ಮುಗಿಯುತ್ತಿಲ್ಲ ರಾಖಿ ಮದುವೆ ಗೋಳು – ಆದಿಲ್ ಜೊತೆ ಈಗ ಸಂಸಾರವೂ ಹಾಳು

ಮುಗಿಯುತ್ತಿಲ್ಲ ರಾಖಿ ಮದುವೆ ಗೋಳು – ಆದಿಲ್ ಜೊತೆ ಈಗ ಸಂಸಾರವೂ ಹಾಳು

ಮೊದಲು ಮದುವೆ ವಿಚಾರ ಬಹಿರಂಗ ಪಡಿಸಿಲ್ಲ ಅನ್ನೋ ನೋವು. ಮದುವೆ ವಿಚಾರ ಅಧಿಕೃತವಾದ ಮೇಲೆ ಚೆನ್ನಾಗಿಲ್ಲ ಅನ್ನೋ ನೋವು. ಹೀಗೆ ನಟಿ ರಾಖಿ ಸಾವಂತ್ ವೈವಾಹಿಕ ಜೀವನ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಮೈಸೂರು ಹುಡುಗ ಆದಿಲ್ , ರಾಖಿ ಸಾವಂತ್ ಜೊತೆ ಮದುವೆಯನ್ನು ಕೊನೆಗೂ ಬಹಿರಂಗ ಪಡಿಸಿದ್ದ. ಇದಾಗಿ ಎರಡು ತಿಂಗಳು ಕೂಡಾ ಕಳೆದಿಲ್ಲ. ಆಗಲೇ ಇಬ್ಬರೂ ಒಬ್ಬರ ಮೇಲೆ ಒಬ್ಬರು ದೂರು ಹೇಳಿಕೊಳ್ಳುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:  ರಿಕ್ಕಿ ಕೇಜ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ – ಮೂರನೇ ಬಾರಿಗೆ ಪ್ರಶಸ್ತಿ ಪಡೆದ ಹೆಗ್ಗಳಿಕೆ

ಮೈಸೂರು ಹುಡುಗ ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಹೇಳಿಕೊಂಡಿದ್ದರು. ತಮ್ಮ ಮದುವೆಯಾಗಿ ಆರೇಳು ತಿಂಗಳು ಕಳೆದರೂ, ಆದಿಲ್ ಗಾಗಿ ಮದುವೆ ವಿಚಾರ ಮುಚ್ಚಿಟ್ಟಿದ್ದಾಗಿಯೂ ತಿಳಿಸಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಆದಿಲ್ ಕೂಡ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದ. ಕೆಲ ಕಾರಣಗಳಿಂದಾಗಿ ಬಹಿರಂಗ ಪಡಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದ. ಇನ್ನೇನು ಮದುವೆ ವಿಚಾರ ಸುಖಾಂತ್ಯ ಕಾಣಲಿದೆ ಎನ್ನುವ ಹೊತ್ತಿನಲ್ಲಿ, ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎಂದು ರಾಖಿ ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲದೇ, ನಮ್ಮಿಬ್ಬರ ನಡುವೆ ಯಾವುದೂ ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದಾರೆ. ರಾಖಿ ತಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಆದಿಲ್ ಆರೋಪವಾದರೆ, ಆತನಿಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ ಅನ್ನೋದು ರಾಖಿ ಆರೋಪ. ಗಂಡ ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ಪತಿಯ ವಿರುದ್ಧ ರಾಖಿ ಸಾವಂತ್ ಮುಂಬೈನ ಓಶಿವಾರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಠಾಣಾ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.

suddiyaana