ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಕ್ಕಸಪುರದೋಳ್ – ರಾಜ್ ಬಿ ಶೆಟ್ಟಿ VS ಅನಿರುದ್ಧ್ ಭಟ್ ಕಾಂಬಿನೇಷನ್ ಸೂಪರೋ ಸೂಪರ್

ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ರಕ್ಕಸಪುರದೋಳ್ –  ರಾಜ್ ಬಿ ಶೆಟ್ಟಿ VS ಅನಿರುದ್ಧ್ ಭಟ್ ಕಾಂಬಿನೇಷನ್ ಸೂಪರೋ ಸೂಪರ್

ಸ್ಯಾಂಡಲ್‌ವುಡ್‌ನಲ್ಲಿ ರಕ್ಕಸಪುರದೋಳ್ ಸಿನಿಮಾ ಸದ್ದಿಲ್ಲದೇ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿದವರು ಇಷ್ಟಪಟ್ಟಿದ್ದಾರೆ. ಪರ್ಫೆಕ್ಟ್‌ ಕ್ರೈಮ್ ಥ್ರಿಲ್ಲರ್, ಕಾಮಿಡಿ, ರಾಜ್‌ ಬಿ ಶೆಟ್ಟಿ ಅಭಿನಯ ಮತ್ತು ಅನಿರುದ್ಧ್ ಭಟ್ ನಟನೆ ಜೊತೆಗೆ ಪ್ರತಿಯೊಂದು ಪಾತ್ರ ಮತ್ತು ಇಡೀ ಸಿನಿಮಾ ಇಷ್ಟಪಟ್ಟು ನೋಡುವಂತೆ ಮಾಡಿದೆ.

ಇದನ್ನೂ ಓದಿ:ರಕ್ಕಸಪುರದೋಳ್‌ ಸಿನಿಮಾಕ್ಕೆ ಪ್ರೇಕ್ಷಕರು ಪಿಧಾ – ಪೊಲೀಸ್ ಪಾತ್ರದಲ್ಲಿ ಮಿಂಚಿದ ರಾಜ್. ಬಿ ಶೆಟ್ಟಿ

