ರಕ್ಷಿತಾಗೆ ಸಿಕ್ತು ಸಿನಿಮಾ ಆಫರ್!‌ – ಪಟಾಕಿ ಪೋರಿಗೆ ಗಿಲ್ಲಿನೇ ಹೀರೋ?
ಕುಡ್ಲದ ಹುಡುಗಿ ಫಸ್ಟ್‌ ಚಿತ್ರ ಇದೆನಾ?

ರಕ್ಷಿತಾಗೆ ಸಿಕ್ತು ಸಿನಿಮಾ ಆಫರ್!‌ – ಪಟಾಕಿ ಪೋರಿಗೆ ಗಿಲ್ಲಿನೇ ಹೀರೋ?ಕುಡ್ಲದ ಹುಡುಗಿ ಫಸ್ಟ್‌ ಚಿತ್ರ ಇದೆನಾ?

ರಕ್ಷಿತಾ ಶೆಟ್ಟಿ.. ಸೀದಾ ಸಾದಾ ಹುಡುಗಿ.. ಮನಸ್ಸಿಗೆ ಅನ್ನಿಸಿದ್ದನ್ನ ನೇರವಾಗಿ ಹೇಳಿಬಿಡುವ ಈ ಬಿಗ್‌ಬಾಸ್‌ ಬೆಡಗಿ ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದ್ದಾಳೆ. ಬಿಗ್‌ಬಾಸ್‌ ರನ್ನರ್‌ ಅಪ್‌ ಆಗಿರೋ ರಕ್ಷಿತಾ ಇನ್ನೂ ಸೆಲೆಬ್ರೇಷನ್‌ ಮೂಡ್‌ನಲ್ಲಿದ್ದಾಳೆ. ಆದ್ರೆ ಅವರ ಫ್ಯಾನ್ಸ್‌ ಮಾತ್ರ ಬಿಗ್‌ಬಾಸ್‌ ಶೋ ಮುಗಿತು. ರಕ್ಷಿತಾ ಶೆಟ್ಟಿ ಮುಂದೆ ಏನ್‌ ಮಾಡ್ತಾಳೆ? ಸಿನಿಮಾ ಆಫರ್‌ ಸಿಕ್ತಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಇದೀಗ ರಕ್ಷಿತಾ ಫ್ಯಾನ್ಸ್‌ಗೆ ಖುಷಿ ಸುದ್ದಿಯಿದೆ. ರಕ್ಷಿತಾ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ.

ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಬೆಂಗಳೂರೇ ವಿಶ್ವಕ್ಕೆ .ನಂ. 2 – 10 ಕಿ.ಮೀ. ಸಂಚಾರಕ್ಕೆ ಬೇಕು 40 ನಿಮಿಷ!

ಯೂಟ್ಯೂಬ್‌ ಮೂಲಕ ಫೇಮಸ್‌ ಆಗಿದ್ದ ರಕ್ಷಿತಾ ಬಿಗ್‌ಬಾಸ್‌ಗೆ ಬಂದ್ಮೇಲೆ ಕರುನಾಡಿನ ಕೋಟ್ಯಾಂತರ ಮನಸ್ಸುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ.  ಬಿಗ್‌ಬಾಸ್‌ ಮನೆಯಲ್ಲಿ ಅದ್ಭುತವಾದ ಆಟದ ಮೂಲಕ ಪ್ರೇಕ್ಷಕರಿಗೆ ಎಂಟರ್‌ಟೈನ್‌ಮೆಂಟ್‌ ನೀಡಿದ್ದಾಳೆ. ರಕ್ಷಿತಾ ಮುದ್ದು ಮುದ್ದಾದ ಮಾತು, ಕನ್ನಡ ಮಾತನಾಡಲು ಆಕೆ ಮಾಡ್ತಿದ್ದ ಪ್ರಯತ್ನವೆಲ್ಲ ವೀಕ್ಷಕರಿಗೆ ಇಷ್ಟ ಆಗಿದೆ. ಇದೇ ಕಾರಣಕ್ಕೆ ಆಕೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿದ್ಲು.ಹೀಗಾಗೇ ಕೋಟ್ಯಾಂತರ ವೋಟ್‌ ಪಡೆಯೋ ಮೂಲಕ ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರ ರನ್ನರ್‌ ಅಪ್‌ ಆಗಿದ್ದಾಳೆ. ಇದೀಗ ರಕ್ಷಿತಾ ದೊಡ್ಮನೆಯಿಂದ ಬಂದ್ಮೇಲೆ ಮುಂದೇನು ಮಾಡ್ತಾಳೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇದೀಗ ರಕ್ಷಿತಾ ಸಿನಿಮಾದಲ್ಲಿ ಆಕ್ಟ್‌ ಮಾಡಿರೋ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿರುವಾಗ ಅಶ್ವಿನಿ ಗೌಡ, ನಾನು ನೂರು ಸಿನಿಮಾದಲ್ಲಿ ನಟಿಸಿದ್ದೇನೆ, ನನ್ನ ಹಾಗೇ ನೀನೂ 100 ಸಿನಿಮಾದಲ್ಲಿ ನಟಿಸಿ ತೋರಿಸು ಎಂದು ಸವಾಲು ಹಾಕಿದ್ರು. ಆ ಟೈಮ್‌ನಲ್ಲೇ ರಕ್ಷಿತಾಗೆ ರಾಜ್‌ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸೋ ಚಾನ್ಸ್‌ ಸಿಕ್ಕಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ರಕ್ಷಿತಾಗೆ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಿದೆ. ಆದ್ರೆ ರಾಜ್‌ ಬಿ ಶೆಟ್ಟಿ ಸಿನಿಮಾದಲ್ಲಿ ಅಲ್ಲ. ರಕ್ಷಿತಾ ತುಳು ಸಿನಿಮಾದಲ್ಲಿ ನಟಿಸಿದ್ದಾಳೆ ಅನ್ನೋ ವಿಚಾರ ರಿವೀಲ್‌ ಆಗಿದೆ.

