ದಳಪತಿ ವಿಜಯ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ – ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್

ದಳಪತಿ ವಿಜಯ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ – ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್

777 ಚಾರ್ಲಿ’ ಸಿನಿಮಾ ನಂತರ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ‘777 ಚಾರ್ಲಿ’ ಸಿನಿಮಾ ಸೂಪರ್ ಸಕ್ಸಸ್ ಆದ ನಂತರ ರಕ್ಷಿತ್ ಶೆಟ್ಟಿ ಇನ್ನೂ ಉತ್ತಮ ಚಿತ್ರ ನೀಡುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗಲೇ ರಕ್ಷಿತ್ ವಿಚಾರದಲ್ಲಿ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಕನ್ನಡದ ಸಿಂಪಲ್ ಸ್ಟಾರ್ ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಕಾಲಿವುಡ್‌ನ ಹೀರೋ ದಳಪತಿ ವಿಜಯ್ ಜೊತೆ ರಕ್ಷಿತ್ ಶೆಟ್ಟಿ ನಟಿಸುವುದು ಪಕ್ಕಾ ಆಗಿದೆ.

ಇದನ್ನೂ ಓದಿ:  ‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದ ಆದಿಲ್ ಖಾನ್ – ರಾಖಿ ಸಾವಂತ್ ಮದುವೆ ಪ್ರಹಸನ ಸುಖಾಂತ್ಯ

ಸ್ಟಾರ್ ಡೈರೆಕ್ಟರ್ ಅಂತಾನೇ ಫೇಮಸ್ ಆಗಿರುವ ಲೋಕೇಶ್ ಕನಗರಾಜ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ದಳಪತಿ ವಿಜಯ್  ನಟನೆಯ ಚಿತ್ರದಲ್ಲಿ ರಕ್ಷಿತ್ ಕೂಡ ಮೇಜರ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಹಿಟ್ ಚಿತ್ರ ವಿಕ್ರಮ್ ನಂತರ ಲೋಕೇಶ್ ಕನಗರಾಜ್ ದಳಪತಿ ವಿಜಯ್ ಗೆ ಆಕ್ಷನ್ ಕಟ್ ಹೇಳುತ್ತಿರುವುದು ಅಭಿಮಾನಿಗಳಿಗೆ ಸರ್‌ಪ್ರೈಸ್ ವಿಚಾರ. ಈಗ ಅದರಲ್ಲೂ ಸ್ಟಾರ್ ಡೈರೆಕ್ಟರ್ ಮತ್ತು ಫೇಮಸ್ ನಟನ ಜೊತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡಾ ಭಾಗಿಯಾಗ್ತಿದ್ದಾರೆ ಅನ್ನೋದನ್ನು ಕೇಳಿ ಚಿತ್ರದ ಬಗ್ಗೆ ಮತ್ತಷ್ಟೂ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಸಿನಿಮಾದ ಬಗ್ಗೆ ಹೈಪ್ ಕ್ರಿಯೇಟ್ ಆಗಿದ್ದು, ತ್ರಿಷಾ ಕೃಷ್ಣನ್, ಕೀರ್ತಿ ಸುರೇಶ್ ಕೂಡಾ ನಟಿಸಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಶೆಟ್ಟಿ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ದಳಪತಿ ವಿಜಯ್  ನಟನೆಯ ಚಿತ್ರದಲ್ಲಿ ರಕ್ಷಿತ್ ಕೂಡ ಮೇಜರ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್, ತ್ರಿಷಾ ಕೃಷ್ಣನ್, ಕೀರ್ತಿ ಸುರೇಶ್ ಅಭಿನಯದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೂಡ ಇರಲಿದ್ದಾರೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಕಾದುನೋಡಬೇಕಿದೆ.

suddiyaana