ಇದು ನನ್ನ ಮೊದಲ ಮದುವೆ! – ಎರಡನೇ ಮದುವೆಯಾದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ

 ಇದು ನನ್ನ ಮೊದಲ ಮದುವೆ! – ಎರಡನೇ ಮದುವೆಯಾದ ಬಳಿಕ ಉಲ್ಟಾ ಹೊಡೆದ ರಾಖಿ ಸಾವಂತ್ ಮಾಜಿ ಪತಿ

ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ರಾಖಿ ಸಾವಂತ್ ಮತ್ತು ಅವರ ಪತಿ ಆದಿಲ್ ಖಾನ್ ದುರಾನಿ ನಡುವಿನ ಸಂಬಂಧವು ಬಹಳ ದಿನಗಳಿಂದ ಸುದ್ದಿಯಲ್ಲಿದೆ. ಇದೀಗ ಆದಿಲ್ ಜೈಪುರದಲ್ಲಿ ರಹಸ್ಯವಾಗಿ ಮತ್ತೊಂದು ಮದುವೆಯಾಗಿದ್ದಾರೆ. ಮದುವೆ ಬೆನ್ನಲ್ಲೇ ಆದಿಲ್‌ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೇ ತನ್ನ ಮೊದಲ ಮದುವೆ ಅಂತಾ ಆದಿಲ್‌ ಹೇಳಿದ್ದಾರೆ.

ಇದನ್ನೂ ಓದಿ: ಈ ದೇವಾಲಯ ದಿನದಲ್ಲಿ ಎರಡು ಬಾರಿ ಮಾಯವಾಗುತ್ತದೆ – ಸ್ತಂಭೇಶ್ವರ ದೇಗುಲದಲ್ಲಿ ಇಂದಿಗೂ ನಡೆಯುತ್ತದೆ ವಿಸ್ಮಯ..!

ರಾಖಿ ಸಾವಂತ್‌ ಹಾಗೂ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಇಬ್ಬರು ಈ ಮೊದಲು ಮದುವೆ ಆಗಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಇಬ್ಬರೂ ಗುಟ್ಟಾಗಿ ಇಟ್ಟಿದ್ದರು. ಆದಿಲ್​ಗೋಸ್ಕರ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದರು. ಈ ವಿಚಾರವನ್ನು ರಾಖಿ ರಿವೀಲ್ ಮಾಡಿದ ಬಳಿಕ ಇದನ್ನು ಆದಿಲ್ ಒಪ್ಪಿಕೊಳ್ಳೋಕೆ ರೆಡಿ ಇರಲಿಲ್ಲ. ಹೀಗಾಗಿ ರಾಖಿ ಅವರು ಆದಿಲ್ ಮೇಲೆ ಕೇಸ್ ಹಾಕಿದರು. ಆದಿಲ್​ ಜೈಲಿನಲ್ಲಿ ಸಮಯ ಕಳೆದು ಬರುವಂತೆ ಆಯಿತು. ನಂತರ ಇಬ್ಬರೂ ಬೇರೆ ಆದರು ಈಗ ಆದಿಲ್ ಬಿಗ್ ಬಾಸ್ ಖ್ಯಾತಿಯ ಸೋಮಿ ಖಾನ್​ ಜೊತೆ ಮದುವೆ ಆಗಿದ್ದಾರೆ. ಈ ಬೆನ್ನಲ್ಲೇ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆದಿಲ್‌ ಖಾನ್‌,  ‘ಇದು ನನ್ನ ಮೊದಲ ಮದುವೆ. ನಾವು ಬೆಂಗಳೂರಿನಲ್ಲಿ ಇದ್ದೇವೆ. ಮುಂಬೈಗೆ ಬಂದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತೇವೆ. ನಾನು ಎಲ್ಲವನ್ನೂ ಇಂಚಿಂಚಾಗಿ ವಿವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಅಸಲಿಗೆ ನಡೆದಿದ್ದು ಏನು ಎಂಬ ವಿಚಾರವನ್ನು ಅವರು ಬಿಚ್ಚಿಡೋ ಸಾಧ್ಯತೆ ಇದೆ.

Shwetha M