ಬಾಲಿವುಡ್‌ ಡ್ರಾಮಾ ಕ್ವೀನ್‌ ಆಸ್ಪತ್ರೆಗೆ ದಾಖಲು! – ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಾಖಿ ಸಾವಂತ್‌?

ಬಾಲಿವುಡ್‌ ಡ್ರಾಮಾ ಕ್ವೀನ್‌ ಆಸ್ಪತ್ರೆಗೆ ದಾಖಲು! – ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಾಖಿ ಸಾವಂತ್‌?

ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ರಾಖಿ ಸಾವಂತ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲೂ ಆಕೆ ಹವಾ ಮೈಂಟೈನ್‌ ಮಾಡಿದ್ದಾರೆ. ತನ್ನ ಸ್ಟೈಲ್ ಮತ್ತು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರೋದು ಡೌಟ್? – ಫ್ಲೈಟ್‌ ಟಿಕೆಟ್ ರದ್ದು.. ಹಣ ವಾಪಸ್ ಪಡೆಯದೆ ಗೊಂದಲ ಸೃಷ್ಟಿಸಿದ  ನಡೆ

ಹೌದು, ನಟಿ ರಾಖಿ ಸಾವಂತ್‌​ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಗ್ಗೆ ರಾಖಿ ಸಾವಂತ್ ಪಾಪರಾಜಿಯೊಬ್ಬರಿಗೆ ಸಂದೇಶ ಕಳಿಸಿ ತಿಳಿಸಿದ್ದಾರಂತೆ. ಆ ವಿಷಯನ್ನು ಪಾಪರಾಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಿಜಕ್ಕೂ ರಾಖಿ ಸಾವಂತ್ ಆರೋಗ್ಯ ಹದಗೆಟ್ಟಿದೆಯೇ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ.

ವೈರಲ್‌ ಆದ ಫೋಟೋದಲ್ಲಿ ರಾಖಿಯ ಒಂದು ಕೈಗೆ ಆಕ್ಸಿಮೀಟರ್ ಮತ್ತೊಂದು ಕೈಗೆ ಬಿಪಿ ಯಂತ್ರವನ್ನು ಹಾಕಿ, ರಾಖಿ ಬೆಡ್​ ಮೇಲೆ ಮಲಗಿರುವ ಚಿತ್ರವನ್ನು ಪಾಪರಾಜಿಯೊಬ್ಬರು ಹಂಚಿಕೊಂಡಿದ್ದಾರೆ. ರಾಖಿಗೆ ಹೃದಯ ಸಮಸ್ಯೆ ಎದುರಾಗಿದೆ ಹಾಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಾಪರಾಜಿ ಬರೆದುಕೊಂಡಿದ್ದಾರೆ. ರಾಖಿಯ ಮಾಜಿ ಪತಿ ರಿತೇಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮಗೆ ರಾಖಿಯ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ತಿಳಿದ ಕೂಡಲೇ ತಿಳಿಸುವುದಾಗಿ ಹೇಳಿದ್ದಾರೆ.

ಇನ್ನು ರಾಖಿ ಸಾವಂತ್‌ ಮಾಜಿ ಪತಿ, ಮೈಸೂರಿನ ಆದಿಲ್, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದು ತಮ್ಮ ಪಾಲಿನ ಅತ್ಯಂತ ಖುಷಿಯ ದಿನ ಎಂದು ಬರೆದುಕೊಂಡಿದ್ದಾರೆ. ರಾಖಿ ಸಾವಂತ್​ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಇನ್ನು ನಾಲ್ಕು ವಾರಗಳ ಒಳಗಾಗಿ ರಾಖಿ ಸಾವಂತ್ ಮುಂಬೈ ಪೊಲೀಸರಿಗೆ ಶರಣಾಗಬೇಕು ಎಂದು ಸೂಚಿಸಿದೆ ಎಂದಿದ್ದಾರೆ. ಸುಪ್ರೀಂಕೋರ್ಟ್​ನ ಆದೇಶ ಬಂದಿದ್ದಕ್ಕೆಂದೇ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದರೆ ಎಂಬ ಅನುಮಾನವೂ ಮೂಡಿದೆ.

Shwetha M