ರಾಖಿ ಸಾವಂತ್‌ಗೆ ಶಾಕ್ ಮೇಲೆ ಶಾಕ್! – ಸೀಕ್ರೆಟ್ ಆಗಿ ಎರಡನೇ ಮದುವೆ ಆದ ಪತಿ ಆದಿಲ್ ಖಾನ್!
ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ರಾಖಿ ಸಾವಂತ್ ಮತ್ತು ಅವರ ಪತಿ ಆದಿಲ್ ಖಾನ್ ದುರಾನಿ ನಡುವಿನ ಸಂಬಂಧವು ಬಹಳ ದಿನಗಳಿಂದ ಸುದ್ದಿಯಲ್ಲಿದೆ. ಇದೀಗ ಆದಿಲ್ ಜೈಪುರದಲ್ಲಿ ರಹಸ್ಯವಾಗಿ ಮತ್ತೊಂದು ಮದುವೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಹೆಗಡೆ ಹಳೇ ವರಸೆ – ಸಂಸದ ಅನಂತಕುಮಾರ್ ಹೆಗಡೆ ಸರ್ವಾಧಿಕಾರಿ ವರ್ತನೆ ಬಿಜೆಪಿಗೆ ಮುಜುಗರ
ಹೌದು ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಹಾಗೂ ಬಿಗ್ ಬಾಸ್ ಹಿಂದಿ 12’ರ ಸ್ಪರ್ಧಿ ಸೋಮಿ ಖಾನ್ ಜೈಪುರನಲ್ಲಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ರಾಖಿ ಸಾವಂತ್ ಅವರಿಂದ ದೂರವಾದ್ಮೇಲೆ ಇದೀಗ ಗುಟ್ಟಾಗಿ ನಟಿ ಸೋಮಿ ಖಾನ್ ಜೊತೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾರ್ಚ್ 2ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನಿಖಾ ಆಗಿದ್ದಾರೆ. ನಟಿ ಸೋಮಿ ಖಾನ್ ಜೊತೆಗಿನ ಮದುವೆ ಬಗ್ಗೆ ಆದಿಲ್ ಯಾವುದೇ ಮಾಹಿತಿ ನೀಡಿಲ್ಲ.
ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆ ರಾಖಿ ಸಾವಂತ್ ಮದುವೆ ಆಗಿದ್ದ ವಿಷಯ ಬಹಳ ದಿನಗಳ ಬಳಿಕ ಹೊರಬಿತ್ತು. ಆದರೆ ಅವರಿಬ್ಬರು ಹೆಚ್ಚು ದಿನಗಳ ಕಾಲ ಜೊತೆಯಾಗಿ ಸಂಸಾರ ಮಾಡಲಿಲ್ಲ. ಇಬ್ಬರ ನಡುವೆ ಬರೀ ಕಲಹಗಳೇ ಹೆಚ್ಚಾಗಿತ್ತು. ಅದರಿಂದ ಆದಿಲ್ ಖಾನ್ ಜೈಲಿಗೂ ಹೋಗಬೇಕಾಯಿತು. ಜೈಲಿನಿಂದ ಹೊರಬರುತ್ತಿದ್ದಂತೆ ಆದಿಲ್ ಖಾನ್ ಹಾಗೂ ರಾಖಿ ಸಾವಂತ್ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಲೇ ಇದ್ದರು. ಇಷ್ಟೆಲ್ಲಾ ಆದ್ಮೇಲೆ ಏನಾಯ್ತು ಎಂದು ಸ್ಪಷ್ಟನೆ ಸಿಕ್ಕಿಲ್ಲ. ಇಬ್ಬರೂ ಸೈಲೆಂಟ್ ಆಗಿದ್ದರು. ಆದರೆ ಈ ಮದುವೆ ವಿಚಾರದ ಬಗ್ಗೆ ರಾಖಿ ಹೇಗೆ ರಿಯಾಕ್ಟ್ ಮಾಡುತ್ತಾರೆ ಅಂತಾ ಜನರು ಕುತೂಹಲದಿಂದ ನೋಡ್ತಾ ಇದ್ದಾರೆ.