ರಾಖಿ ಕಟ್ಟುವುದ್ದಕ್ಕೆ ಸರಿಯಾದ ಮೂಹರ್ತ ಯಾವುದು – ಚಂದ್ರಗ್ರಹಣದ ಎಫೆಕ್ಟ್ ಇದರ ಮೇಲೆ ಇದ್ಯಾ?

ರಾಖಿ ಕಟ್ಟುವುದ್ದಕ್ಕೆ ಸರಿಯಾದ ಮೂಹರ್ತ ಯಾವುದು – ಚಂದ್ರಗ್ರಹಣದ ಎಫೆಕ್ಟ್ ಇದರ ಮೇಲೆ ಇದ್ಯಾ?

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಪವಿತ್ರ ಬಂಧವನ್ನು ಸಂಕೇತಿಸುವ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ಸಲ ರಕ್ಷಾ ಬಂಧನ 27 ಅಥನಾ 28ಕ್ಕಾ ಅನ್ನೋ ಕನ್ಫ್ಯೂಸ್ ಇದೆ. ಹಾಗಿದ್ರೆ ಸರಿಯಾದ ದಿನ ಯಾವುದು ಅನ್ನೋದ್ದನ್ನ ತಿಳಿದುಕೊಳ್ಳೋಣ.

ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯು ಆಗಸ್ಟ್ 27 ರಂದು ಬೆಳಿಗ್ಗೆ 9:08 ಕ್ಕೆ ಪ್ರಾರಂಭವಾಗಿ, ಆಗಸ್ಟ್ 28 ರಂದು ಬೆಳಿಗ್ಗೆ 9:48 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯನ್ನು (ಸೂರ್ಯೋದಯದ ಸಮಯದ ತಿಥಿ) ಪ್ರಮುಖವಾಗಿ ಪರಿಗಣಿಸುವುದರಿಂದ, ಜ್ಯೋತಿಷಿಗಳು  ಆಗಸ್ಟ್ 28 ರಂದು ರಕ್ಷಾ ಬಂಧನವನ್ನು ಆಚರಿಸುವುದು ಶಾಸ್ತ್ರಸಮ್ಮತ ಎಂದು ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 28 ರಂದು ರಾಖಿ ಕಟ್ಟಲು ಪಂಚಾಂಗದ ಪ್ರಕಾರ ಅತ್ಯುತ್ತಮ ಮುಹೂರ್ತ 

  • ಬೆಳಗಿನ ಪ್ರಮುಖ ಮುಹೂರ್ತ: ಬೆಳಿಗ್ಗೆ 6:23 ರಿಂದ ಬೆಳಿಗ್ಗೆ 9:48 ರವರೆಗೆ.
  • ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:14 ರಿಂದ ಮಧ್ಯಾಹ್ನ 1:05 ರವರೆಗೆ.

ಈ ವರ್ಷದ ಎರಡನೇ ಚಂದ್ರಗ್ರಹಣವು ರಕ್ಷಾ ಬಂಧನದ ದಿನವೇ ಅಂದರೆ ಆಗಸ್ಟ್ 28 ರಂದು ಸಂಭವಿಸಲಿದೆ. ಈ ಗ್ರಹಣವು ಕನ್ಯಾರಾಶಿಯಲ್ಲಿ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8:04 ರಿಂದ ಬೆಳಿಗ್ಗೆ 11:22 ರವರೆಗೆ ಇರಲಿದೆ. ಆದಾಗ್ಯೂ, ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಧಾರ್ಮಿಕ ನಿಯಮಗಳ ಪ್ರಕಾರ, ಭಾರತದಲ್ಲಿ ಕಾಣಿಸದ ಗ್ರಹಣದ ಸೂತಕ ಅವಧಿ ಅಥವಾ ನಿಯಮಗಳು ಇಲ್ಲಿ ಅನ್ವಯಿಸುವುದಿಲ್ಲ. ಆದ್ದರಿಂದ, ಸಹೋದರಿಯರು ಯಾವುದೇ ಆತಂಕವಿಲ್ಲದೆ ಶುಭ ಮುಹೂರ್ತದಲ್ಲಿ ತಮ್ಮ ಸಹೋದರರಿಗೆ ರಾಖಿ ಕಟ್ಟಬಹುದು.

Kishor KV

Leave a Reply

Your email address will not be published. Required fields are marked *