ಹೋಟೆಲ್‌ನಲ್ಲಿ ಟೀ ಮಾರುತ್ತಿದ್ದಾರೆ ರಜಿನಿಕಾಂತ್‌! – ವೈರಲ್‌ ಆದ ವಿಡಿಯೋ ಅಸಲಿಯತ್ತೇನು?

ಹೋಟೆಲ್‌ನಲ್ಲಿ ಟೀ ಮಾರುತ್ತಿದ್ದಾರೆ ರಜಿನಿಕಾಂತ್‌! – ವೈರಲ್‌ ಆದ ವಿಡಿಯೋ ಅಸಲಿಯತ್ತೇನು?

ಸೂಪರ್‌ ಸ್ಠಾರ್‌ ರಜಿನಿಕಾಂತ್‌ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ. ರಜಿನಿ ಹೋದಲ್ಲೆ ಫಾನ್ಸ್‌ ಅವರನ್ನು ಸುತ್ತುವರಿದಿರುತ್ತಾರೆ. ತಮ್ಮ ಅಚ್ಚುಮೆಚ್ಚಿನ ʼತಲೈವಾʼ ಅವರನ್ನು ಜೀವನದಲ್ಲಿ ಒಂದು ಬಾರಿಯಾದ್ರೂ ಭೇಟಿ ಆಗಬೇಕೆನ್ನುವುದು ಅವರ ಫ್ಯಾನ್ಸ್‌ಗಳ ಮಹಾದಾಸೆ. ಆದ್ರೆ ತಲೈವಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಟೆಲ್‌ವೊಂದರಲ್ಲಿ ಟೀ ಸೇಲ್‌ ಮಾಡುತ್ತಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ರಜಿನಿ ಅವತಾರ ನೋಡಿ ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್‌ ಆಗಿದ್ದರು. ಅಲ್ಲದೆ, ಸ್ಕ್ರೀನ್‌ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ ಅಂತಾ ಪ್ರಶ್ನೆ ಉದ್ಭವವಾಗಿತ್ತು. ಇದೀಗ ಈ ವಿಡಿಯೋ ಅಸಲಿಯತ್ತು ಬಯಲಾಗಿದೆ

ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂನಿಂದಲೇ ತಲೈವಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದರೆ ರಜನಿ ಸ್ಟೈಲ್ ಏನಿದ್ದರೂ ತೆರೆಮೇಲೆ ಮಾತ್ರ. ನಿಜ ಜೀವನದಲ್ಲಿ ರಜಿನಿ ಸೀದಾ ಸಾದಾ ಆಸಾಮಿ. ಬಕ್ಕತಲೆ, ಸಣಕಲು ದೇಹದ ರಜನಿಕಾಂತ್ ತಮ್ಮ ಸರಳ ಜೀವನ ಶೈಲಿಯಿಂದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ರಜನಿಕಾಂತ್ ಸಿನಿಮಾಗಳು ರಿಲೀಸ್ ಆದಾಗ ಅಭಿಮಾನಿಗಳು ತಲೈವಾ ಸ್ಟೈಲ್‌ನಲ್ಲಿ ಥಿಯೇಟರ್‌ಗಳ ಮುಂದೆ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಹೋಟೆಲ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ  ಚಹಾ ಮಾರುವ ಹೊಟೇಲ್‌ ವೊಂದರ ಮಾಲೀಕರಾಗಿದ್ದಾರೆ. ಅರೇ ರಜಿನಿಕಾಂತ್‌  ಚಹಾ ಮಾರುತ್ತಿದ್ದಾರಾ ಎಂದು ಅಂದುಕೊಳ್ಳಬೇಡಿ. ವೈರಲ್‌ ಆದ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಥೇಟ್‌ ರಜಿನಿಕಾಂತ್‌ ರಂತೆಯೇ ಇರುವ ವ್ಯಕ್ತಿ.

ಇದನ್ನೂ ಓದಿ:  ವನ್ಯಜೀವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಆಗಿದ್ದರು ಸೆಲೆಬ್ರೆಟಿಗಳು – ಇಂಥಾ ಪ್ರಕರಣದಲ್ಲಿ ಜೈಲು ಶಿಕ್ಷೆಯ ಪ್ರಮಾಣ ಎಷ್ಟು?

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ರಜಿನಿಕಾಂತ್‌ ರಂತೆ ಇರುವ ವ್ಯಕ್ತಿಯ ವಿಡಿಯೋವೊಂದು ವೈರಲ್‌ ಆಗಿತ್ತು. ಎಲ್ಲಿಯವರೆಗೆ ಅಂದರೆ ಅನೇಕರು ಇದು ರಜಿನಿಕಾಂತ್ ಅವರ ಚಿತ್ರೀಕರಣದ ವೇಳೆಗಿನ ವಿಡಿಯೋ ಎಂದುಕೊಂಡಿದ್ದರು. ಮುಖ, ಕೂದಲು, ನೋಟ, ಹಾವಭಾವ ಎಲ್ಲವೂ ರಜಿನಿಕಾಂತ್ ರಂತೆಯೇ ಇತ್ತು. ಹಾಗಾಗಿ ಇದು ರಜಿನಿಕಾಂತ್‌ ಎಂದೇ ಜನ ಭಾವಿಸಿದ್ದರು. ವಿಡಿಯೋ ವೈರಲ್‌ ಆದ ಬಳಿಕ ಇದರಲ್ಲಿ ಇರುವುದು ರಜಿನಿಕಾಂತ್‌ ಅಲ್ಲ.. ಕೇರಳದ ಕೊಚ್ಚಿನ್‌ನಲ್ಲಿರುವ ವೆಂಕಟೇಶ್ವರ ಹೋಟೆಲ್‌ ಮಾಲೀಕ ಸುಧಾಕರ್‌ ಪ್ರಭು ಎಂದು ಗೊತ್ತಾಗಿದೆ.

ಈ ವಿಡಿಯೋವನ್ನು ಮಾಲಿವುಡ್‌ ನಿರ್ದೇಶಕ ನಾದಿರ್ಶಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬಳಿಕ ವಿಡಿಯೋ ವೈರಲ್‌ ಆಗಿದೆ. ಅಂದಿನಿಂದ ಸುಧಾಕರ್ ಅವರು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರನ್ನು ಭೇಟಿಯಾಗಲು ತಲೈವಾ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಕೇರಳದ ವಿವಿಧ ಕಾರ್ಯಕ್ರಮಗಳಿಗೆ ಸಹ ಆಹ್ವಾನಿಸಲ್ಪಟ್ಟಿದ್ದಾರೆ.

Shwetha M