ರಜನಿಕಾಂತ್‌ 170 ನೇ ಸಿನಿಮಾದ ಟೈಟಲ್​ ‘ವೆಟ್ಟೈಯನ್’! – ತಲೈವಾ ಎಂಟ್ರಿಗೆ  ಫ್ಯಾನ್ಸ್​ ಥ್ರಿಲ್​​!

ರಜನಿಕಾಂತ್‌ 170 ನೇ ಸಿನಿಮಾದ ಟೈಟಲ್​ ‘ವೆಟ್ಟೈಯನ್’! – ತಲೈವಾ ಎಂಟ್ರಿಗೆ  ಫ್ಯಾನ್ಸ್​ ಥ್ರಿಲ್​​!

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 73ನೇ ವರ್ಷದ ಸಂಭ್ರಮ.. ತಲೈವಾ ಡಿಸೆಂಬರ್ 12ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ 170ನೇ ಸಿನಿಮಾದ ಟೈಟಲ್ ಮತ್ತು ಟೀಸರ್ ರಿಲೀಸ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳಂತೂ ಸಖತ್ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಕಳೆದ ವಾರ ಕಿತ್ತಾಟ, ಕಣ್ಣಿಗೆ ಏಟು, ಅತಿರೇಕದ ವರ್ತನೆಗೆ ಬಿಗ್‌ಬಾಸ್ ಸುಸ್ತು – ಈ ವಾರ ಸ್ಕೂಲ್ ಟಾಸ್ಕ್.. ಮನರಂಜನೆಯಷ್ಟೇ ಸಾಕು..!

ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 12ರಂದು 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಚೆನ್ನೈ ಚಂಡಮಾರುತದಿಂದ ತತ್ತರಿಸಿದ ಕಾರಣದಿಂದಾಗಿ ರಜನಿಕಾಂತ್ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳು ಮತ್ತು ನಿರ್ಮಾಪಕರು ಸುಮ್ಮನೆ ಕೂತಿಲ್ಲ. ತಮ್ಮ ಪಾಡಿಗೆ ತಾವು ತಲೈವಾ ಹುಟ್ಟು ಹಬ್ಬವನ್ನು ಸಡಗರದಿಂದಲೇ ಆಚರಿಸುತ್ತಿದ್ದಾರೆ. ಸೂಪರ್ ಸ್ಟಾರ್ ಬರ್ತ್‌ಡೇಗೆ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ರಜನಿಕಾಂತ್ ಮಗಳು ಐಶ್ವರ್ಯಾ ಹಾಗೂ ನಟ ಧನುಷ್ ದೂರವಾಗಿ ವರ್ಷಗಳೇ ಕಳೆಯುತ್ತಿದೆ . ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಮಾವ ರಜನಿಕಾಂತ್ ಮೇಲೆ ಅಪಾರ ಪ್ರೀತಿ ಹೊಂದಿರುವ ಅಳಿಯ ಧನುಷ್, ಮಾವನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಹ್ಯಾಪಿ ಬರ್ತ್‌ಡೇ ತಲೈವಾ ಎಂದು ಶುಭಕೋರಿದ್ದಾರೆ.

ಇತ್ತೀಚೆಗೆ ರಿಲೀಸ್ ಆಗಿರುವ ಜೈಲರ್ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದಾದ ನಂತರ ಈಗ ರಜನಿಕಾಂತ್ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಹುಟ್ಟುಹಬ್ಬದ ಉಡುಗೊರೆಯಾಗಿ ಅವರ 170ನೇ ಸಿನಿಮಾದ ಟೈಟಲ್ ಮತ್ತು ಟೀಸರ್ ರಿಲೀಸ್ ಆಗಿದೆ. ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ ಚಿತ್ರದಲ್ಲಿ  ದುಶಾರ ವಿಜಯನ್ ಮತ್ತು ಮಂಜು ವಾರಿಯರ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ತಲೈವಾ 170 ನೇ ಸಿನಿಮಾಗೆ ‘ವೆಟ್ಟೈಯನ್’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಸಿನಿಮಾದಲ್ಲಿ ರಜಿನಿಕಾಂತ್‌ ನಿವೃತ್ತ ಮುಸ್ಲಿಂ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರೀ ಓಪನ್‌ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ. ಲಾಟಿ ಹಿಡಿದು ರಜಿನಿಕಾಂತ್‌ ಸ್ಟೈಲಿಸ್ಟ್‌ ಆಗಿ ನಡೆದುಕೊಂಡು ಬಂದಿದ್ದಾರೆ.  ಈ ಟೈಟಲ್‌ ಟೀಸರ್‌ನಲ್ಲಿ ಅನಿರುದ್ಧ್‌ ಅವರ ಮ್ಯೂಸಿಕ್‌ ನೋಡುಗರ ಮೈರೋಮಂಚನಗೊಳಿಸುವಂತೆ ಮಾಡುತ್ತದೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ ಸಿನಿಮಾಕ್ಕೆ ಇರಲಿದೆ. ಈ ಸಿನಿಮಾದಲ್ಲಿ ರಜನಿಗೆ  ಡಿಜೆ ಜ್ಞಾನವೇಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೆಟ್ಟೈಯನ್ ಟೈಟಲ್ ಟೀಸರ್​ ನೋಡಿ ಫ್ಯಾನ್ಸ್​ ಕೂಡ ಫುಲ್ ಥ್ರಿಲ್ ಆ

Shwetha M