ಸೂಪರ್ ಸ್ಟಾರ್ ರಜನಿಕಾಂತ್‌ಗೆ 72ನೇ ಹುಟ್ಟುಹಬ್ಬದ ಸಂಭ್ರಮ – ಬಾಬಾ ಸಿನಿಮಾ ರಿ ರಿಲೀಸ್ ಗಿಫ್ಟ್

ಸೂಪರ್ ಸ್ಟಾರ್ ರಜನಿಕಾಂತ್‌ಗೆ 72ನೇ ಹುಟ್ಟುಹಬ್ಬದ ಸಂಭ್ರಮ – ಬಾಬಾ ಸಿನಿಮಾ ರಿ  ರಿಲೀಸ್ ಗಿಫ್ಟ್

ಸ್ಟೈಲ್ ಕಿಂಗ್ ರಜನಿಕಾಂತ್ ಗೆ 72ನೇ ಹುಟ್ಟುಹಬ್ಬದ ಸಂಭ್ರಮ. ರಜನಿಕಾಂತ್ ಬರ್ತ್‌ಡೇ ದಿನ ಉಡುಗೊರೆಯಾಗಿ ನೀಡಲು ಡಿಸೆಂಬರ್ 12ರಂದು ‘ಬಾಬಾ’ ಸಿನಿಮಾ ರೀ ರಿಲೀಸ್ ಮಾಡಲಾಗಿದೆ. ತಲೈವಾ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಈಗಾಗಲೇ ಅಭಿಮಾನಿಗಳು ಸೇರಿದಂತೆ ರಜನಿಕಾಂತ್ ಆಪ್ತರು, ಸ್ನೇಹಿತರು, ತಮಿಳು ಚಿತ್ರರಂಗದ ಗಣ್ಯರು ರಜನಿಕಾಂತ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಇದನ್ನೂ ಓದಿ :   ‘ಸೀತೆ’ಯಾಗಿ ಬಾಲಿವುಡ್‌ಗೆ ‘ಸಾಯಿಪಲ್ಲವಿ’ ಬಿಗ್ ಎಂಟ್ರಿ

ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲೆಂದೇ 2002ರಲ್ಲಿ ತೆರೆ ಕಂಡಿದ್ದ ‘ಬಾಬಾ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಅದ್ದೂರಿಯಾಗಿಯೇ ಈ ಚಿತ್ರವನ್ನು ತೆರೆಗೆ ತರಲಾಗಿದೆ. ಈ ಸಿನಿಮಾಗಾಗಿ ರಜನಿಕಾಂತ್ ಅವರು ಹೊಸದಾಗಿ ಡಬ್ಬಿಂಗ್ ಕೂಡ ಮಾಡಿದ್ದಾರೆ. ಈ ಚತ್ರದಲ್ಲಿ ರಜನಿಕಾಂತ್ ಅವರು ಎರಡು ಶೇಡ್‌ಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಕೂಡಾ ಸ್ವತಃ ರಜನಿಕಾಂತ್ ಅವರೇ. ತಮ್ಮ ಬಹುನೀರಿಕ್ಷಿತ ಚಿತ್ರ ಅಂದು ಸೋತಾಗ ರಜನಿಕಾಂತ್‌ಗೂ ಬೇಸರವಾಗಿತ್ತು. ಇದೀಗ ಮತ್ತೆ ‘ಬಾಬಾ’ ಚಿತ್ರ ತೆರೆಮೇಲೆ ಬಂದಿದೆ. ಮೊದಲ ದಿನವೇ ಸಿನಿಮಾ ನೋಡಿದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಲೈವಾಗೆ ಆಪ್ತವಾದ ಸಿನಿಮಾವನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನ ನೋಡಬೇಕಿದೆ.

suddiyaana