೇಳ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ರಕ್ಷಿತಾಳನ್ನ ಟಾರ್ಗೆಟ್‌ ಮಾಡೋ ಅಶ್ವಿನಿಗೇನು ಗೊತ್ತು ಅಂತಾ ವೀಕ್ಷಕರು ಹೇಳ್ತಿದ್ದಾರೆ. ರಕ್ಷಿತಾ ಭೂಮಿ ತೂಕದ ತಾಳ್ಮೆ, ಪ್ರೌಢಿಮೆಯು ಕನ್ನಡಿಗರ ಮನಸ್ಸನ್ನು ಗೆದ್ದಿದೆ.

Shwetha M