ರಕ್ಷಿತಾ OUT ರಚಿತಾರಾಮ್ IN – ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9ರಲ್ಲಿ ಏನೇನು ವಿಶೇಷತೆ ಇದೆ ಗೊತ್ತಾ?

ರಕ್ಷಿತಾ OUT ರಚಿತಾರಾಮ್ IN – ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9ರಲ್ಲಿ ಏನೇನು ವಿಶೇಷತೆ ಇದೆ ಗೊತ್ತಾ?

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-9 ಕ್ಕೆ ಸಿದ್ಧತೆ ಜೋರಾಗಿದೆ. ಈಗಾಗಲೇ ಜೀ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಈ ಪ್ರೋಮೋ ಕೂಡಾ ಡಿಫರೆಂಟ್ ಆಗಿದೆ. ಡ್ಯಾನ್ಸ್ ಅಂದರೆ ಏನು ಅನ್ನೋ ಸುಂದರ ವಿವರಣೆ ನೀಡಲಾಗಿದೆ. ನೃತ್ಯದ ವೈವಿಧ್ಯಗಳನ್ನು ಹೇಳಲಾಗಿದೆ. ಈ ಪ್ರೋಮೋದಲ್ಲಿ ಶಿವಣ್ಣನ ಲುಕ್, ರಚಿತಾರಾಮ್ ಬ್ಯೂಟಿ, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವರ ಸ್ಪೆಷಲ್ ಗೆಟಪ್ ಗಮನ ಸೆಳೆದಿದೆ.

ಇದನ್ನೂ ಓದಿ:ಸೂರಜ್ ಮತ್ತು ರಾಶಿಕಾ ಸ್ನೇಹಿತರು ಮಾತ್ರ – ಪ್ರೀತಿಗೆ ಫುಲ್‌ಸ್ಟಾಪ್ ಬಿತ್ತಾ?

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದಿಂದ ರಕ್ಷಿತಾ ಪ್ರೇಮ್ ಹೊರ ನಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಜಾಗಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬಂದಿದ್ದಾರೆ. ಜೀ ಕನ್ನಡ ಪ್ರೋಮೋ ಮೂಲಕವೇ ವೀಕ್ಷಕರಿಗೆ ಈ ಸಿಹಿಸುದ್ದಿ ಕೊಟ್ಟಿದೆ. ನೃತ್ಯ ಅನ್ನೋದು ಸುಮ್ನೆ ಅಲ್ಲ. ಅದು ಒಂದು ಭಾವನೆಯನ್ನ ಹೇಳುತ್ತದೆ. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನ ಕಟ್ಟಿಕೊಡುತ್ತದೆ. ಒಟ್ಟಿಗೆ ಇದುವೆ ಬಲ ಅನ್ನೋದು ಅರ್ಥದಲ್ಲೂ ನೃತ್ಯವನ್ನ ಇಲ್ಲಿ ಬಿಂಬಿಸಿದ್ದಾರೆ ಎಂದು ಹೇಳುವ ಮೂಲಕ ರಚಿತಾರಾಮ್ ವಿಶೇಷ ಎಂಟ್ರಿ ನೋಡಬಹುದಾಗಿದೆ.

ಪ್ರೋಮೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲು ಕಾಣಿಸಿಕೊಳ್ಳುತ್ತಾರೆ. ಮಹಾಶಿವನ ನೃತ್ಯದ ದೃಶ್ಯಗಳು ಇಲ್ಲಿ ಬರುತ್ತವೆ. ಇದು ನಿಜಕ್ಕೂ ತುಂಬಾನೆ ಚೆನ್ನಾಗಿ ಬಂದಿದೆ. ಆ ಶಿವ ಮತ್ತು ಈ ಶಿವ ಒಂದೇ ಫ್ರೇಮ್‌ ಅಲ್ಲಿಯೇ ಇಲ್ಲಿ ಕಾಣಿಸಿಕೊಂಡು, ಡ್ಯಾನ್ಸ್ ಪ್ರಿಯರಿಗೆ ಹೊಸದೊಂದು ಉಲ್ಲಾಸ ತುಂಬಿದ್ದಾರೆ. ಇಡೀ ಶೋ ಹೇಗೆ ಇರುತ್ತದೆ ಅನ್ನುವ ಕುತೂಹಲವನ್ನು ಹುಟ್ಟುಹಾಕಿದ್ದಾರೆ. ನೃತ್ಯ ಅನ್ನೋದು ಒಂದು ರೂಪ ಅಲ್ಲ. ಅದೊಂದು ಭಾವನೆ ಅನ್ನೋದು ಗೊತ್ತೇ ಇದೆ. ಅದನ್ನ ಇಲ್ಲಿ ಅರ್ಜುನ್ ಜನ್ಯ ಆಕರ್ಷಕವಾಗಿಯೇ ಹೇಳಿದ್ದಾರೆ. ನೃತ್ಯ ಅನ್ನೋದು ಆ ಕಾಲದಿಂದಲೂ ಇದೆ. ಆದರೆ ಅದು ಒಂದು ನೃತ್ಯವಷ್ಟೆ ಅಲ್ಲ. ಭಾವನೆಗಳನ್ನ ಹೇಳಿಕೊಳ್ಳುವ ಭಾಷೆ ಕೂಡ ಆಗಿತ್ತು ಅನ್ನೋದನ್ನ ಅರ್ಜುನ್ ಜನ್ಯ ಇಲ್ಲಿ ಹೇಳ್ತಾರೆ. ಇವರ ವಿವರಣೆಯಲ್ಲಿ ಆದಿವಾಸಿಗಳು ನೃತ್ಯ ಮಾಡುವ ದೃಶ್ಯವೂ ಕಣ್ಮನ ಸೆಳೆಯುತ್ತದೆ. ಈ ರೀತಿಯ ವಿಚಾರಗಳನ್ನೆ ಡಿಕೆಡಿಯ ಪ್ರೋಮೋ ಹೇಳುತ್ತಿದೆ.

ವಿಜಯ್ ರಾಘವೇಂದ್ರ ಅವರ ಎಂಟ್ರಿಯೂ ಚೆನ್ನಾಗಿದೆ. ಕುಣಿತ ಅನ್ನೋದು ಬದುಕಿಗೆ ಎಷ್ಟು ಮುಖ್ಯ ಅನ್ನೋದನ್ನು ವಿವರಿಸುತ್ತಾರೆ ಕನ್ನಡಿಗರ ಪ್ರೀತಿಯ ಚಿನ್ನಾರಿ ಮುತ್ತ. ಒಟ್ನಲ್ಲಿ ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಪ್ರೋಮೋ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Sulekha