ಸ್ವಚ್ಛತಾ ಕಾರ್ಮಿಕ ಮಹಿಳೆಗೆ ಚಿನ್ನದ ಸರ ಗಿಫ್ಟ್ ನೀಡಿದ ಸೂಪರ್‌ಸ್ಟಾರ್ ರಜನಿಕಾಂತ್!

ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಖರೀಸುವುದೇ ಈಗ ದೊಡ್ಡ ಸವಾಲಾಗಿದೆ. ರಸ್ತೆಯಲ್ಲಿ ಚಿನ್ನ ಸಿಕ್ಕಿದ್ರೆ, ಯಾರಿಗೂ ಹೇಳದೇ ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ. ಆದ್ರೆ ಇನ್ನೂ ಕೆಲವರು ಚಿನ್ನದ ಮಾಲೀಕರಿಗೆ ವಾಪಾಸ್ ಕೊಟ್ಟು ಪ್ರಾಮಾಣಿಕತೆ ಮೆರೆಯುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕ ಮಹಿಳಾಗೆ ಚಿನ್ನದ ಆಭರಣ ಕಸದ ಬುಟ್ಟಿಯಲ್ಲಿ ಸಿಕ್ಕಿದ್ದು, ಅದನ್ನು ಚಿನ್ನದ ಮಾಲೀಕರಿಗೆ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ರು. ಇದೀಗ ಸ್ಪಚ್ಛತಾ ಕಾರ್ಮಿಕ ಮಹಿಳೆ ಪದ್ಮ ಅವರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಚಿನ್ನದ ಸರ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಅಮಾನವೀಯ ಕೃತ್ಯ – ಪತ್ನಿಯ ನಡತೆ ಶಂಕಿಸಿ ತಲೆ ಬೋಳಿಸಿದ ಪಾಪಿ ಪತಿ!
ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮ ತಮ್ಮ ಪ್ರಾಮಾಣಿಕತೆಯಿಂದ ಇತ್ತೀಚೆಗೆ ಸುದ್ದಿಯಾಗಿದ್ದರು. ಪದ್ಮ ಅವರು ಇತ್ತೀಚೆಗೆ ತಮ್ಮ ಕೆಲಸ ಮಾಡುವಾಗ ಅವರಿಗೆ 40 ಗ್ರಾಂ ಚಿನ್ನ ಕಸದಲ್ಲಿ ಸಿಕ್ಕಿತ್ತು. ಆದರೆ ಪದ್ಮ ಅವರು ಅದನ್ನು ಇರಿಸಿಕೊಳ್ಳದೆ, ಅದನ್ನು ಕಳೆದುಕೊಂಡವರಿಗೆ ಪ್ರಾಮಾಣಿಕವಾಗಿ ಮರಳಿಸಿದರು. ಇದು ರಾಜ್ಯದಾದ್ಯಂತ ಸುದ್ದಿ ಆಗಿದ್ದಲ್ಲದೆ, ಪದ್ಮ ಅವರಿಗೆ ಭಾರಿ ಪ್ರಶಂಸೆಗಳು ಸಹ ದೊರಕಿತು. ಇತ್ತೀಚೆಗಷ್ಟೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಪದ್ಮ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿ, ಪದ್ಮ ಅವರನ್ನು ಸನ್ಮಾನಿಸಿ, ಒಂದು ಲಕ್ಷ ರೂಪಾಯಿ ಹಣವನ್ನು ಸಹ ನೀಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಪದ್ಮ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿರುವ ಜೊತೆಗೆ ಚಿನ್ನದ ಸರವೊಂದನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.
ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮ ಅವರನ್ನು ನಟ ರಜನೀಕಾಂತ್ ಪೋಯಸ್ ಗಾರ್ಡನ್ನ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಪದ್ಮ ಅವರನ್ನು ಮಾತ್ರವೇ ಅಲ್ಲದೆ ಅವರ ಇಡೀ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದ ರಜನೀಕಾಂತ್, ಪದ್ಮ ಅವರಿಗೆ ಹಾರ ಹಾಕಿ, ಶಾಲು ಹಾಕಿ ಸನ್ಮಾನ ಮಾಡಿದ್ದಾರೆ. ಜೊತೆಗೆ ಪದ್ಮ ಉಡುಗೊರೆಯಾಗಿ ಚಿನ್ನದ ಸರವನ್ನು ಸಹ ನೀಡಿದ್ದಾರೆ.

ನೋಡಿರಿ

