ರಕ್ಕಸಪುರದೋಳ್ ಗೆದ್ದ ವಿಲನ್ – ರಾಜ್ ಎದುರು ರಕ್ಕಸನಂತೆ ಅನಿರುದ್ಧ್ ಭಟ್ ನಟನೆ

ಅನಿರುದ್ಧ್ ಭಟ್ . ರಕ್ಕಸಪುರದೋಳ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮುಂದೆ ರಕ್ಕಸನಂತೆ ಅಬ್ಬರಿಸಿ ನಟಭಯಂಕರ. ಇವರ ಅಭಿಯನ ನೋಡಿದ್ರೆ ಈತ ಹೊಸನಬನಲ್ಲ ಅನ್ಸುತ್ತೆ. ಒಂದು ಕ್ಷಣ ಈತನೇ ಹೀರೋ ಅನ್ಸುತ್ತೆ.. ಆ ಮಟ್ಟಿಗೆ ನೆಗೆಟಿವ್ ರೋಲ್ನಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರ ಬಗ್ಗೆ ಹೇಳಲ್ಲ, ಯಾಕಂದ್ರೆ ಈ ಸಿನಿಮಾ ಮುಂದೆ ನೋಡುವರಿಗೆ ಅದರ ಇಂಟ್ರೆಸ್ಟ್ ಹೋಗುತ್ತೆ.. ಡಬ್ಬಲ್ ಆ್ಯಕ್ಟಿಂಗ್ ಮಾಡಿರೋ ಅನಿರುದ್ಧ್ ಭಟ್ ಆದಿ ಮತ್ತು ಅರುಣ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: ಆಮೆ ಉಂಗುರ ಹಾಕುತ್ತೀರಾ? – ಈ ನಿಯಮ ಕಡ್ಡಾಯವಾಗಿ ಪಾಲಿಸಿ
ಅಂದಹಾಗೇ ಈ ಅನಿರುದ್ದ್ ಹುಟ್ಟಿದ್ದು ಸುಳ್ಯದಲ್ಲಿ. ಬೆಳೆದಿದ್ದು ಕೊಡಗಿನ ಕುಶಾಲನಗರದಲ್ಲಿ. ಜಿಕೆವಿಕೆಯಲ್ಲಿ ಅಗ್ರಿಕಲ್ಚರ್ ಬಿಎಸ್ಸಿ ಓದಿರೋ ಇವರು 2017ರಲ್ಲಿ ಶಾರ್ಟ್ ಫಿಲ್ಮ್ಗಳಲ್ಲಿ ನಟಿಸೋಕೆ ಆರಂಭಿಸಿದ್ರು. ನಂತ್ರ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸದ್ದಿಲ್ಲದೇ ಎನ್ನುವ ಶಾರ್ಟ್ ಫಿಲ್ಮ್ ನೋಡಿದವರು ಈ ಚಿತ್ರಕ್ಕೆ ಆಡಿಷನ್ ಕೊಡುವಂತೆ ಕೇಳಿದ್ದರು. ಹೀಗಾಗಿ ಇವರಿಗೆ ಸಿನಿಮಾ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲ ಈ ಅನಿರುದ್ಧ್ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಆಮೇಲೆ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲಿ ಕೆಲಸ ಮಾಡಿದ್ದ ‘ರಕ್ಕಸಪುರದೋಳ್’ ಚಿತ್ರದ ಸಹ ನಿರ್ದೇಶಕರೊಬ್ಬರು. ರಕ್ಕಸಪುರದೋಳ್ ಸಿನಿಮಾಕ್ಕೆ ಆಡಿಷನ್ ಕೊಡಲು ಹೇಳಿದ್ರು. ಆಡಿಷನ್ ಕೊಟ್ಟ ಮೇಲೆ ಓಕೆ ಆಯಿತು.
ಇವರೇ ಹೇಳಿದಂತೆ ಇವರು ಹೀರೊ ಆಗಬೇಕು ಅಂತಲೇ ಚಿತ್ರರಂಗಕ್ಕೆ ಬಂದವರಂತೆ.. ಆದ್ರೆ ಹೀರೋ ಚಾನ್ಸ್ ಸಿಗದಿದ್ದಕ್ಕೆ ಸಿಕ್ಕ ಸೆಣ್ಣ ಪುಟ್ಟ ಅವಕಾಶಗಳಲ್ಲಿ ನಟಿಸುತ್ತಿದ್ದಾರೆ. ಆದ್ರೆ ರಕ್ಕಸಪುರದೋಳ್ ನಲ್ಲಿ ವಿಲನ್ ಆಗಿ ಇಡೀ ಸಿನಿ ರಸಿಕರ ಮನಸ್ಸು ಗೆದ್ದಿದ್ದಾರೆ. ಅದ್ಫುತವಾಗಿ ಆ್ಯಕ್ಟ್ ಮಾಡಿದ್ದಾರೆ. ಇವರಿಗೆ ಜಸ್ಟ್ 28 ವರ್ಷ ವಯಸ್ಸು. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಇವರ ರಕ್ಕಸಪುರದೋಳ್ ಸಿನಿಮಾದಲ್ಲಿ ನೋಡಿದವರು ಇವರಿಗೆ ರಂಗಭೂಮಿ ಹಿನ್ನಲೆ ಇರಬಹುದು ಹೀಗಾಗಿ ಅಷ್ಟು ಅದ್ಭುತವಾಗಿ ಆ್ಯಕ್ಟ್ ಮಾಡಿದ್ದಾರೆ ಅಂತ ಅಂದುಕೊಳ್ತಾರೆ. ಆದ್ರೆ ಇವರು ರಂಗಭೂಮಿ ಕಲಾವಿದ ಅಲ್ಲ, ಶಾರ್ಟ್ ಫಿಲ್ಮ್ಗಳಲ್ಲಿ ನಟಿಸುತ್ತಾ ನಟನೆಯ ಪಟ್ಟುಗಳನ್ನು ಕಲಿತಿದ್ದಾರೆ.
ಇನ್ನು ರಕ್ಕಸಪುರದೋಳ್ ಸಿನಿಮಾಕ್ಕೆ ಇವರು ಸಾಕಷ್ಟು ತಯಾರಿ ನಡೆಸಿದ್ದಾರೆ. ಡಬ್ಬಲ್ ಆ್ಯಕ್ಟ್ಗೆ ತಕ್ಕಂತೆ ಇವರು ರೆಡಿಯಾಗಿದ್ರು. ಎಲ್ಲೂ ಕೂಡ ಓವರ್ ಆಕ್ಟಿಂಗ್ ಅನಿಸದೆ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ. ಗುರುದೇವ್ ಹೊಯ್ಸಳ’, ‘ಮ್ಯಾಕ್ಸ್’ ಬಳಿಕ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಇವರು 4ನೇ ಸಿನಿಮಾವಾದ ರಕ್ಕಸಪುರದೋಳ್ ಸಿನಿಮಾದಲ್ಲಿ ಧೋಳೆಬ್ಬಿಸಿ, ಅದ್ಭುತವಾಗಿ ಅಭಿನಯಿಸಿದ್ದಾರೆ. ಇವರು ಮುಂದೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದು. ಇವರ ಅಭಿನಯವೇ ಇವರನ್ನ ಕೈ ಹಿಡಿದು, ಇವರಿಗೆ ದೊಡ್ಡ ಅವಕಾಶವನ್ನ ಕೊಡುವುದಂತೂ ಪಕ್ಕಾ..

ನೋಡಿರಿ