ಹೌದು.. ನಟ, ಶೋಧನ್ ಶೆಟ್ಟಿ ಅವರ ಚಿತ್ರ ತರವಾಡ್ ನಲ್ಲಿ ರಕ್ಷಿತಾ ನಟಿಸುತ್ತಿದ್ದಾಳೆ. ತುಳುನಾಡಿನ ಮಣ್ಣಿನ ಕಥೆಯ ಸಿನಿಮಾ ಇದಾಗಿದ್ದು, ರಕ್ಷಿತಾ ಶೆಟ್ಟಿಗೆ ಮುಖ್ಯ ಪಾತ್ರ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಶೋಧನ್ ಶೆಟ್ಟಿ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುನ್ನವೇ ರಕ್ಷಿತಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ. ಅಂದ್ಹಾಗೆ ಶರತ್ ಎಸ್ ಪೂಜಾರಿ ಬಗ್ಗತೋಟ ತರವಾಡ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದ್ರ ಟೈಟಲ್ ಟೀಸರ್ ಕಳೆದ ಜೂನ್ ತಿಂಗಳಲ್ಲೇ ಆಗಿದೆ ರಿಲೀಸ್. ಇ ಶುಭಾ ಶೆಟ್ಟಿ ಪ್ರೊಡಕ್ಷನ್ಸ್‌ ಲಾಂಛನದಡಿ ತಯಾರಾಗುತ್ತಿರುವ ಚಿತ್ರದಲ್ಲಿ ಯುವ ನಟ ಶೋಧನ್ ಶೆಟ್ಟಿ ನಾಯಕನಾಗಿ ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.

ಇನ್ನು ಈ ಹಿಂದೆ ರಕ್ಷಿತಾ ಶೆಟ್ಟಿ ತರವಾಡ್ ಸಿನಿಮಾದ ಟೈಟಲ್ ಲಾಂಚ್, ಟೀಸರ್ ಲಾಂಚ್ ನ ಪ್ರಚಾರ ಕೂಡ ಮಾಡಿದ್ದಳು. ಆಗಲೇ ತಮ್ಮ ಪಾತ್ರದ ಬಗ್ಗೆ ರಕ್ಷಿತಾ ಶೆಟ್ಟಿ ಮಾತನಾಡಿದ್ದಳು. ಆದ್ರೆ ಸಿನಿಮಾದಲ್ಲಿ ಯಾವ ಪಾತ್ರ ಎಂಬ ಬಗ್ಗೆ ಒಂಚೂರು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಸಿನಿಮಾದ ಕೆಲಸಗಳು ಸಾಗುತ್ತಿದ್ದು ಯಾವಾಗ ತೆರೆಗೆ ಬರಬಹುದು ಎಂಬುದರ ಬಗ್ಗೆ ಸದ್ಯಕ್ಕಂತೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇನ್ನು ರಕ್ಷಿತಾ ಯೂಟ್ಯೂಬ್‌ನಲ್ಲೂ ವ್ಲಾಗ್‌ ಮಾಡ್ತೀನಿ. ಹಾಗೇ ಸಿನಿಮಾ ಸೀರಿಯಲ್‌ನಲ್ಲೂ ನಟಿಸಲು ಅವಕಾಶ ಸಿಕ್ಕಿದ್ರೆ ಸಿನಿಮಾ ಸೀರಿಯಲ್‌ನಲ್ಲೂ ಆಕ್ಟ್‌ ಮಾಡ್ತೀನಿ ಎಂದಿದ್ದಾರೆ. ಗಿಲ್ಲಿ ಜೊತೆ ನಟಿಸಲು ಚಾನ್ಸ್‌ ಸಿಕ್ಕಿದ್ರೆ ಇನ್ನೂ ಖುಷಿ ಎಂದು ಹೇಳಿದ್ದಾಳೆ. ಒಟ್ಟಾರೆ ಯೂಟ್ಯೂಬ್‌ ವ್ಲಾಗ್‌ ಜೊತೆಗೆ ಈಗ ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದ್ದಾಳೆ. ಸಿನಿಮಾ ಕ್ಷೇತ್ರದಲ್ಲೂ ರಕ್ಷಿತಾಗೆ ಸಕ್ಸಸ್‌ ಸಿಗ್ಲಿ ಅನ್ನೋದೇ ಎಲ್ಲರ ಆಶಯ.

Shwetha M