ಬಿಎಂಟಿಸಿ ಡಿಪೋದಲ್ಲಿ ರಜಿನಿಕಾಂತ್‌ ರೌಂಡ್ಸ್‌ – ರಾಯರ ಮಠದಲ್ಲಿ ಜೈಲರ್‌ ವಿಶೇಷ ಪೂಜೆ

ಬಿಎಂಟಿಸಿ ಡಿಪೋದಲ್ಲಿ ರಜಿನಿಕಾಂತ್‌ ರೌಂಡ್ಸ್‌ – ರಾಯರ ಮಠದಲ್ಲಿ ಜೈಲರ್‌ ವಿಶೇಷ ಪೂಜೆ

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಸದ್ಯ ಜೈಲರ್‌ ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ರಜಿನಿಕಾಂತ್‌ ಇಂಥದ್ದೊಂದು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ರಜಿನಿಕಾಂತ್‌ ಕೇಕ್‌ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದರು. ಇದೀಗ ತಲೈವಾ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಬಿಎಂಟಿಸಿ ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದಾರೆ.

ತಲೈವಾಗೆ ಬೆಂಗಳೂರಿನೊಂದಿಗೆ ಭಾರಿ ನಂಟಿದೆ. ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ ಕಂಡೆಕ್ಟರ್ ಆಗಿ ತಲೈವಾ ಕಾರ್ಯ ನಿರ್ವಹಿಸಿದ್ದರು. ಈಗ ರಜಿನಿಕಾಂತ್‌ ಜಯನಗರದ ಬಿಎಂಟಿಸಿ ಡಿಪೋಗೆ ಸರ್ಪ್ರೈಸ್ ವಿಸಿಟ್ ನೀಡಿ, ಕಂಡೆಕ್ಟರ್- ಡ್ರೈವರ್ ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಜೊತೆಯಾದ ಜ್ಞಾನವೇಲ್ – 171ನೇ ಚಿತ್ರಕ್ಕೆ ಜೈ ಭೀಮ್ ಖ್ಯಾತಿಯ ನಿರ್ದೇಶಕನಿಂದ ಆ್ಯಕ್ಷನ್ ಕಟ್

ಬೆಂಗಳೂರಿನ ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನ ನಟ ಸ್ಮರಿಸಿದ್ದರು. ವೈಟ್ & ವೈಟ್ ಧರಿಸಿನಲ್ಲಿ ತಲೈವಾ ಮಿಂಚಿದ್ದರು. ರಜಿನಿಕಾಂತ್‌ ಅವರನ್ನ ನೋಡಿ ಖುಷಿಯಲ್ಲಿ ಸಿಬ್ಬಂದಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ತಲೈವಾ ಭೇಟಿ ಜಯನಗರದ ಚಾಲಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂದಹಾಗೆ ಚಾಮರಾಜಪೇಟೆಯ ರಾಯರ ಮಠಕ್ಕೂ ರಜಿನಿಕಾಂತ್‌ ಭೇಟಿ ನೀಡಿದ್ದಾರೆ.

ಈ ಹಿಂದೆ ಹಲವು ಕಾರ್ಯಕ್ರಮದಲ್ಲಿ ತಾವು ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ನಟ ಮಾತನಾಡಿದ್ದರು. ರೈಟ್ ರೈಟ್ ಅಂತಾ ಟಿಕೆಟ್ ಕೊಟ್ಟ ನೆನಪನ್ನ ತಲೈವಾ ಹಂಚಿಕೊಂಡಿದ್ದರು.

ರಜಿನಿಕಾಂತ್‌ ನಟನೆಯ ಜೈಲರ್ ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೈಲರ್‌ ಸಿನಿಮಾ ಸಕ್ಸಸ್‌ ಖುಷಿಯಲ್ಲಿರುವ ಅವರು ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದಾರೆ.

suddiyaana