ಸ್ಪಂದನಾ ಕ್ಯಾಪ್ಟನ್ಸಿಯಿಂದ ಕಿಕ್ ಔಟ್? – ವಿಲನ್ಗಳಿಗೆ ಚೈತ್ರಾ ಹೊಸ ನಾಯಕಿ!

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಷಣ ಕ್ಷಣಕ್ಕೂ ರೋಚಕತೆ ಹುಟ್ಟಿಸುತ್ತಿದೆ. ಈಗಾಲೇ ಎರಡು ಬಾರಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಾಗಿದೆ. ಮತ್ತೊಂದ್ಕಡೆ ಫಿನಾಲೆ ಕೂಡ ಹತ್ತಿರವಾಗ್ತಿದೆ. ಇದೀಗ ಬಿಗ್ಬಾಸ್ ಮನೆಗೆ ವಿಲನ್ ಎಂಟ್ರಿಯಾಗ್ತಿದ್ದಂತೆ ಸ್ಪರ್ಧಿಗಳ ಅವತಾರ ಕೂಡ ಚೇಂಜ್ ಆಗಿದೆ. ಅಷ್ಟೇ ಅಲ್ಲ ವಿಲನ್ಗಳಿಗೆ ಚೈತ್ರಾ ನಾಯಕಿ ಆದ್ರಾ ಅನ್ನೋ ಪ್ರಶ್ನೆ ಈಗ ಎದುರಾಗಿದೆ.
ಇದನ್ನೂ ಓದಿ: ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ – ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ತೀರ್ಮಾನ
ಬಿಗ್ ಬಾಸ್ ಮನೆ ಈಗ ಭೂತದ ಬಂಗಲೆ ಆಗಿದೆ. ಮನೆಯನ್ನ ಭಯಾನಕವಾಗಿ ಅಲಂಕರಿಸಲಾಗಿದೆ. ಇಂದಿನ ಸಂಚಿಕೆ ಮೊದಲ ಪ್ರೋಮೋದಲ್ಲಿ ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್ ಮಾಡ್ತಾ ಇರೋದು ಬಿಗ್ ಬಾಸ್ ಅಲ್ಲ, ವಿಲನ್ ಅಂತ ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ. ಈ ವಾಯ್ಸ್ ಕೇಳ್ತಿದ್ದಂತೆ ಸ್ಪರ್ಧಿಗಳು ಭಯಗೊಂಡಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ಲುಕ್ ಅನ್ನ ತೋರಿಸಿ ವೀಕ್ಷಕರಿಗೆ ಇಂದಿನ ಟಾಸ್ಕ್ ಬಗ್ಗೆ ಒಂದು ಹಿಂಟ್ ಕೊಡಲಾಗಿತ್ತು. ಆದ್ರೀಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಇದೀಗ ಕ್ಯಾಪ್ಟನ್ನಿಯಿಂದ ಸ್ಪಂದನಾ ಕಿಕ್ ಆದ್ರೆ, ಚೈತ್ರಾ ನಾಯಕಿ ಆದ್ರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಕಳೆದ ವಾರ ಟಾಸ್ಕ್ ವೇಳೆ ಸ್ಪಂದನಾ ಗಾಯಗೊಂಡಿದ್ರು. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಸ್ಪಂದನಾ ಪರವಾಗಿ ಚೈತ್ರಾ ಆಟ ಆಡಿ ಗೆದ್ದಿದ್ರು. ಇದ್ರಿಂದಾಗಿ ಸ್ವಂದನಾ ಕ್ಯಾಪ್ಟನ್ ಆಗಿದ್ರು. ಆದ್ರೆ ಗಿಲ್ಲಿ ಮಾಡಿದ ಎಡವಟ್ಟಿನಿಂದಾಗಿ ಕ್ಯಾಪ್ಟನ್ ರೂಮ್ಗೆ ಬೀಗ ಹಾಕಲಾಗಿತ್ತು. ಇದೀಗ ಚೈತ್ರಾಗೆ ಬಿಗ್ಬಾಸ್ ಹೊಸ ಆಫರ್ ಕೊಟ್ಟಿದ್ದಾರೆ. ವಾರ ಇಡೀ ರೆಸ್ಟ್ ಮಾಡಿ, ನಿಮ್ಮಿಂದಾಗಿ ಗೆದ್ದು, ಈಗ ಅವರು ಮನೆ ಕ್ಯಾಪ್ಟನ್. ನೀವು ಮನೆ ಕೆಲಸದವರು ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ. ಕ್ಯಾಪ್ಟನ್ ರೂಮ್ ಈಗ್ಲೇ ಓಪನ್ ಆಗುತ್ತೆ. ಕ್ಯಾಪ್ಟನ್ ನೀವು ಆಗ್ತೀರಾ. ಸ್ಪಂದನಾ ಎಲ್ಲ ಕಳೆದುಕೊಳ್ತಾರೆ. ನೀವು ಇದಕ್ಕೆ ಒಪ್ಪಿದ್ರೆ ಯೆಲ್ಲೋ ಬಜರ್ ಒತ್ತಿ ಎಂದಿದ್ದಾರೆ. ಇದೀಗ ಚೈತ್ರಾ ಯೆಲ್ಲೋ ಬಜರ್ ಒತ್ತುತ್ತಾರಾ? ಮನೆಯ ಹೊಸ ಕ್ಯಾಪ್ಟನ್ ಆಗ್ತಾರಾ ಅಂತ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

