‘ಆದಿಲ್ ಜೈಲಿನಿಂದಲೇ ಮೆಸೇಜ್ ಮಾಡುತ್ತಿದ್ದಾನೆ’ – ಗಂಡನನ್ನು ಕ್ಷಮಿಸಲ್ಲ ಎಂದ ರಾಖಿ ಸಾವಂತ್!

‘ಆದಿಲ್ ಜೈಲಿನಿಂದಲೇ ಮೆಸೇಜ್ ಮಾಡುತ್ತಿದ್ದಾನೆ’ – ಗಂಡನನ್ನು ಕ್ಷಮಿಸಲ್ಲ ಎಂದ ರಾಖಿ ಸಾವಂತ್!

ಬಾಲಿವುಡ್ ನಟಿ ರಾಖಿ ಸಾವಂತ್ ಮದುವೆಯಾಗಿದ್ದೇ ಆಗಿದ್ದು. ದಿನಕ್ಕೊಂದು ರಾಗ ಇಲ್ಲದೇ ರಾಖಿ ಸಾವಂತ್‌ಗೆ ನೆಮ್ಮದಿಯೇ ಇಲ್ಲ. ಎಲ್ಲಿಯೇ ಹೋದರೂ ಒಂದು ಬಾರಿಯಾದರೂ ತನ್ನ ಗಂಡ ಆದಿಲ್ ಬಗ್ಗೆ ಮಾತನಾಡದೇ ಇರುವುದಿಲ್ಲ. ಈ ಬಾರಿಯೂ ರಾಖಿ ಸಾವಂತ್ ತನ್ನ ಗಂಡ ಆದಿಲ್ ಬಗ್ಗೆ ಹೊಸ ರಗಳೆ ಶುರುಮಾಡಿದ್ದಾನೆ. ಜೈಲಲ್ಲಿದ್ದರೂ ಆದಿಲ್ ಕಾಟ ತಪ್ಪುತ್ತಿಲ್ಲ. ಕಂಬಿ ಹಿಂದೆ ಇದ್ದರೂ ಕ್ಷಮಿಸಿಬಿಡು ಅಂತಾ ಮೆಸೇಜ್ ಮಾಡುತ್ತಿದ್ದಾನೆ. ಏನೇ ಆದರೂ ನಾನು ಕ್ಷಮಿಸುವ ಮಾತೇ ಇಲ್ಲ ಅಂತಾ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನ್ಯಾಯ ಕೊಡಿಸಿ ಎಂದು ಮೈಸೂರಿಗೆ ಬಂದ ರಾಖಿ ಸಾವಂತ್ – ತಪ್ಪಾಗಿ ನಮಾಜ್ ಮಾಡಿ ಎದ್ವಾತದ್ವಾ ಟ್ರೋಲ್..!

ರಾಖಿ ಸಾವಂತ್ ಅವರು (Rakhi Sawant) ಈಗ ದುಬೈನಲ್ಲಿ ನಟನೆ, ಡ್ಯಾನ್ಸ್ ಹೇಳಿಕೊಡುವ ‘ರಾಖಿ ಸಾವಂತ್ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡುತ್ತ ರಾಖಿ ಸಾವಂತ್ ಆದಿಲ್ ಬಗ್ಗೆಯೂ ಮಾತನಾಡಿದ್ದಾರೆ. “ನಾನು ತುಂಬ ಸ್ಟ್ರಾಂಗ್. ನನ್ನನ್ನು ನಾನು ಮುಗಿಸಿಕೊಂಡಿದ್ದೆ, ಆದರೆ ಎಲ್ಲ ಅಭಿಮಾನಿಗಳಿಂದ ಗಟ್ಟಿಯಾಗಿದ್ದೇನೆ. ಮೈಸೂರಿನ ಜೈಲಿನಲ್ಲಿದ್ದುಕೊಂಡು ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದೇನೆ. ನಾನು ಅವನಿಗೆ ಕಾಲಿಗೆ ಬಿದ್ದು ಮನೆಗೆ ಬಾ, ಬೇರೆದೆಲ್ಲ ಬಿಡು ಅಂತ ಹೇಳಿದ್ದರೂ ಕೇಳಿಲ್ಲ. ಆದಿಲ್ ಖುರಾನ್ ಮೇಲೆ ಆಣೆ ಮಾಡಿ ಸರಿಯಾಗಿ ಇರ್ತೀನಿ ಅಂತ ಹೇಳಬೇಕು , ಕೋರ್ಟ್‌ನಲ್ಲಿ ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು, ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್‌ನನ್ನು ಕ್ಷಮಿಸುವುದಿಲ್ಲ” ಎಂದು ರಾಖಿ ಸಾವಂತ್ ಹೇಳಿದ್ದಾರೆ. “ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರೋಕೆ ಇಷ್ಟಪಡ್ತಿದ್ದಾನೆ. ಅವನು ವಾಪಾಸ್ ಬರೋದು ನನ್ನನ್ನು ಕೊಲ್ಲೋದಿಕ್ಕಾ? ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು. ಹಾಗಂತಾ ನಾನು ಆದಿಲ್‌ಗೆ ವಿಚ್ಛೇದನ ಕೊಡೋದಿಲ್ಲ. ಜೀವನದಲ್ಲಿ ನಾನು ಇನ್ಮುಂದೆ ಮದುವೆ ಆಗೋದಿಲ್ಲ ಎಂದು ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಾನು ಈಗಾಗಲೇ ಸತ್ತುಹೋಗಿದ್ದೇನೆ, ಹೃದಯವೂ ಸತ್ತು ಹೋಗಿದೆ. ಆದರೆ ಉಸಿರಾಡುತ್ತಿದ್ದೇನೆ ಅಷ್ಟೇ. ಎಲ್ಲ ಕೆಲಸ ನಿಭಾಯಿಸುವ ಮಹಿಳೆಯವರಿಗೆ ನೋವು ಕೊಡಬೇಡಿ, ಹೊಡೆಯಬೇಡಿ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ರಾಖಿ ಸಾವಂತ್ ಅವರು ಕಳೆದ ಜುಲೈನಲ್ಲಿ ಮೈಸೂರು ಮೂಲದ ಆದಿಲ್ ಖಾನ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆ ನಂತರ ಆದಿಲ್ ಅಕ್ರಮ ಸಂಬಂಧ ಹೊಂದಿದ್ದಾನೆ, ನನಗೆ ಹೊಡೆದಿದ್ದಾನೆ, ನನ್ನ ಬ್ಯಾಂಕ್‌ನಲ್ಲಿರುವ ಹಣ ಪಡೆದಿದ್ದಾನೆ ಎಂದು ಆರೋಪ ಮಾಡಿದ್ದರು. ಈ ವಿಚಾರವಾಗಿ ಅವರು ಮುಂಬೈನಲ್ಲಿ ಆದಿಲ್ ವಿರುದ್ಧ ಪೊಲೀಸ್ ದೂರು ನೀಡಿದ್ದರು.

suddiyaana