ರಕ್ಕಸಪುರದೋಳ್.. ಆರಂಭದಿಂದಲೇ ಸಸ್ಪೆನ್ಸ್ ಕಾಪಾಡಿಕೊಂಡು ಬಂದು ಕೊನೇವರೆಗೂ ಪ್ರೇಕ್ಷಕರಿಗೆ ಬೋರ್ ಹೊಡಿಸದರೆ, ಪ್ರತಿಯೊಂದು ಸೀನ್‌ನಲ್ಲೂ ಕುತೂಹಲ ಹೆಚ್ಚಿಸಿದ ಒಂದು ಸೂಪರ್ ಸಿನಿಮಾ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟನೆಯಂತೂ ಅಮೋಘ. ರಾಜ್ ಶೆಟ್ಟಿಗೆ ತೀವ್ರ ಸ್ಪರ್ಧೆ ಕೊಡು ರೀತಿಯಲ್ಲಿ ನಟಿಸಿದ್ದು ಯುವ ನಟ ಅನಿರುದ್ಧ್ ಭಟ್. ಸೈಕೋ ವಿಲನ್ ಆಗಿ ಕಾಡಿದ, ಕಾಡಿಸಿದ ಅನಿರುದ್ಧ್ ನಟನೆ ಬೇರೆ ಲೆವೆಲ್‌ನದ್ದು. ಇನ್ನು ಬಿ. ಸುರೇಶ್, ಗೋಪಾಲ ದೇಶಪಾಂಡೆ, ಸ್ವಾತಿಷ್ಟ, ಅರ್ಚನಾ ಕೊಟ್ಟಿಗೆ ಒಬ್ಬೊಬ್ಬರೂ ಕೂಡಾ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಸ್ಕಿಜೋಫ್ರೇನಿಯಾ ಕಾಯಿಲೆಯಿಂದಾಗಿ ರಕ್ಕಸಪುರ ಎಂಬ ಊರಿಗೆ ವರ್ಗವಾಗಿ ಬರುವ ಪೊಲೀಸ್ ಅಧಿಕಾರಿ ಶಿವ, ಅವನೇ ನಮ್ಮೂರಿನ ರಕ್ಕಸ ಎಂಬಂತೆ ಬಿಂಬಿಸುವ ಸಿದ್ದಯ್ಯ ಸ್ವಾಮಿ, ಸಿದ್ದಯ್ಯನಿಗೆ ಒಬ್ಬ ಶಿಷ್ಯ, ಶಿವ ಬಂದ ನಂತರ ನಡೆಯುವ ಕೊಲೆಗಳು,  ದಾರಿತಪ್ಪಿಸುವುದಕ್ಕೆ ಬರುವ ಕೊಳ್ಳಿದೆವ್ವ, ಇದೊಂಥರಾ, ಪರ್ಫೆಕ್ಟ್‌ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರವಿ ಸಾರಂಗ. ಇದರಲ್ಲಿ ಬರೆವಣಿಗೆ ಜೊತೆಗೆ ಕತೆಯೂ ಗಟ್ಟಿಯಾಗಿದೆ, ಚಿತ್ರಕತೆ ಚುರುಕಾಗಿದೆ.ರಾಜ್‌ ಬಿ ಶೆಟ್ಟಿ ಯೂನಿಫಾರ್ಮ್ ಇಲ್ಲದ ಎಲ್ಲೂ ದನಿಯೇರಿಸಿ ಮಾತಾಡದ ಪೊಲೀಸ್ ಅಧಿಕಾರಿಯಾಗಿ ಪಾತ್ರದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾರೆ. ಸ್ವಾತಿಷ್ಟ ಮತ್ತು ಅರ್ಚನಾ ಕೊಟ್ಟಿಗೆ ತಮ್ಮ ತಮ್ಮ ಪಾತ್ರವನ್ನು ಕತೆಯಿಂದಾಚೆ ಸರಿಯದಂತೆ ಅಚ್ಚುಕಟ್ಟಾಗಿ ನೋಡಿಕೊಂಡಿದ್ದಾರೆ. ಇವರೆಲ್ಲರ ನಡುವೆ ಗಮನ ಸೆಳೆಯುವುದು ಅನಿರುದ್ಧ ಭಟ್. ತನ್ನ ಪಾತ್ರಕ್ಕೆ ಇರಬೇಕಾದ ಉನ್ಮಾದ, ಕ್ರೋಧ ಮತ್ತು ಬಾಲಿಶ ವರ್ತನೆಯಲ್ಲಿ ನಟಿಸಿ, ತನ್ನೊಳಗಿನ ಪ್ರತಿಭೆಯನ್ನ ತೋರಿಸಿಕೊಂಡಿದ್ದಾರೆ. ಕೇವಲ ನೋಟದಲ್ಲೇ ಭಯ ಮತ್ತು ಕುತೂಹಲ ಎರಡನ್ನೂ ಹುಟ್ಟಿಸುತ್ತಾರೆ ಅನಿರುದ್ಧ್. ಕನ್ನಡ ಚಿತ್ರರಂಗ ಅವರನ್ನು ಸಮರ್ಥವಾಗಿ ಬಳಸಿಕೊಂಡರೆ ಮತ್ತೊಬ್ಬ ಅತ್ಯುತ್ತಮ ನಟ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯಬಹುದು. ವಿಲಿಯಂ ಡೇವಿಡ್ ಛಾಯಾಗ್ರಹಣದಲ್ಲಿ ಹಳ್ಳಿ ನಿಗೂಢವಾಗುತ್ತಾ ಹೋಗುತ್ತದೆ. ಕೆ ಎಂ ಪ್ರಕಾಶ್ ಘಟನೆಗಳ ತೀವ್ರತೆ ಹೆಚ್ಚುವಂತೆ ಚಿತ್ರವನ್ನು ಹೊಲಿದಿದ್ದಾರೆ. ಕಲಾ ನಿರ್ದೇಶನ ಕೂಡ ಈ ಚಿತ್ರದ ಪರಿಣಾಮ ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ.

ಈ ಸಿನಿಮಾ ನಮ್ಮನ್ನು ನೋಡುವಷ್ಟು ಹೊತ್ತೂ ಆವರಿಸಿಕೊಳ್ಳುತ್ತದೆ.  ಸ್ಯಾಂಡಲ್‌ವುಡ್‌ಗೆ ಸಿಕ್ಕ ಭರವಸೆಯ ನಟ ಅನಿರುದ್ಧ್ ಜೊತೆಗೆ ಸ್ಯಾಂಡಲ್‌ವುಡ್‌ನ ನಂಬಿಕೆಯ ನಟ ರಾಜ್ ಬಿ ಶೆಟ್ಟಿ ನಿಜಕ್ಕೂ ವೀಕ್ಷಕರನ್ನು ಥಿಯೇಟರ್ ಕಡೆ ಎಳೆದುಕೊಂಡು ಬರುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *