2ನೇ ಸ್ವದೇಶಿ ವಿಮಾನವಾಹಕ ನೌಕೆಗೆ ಸಿದ್ದತೆ ಶುರು

2ನೇ ಸ್ವದೇಶಿ ವಿಮಾನವಾಹಕ ನೌಕೆಗೆ ಸಿದ್ದತೆ ಶುರು

ನವದೆಹಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ಯಶಸ್ವಿಯಾದ ಬೆನ್ನಲ್ಲೇ ಭಾರತ ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆ ಸಿದ್ಧಪಡಿಸುವ ಕೆಲಸ ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ

ಈ ಕುರಿತು ಮಾತನಾಡಿರುವ ಸಚಿವ ರಾಜನಾಥ್ ಸಿಂಗ್, ‘ಭಾರತ ಸ್ವತಂತ್ರಗೊಂಡಾಗ ದೇಶದಲ್ಲಿ ಒಂದು ಸೂಜಿಯನ್ನೂ ತಯಾರಿಸಲಿಲ್ಲ. ಆದರೆ 2022ರಲ್ಲಿ ನಾವು ಐಎನ್‌ಎಸ್ ವಿಕ್ರಾಂತ್‌ನಂತಹ ಬೃಹತ್ ವಿಮಾನವಾಹಕ ನೌಕೆಯನ್ನೇ ನಿರ್ಮಿಸಿದ್ದೇವೆ’ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿರುವ ಯುಎಸ್, ಯುಕೆ, ಫ್ರಾನ್ಸ್, ಜರ್ಮನಿ, ಚೀನಾ ಮತ್ತು ಜಪಾನ್ ನಂತರ ಭಾರತ ಇಂದು ಸ್ವದೇಶಿ ವಿಮಾನವಾಹಕ ಹೊಂದಿದ 7ನೇ ರಾಷ್ಟ್ರವಾಗಿದೆ. ವಿಕ್ರಾಂತ್ ಯಶಸ್ವಿಯಾದ ಬೆನ್ನಲ್ಲೇ ಭಾರತದ 2ನೇ ವಿಮಾನವಾಹಕ ನೌಕೆಯ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ಐಎನ್‌ಐಸ್ ವಿಕ್ರಾಂತ್ ಶೇ.73-74 ರಷ್ಟು ಸ್ವದೇಶೀಕರಣವನ್ನು ಸಾಧಿಸಿದೆ. ಸದ್ಯ ಭಾರತ, ರಷ್ಯಾ ನಿರ್ಮಿತ ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಸ್ವದೇಸಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಗಳನ್ನು ನಿರ್ವಹಿಸುತ್ತಿದೆ.

suddiyaana