ಕನಸಿನ ಬೆನ್ನತ್ತಿದ ರಕ್ಷಿತ್ ಶೆಟ್ಟಿ – ಮುಂದಿನ ಎರಡು ಸಿನಿಮಾಗೆ ಕೊಡಲಿಯೇ ಸ್ಫೂರ್ತಿ!

ನಟ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಈ ಸಿನಿಮಾದ ಕೆಲಸದಲ್ಲೇ ಇಷ್ಟು ದಿನ ಕಳೆದು ಹೋಗಿದ್ದರು. ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾಗಳು ಯಾವವು? ಏನು ಮಾಡಲಿದ್ದಾರೆ? ನಿರ್ದೇಶನವಾ ಅಥವಾ ಬೇರೆ ನಿರ್ದೇಶಕರ ಸಿನಿಮಾದಲ್ಲಿ ನಟನೆಯಾ ಎನ್ನುವ ಪ್ರಶ್ನೆಗಳು ಮೂಡಿದ್ದವು. ಇದೀಗ ರಕ್ಷಿತ್ ಶೆಟ್ಟಿ ಅವರು ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟ ಧನುಷ್ – ಮುಡಿ ಕೊಟ್ಟು ಹರಕೆ ತೀರಿಸಿದ ಕಾಲಿವುಡ್ ಸ್ಟಾರ್
ರಕ್ಷಿತ್ ಶೆಟ್ಟಿ ಹೊಸ ಕನಸಿನ ಬೆನ್ನು ಹತ್ತಿದ್ದಾರೆ. ಕಥೆಗಾರ ರಕ್ಷಿತ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರಂತೆ. ಗುರು ಪೂರ್ಣಿಮೆ ದಿನವಾದ ಸೋಮವಾರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತನ್ನ ಸಿನಿ ಕೆರಿಯರ್ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಮತ್ತೆ ತಾನು ನಿರ್ದೇಶಕನ ಕುರ್ಚಿಯಲ್ಲಿ ಕುಳಿತುಕೊಂಡು ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ತಾವು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಪೊಸ್ಟ್ ಮಾಡಿ ಮುಂದಿನ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ವಿಡಿಯೋದಲ್ಲಿ ಸ್ಪೂರ್ತಿ ತುಂಬಬಲ್ಲಂತಹ ಕೆಲವು ಮಾತುಗಳನ್ನೂ ರಕ್ಷಿತ್ ಆಡಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಒಳಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿರುವ ರಕ್ಷಿತ್, ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಸಿನಿಮಾಗಳ ಕುರಿತಂತೆ ನಾಲ್ಕು ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ಯಶಸ್ಸು ಎನ್ನುವುದು ಕೆಲವರಿಗೆ ರಾತ್ರೋರಾತ್ರಿ ಸಿಕ್ಕಿದೆ. ಇನ್ನೂ ಕೆಲವರು ತಪಸ್ಸು ಮಾಡಬೇಕು ಎನ್ನುತ್ತಾ ತಾವು ನಡೆದು ಬಂದು ಹಾದಿಯನ್ನು ರಕ್ಷಿತ್ ನೆನಪಿಸಿಕೊಂಡಿದ್ದಾರೆ. ನಿರ್ದೇಶನ ಎನ್ನುವುದು ಎಂತಹದ್ದು ಎಂದೂ ತಿಳಿಸಿರುವ ಅವರು, ಅದನ್ನು ತಾವು ಎಂಜಾಯ್ ಮಾಡಬೇಕು ಎನ್ನುವ ಮಾತುಗಳನ್ನೂ ಆಡಿದ್ದಾರೆ.
ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಪ್ರೇರಣೆ ಏನು? ತಮಗೆ ಕಥೆ ಹುಟ್ಟಿದ್ದು ಎಲ್ಲಿ? ತಾವು ಬೆಳೆದು ಬಂದ ಪರಿಸರ ಎಂತಹದ್ದು ಎಂದೂ ಹೇಳಿಕೊಂಡಿರುವ ರಕ್ಷಿತ್, ಪರಶುರಾಮ ಮತ್ತು ಆತನ ಕೊಡಲಿಯೇ ತಮ್ಮ ನಿರ್ದೇಶನದ ಎರಡು ಸಿನಿಮಾಗಳಿಗೆ ಸ್ಫೂರ್ತಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
View this post on Instagram