75ನೇ ವಸಂತಕ್ಕೆ ಕಾಲಿಟ್ಟ ತಲೈವಾ – ರಜನಿ ಪಾತ್ರಗಳು ಬೆಂಚ್ಮಾರ್ಕ್ ಸೃಷ್ಟಿಸಿವೆ ಎಂದ ಪ್ರಧಾನಿ ಮೋದಿ

ಸೂಪರ್ ಸ್ಟಾರ್ ರಜನಿಕಾಂತ್. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತಲೈವಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಅವರ ಕಾಲ್ಶೀಟ್ಗಾಗಿ ನಿರ್ಮಾಪಕರು ಅವರ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಭಾರತೀಯ ಚಿತ್ರರಂಗ ಕಂಡ ಅಪರೂಪದ ಸೂಪರ್ ಸ್ಟಾರ್ ಗೆ ಇಂದು ಜನ್ಮದಿನದ ಸಂಭ್ರಮ. ತಲೈವಾ 75 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಇಂಡಿಗೋ ಪ್ರಯಾಣಿಕರಿಗೆ ಗುಡ್ನ್ಯೂಸ್! – 10 ಸಾವಿರ ರೂ. ವೋಚರ್ ಗಿಫ್ಟ್ ನೀಡಿದ ವಿಮಾನಯಾನ ಸಂಸ್ಥೆ!
ರಜನಿಕಾಂತ್ ಬರ್ತ್ಡೇಎಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ರಜನಿಕಾಂತ್ ಅವರಿಗೆ ವಿಶ್ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಲೈವಾಗೆ ವಿಶ್ ಮಾಡಿದ್ದಾರೆ.
ಪ್ರಧಾನಿ ಮೋದಿ ಎಕ್ಸ್ನಲ್ಲಿ ಟ್ವೀಟ್ ಮಾಡಿ ರಜನಿಕಾಂತ್ಗೆ ಶುಭಕೋರಿದ್ದಾರೆ. ರಜನಿಕಾಂತ್ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್ಮಾರ್ಕ್ ಸೃಷ್ಟಿಸಿದೆ. ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.
ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರಜನಿಕಾಂತ್ ಅವರ 75 ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಅವರೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ರಜನಿಕಾಂತ್ ವಯಸ್ಸನ್ನು ಮೀರಿಸುವ ಮೋಡಿ! ವೇದಿಕೆ ಹತ್ತಿದಾಗ ಎಲ್ಲರನ್ನೂ ಸಂತೋಷಪಡಿಸುವ ವಾಗ್ಮಿ! ಹೊರಗೆ ಮಾತನಾಡದೆ, ಮೋಸದ ಮತ್ತು ವೇಷವಿಲ್ಲದ ಹೃದಯ ಅವರದ್ದು! ಎಂದು ಬರೆದಿದ್ದಾರೆ.
ನಟಿ-ರಾಜಕಾರಣಿ ಖುಷ್ಬು ಸುಂದರ್ ರಜನಿಕಾಂತ್ ಜೊತೆಗಿನ ತಮ್ಮ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿ, “ಭಾರತೀಯ ಚಿತ್ರರಂಗದ ಏಕೈಕ ಸೂಪರ್ಸ್ಟಾರ್, ಪದ್ಮವಿಭೂಷಣ ತಿರು ರಜನಿಕಾಂತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಸಮರ್ಪಣೆ, ಕಠಿಣ ಪರಿಶ್ರಮ, ಪರಿಶ್ರಮ, ನಮ್ರತೆ, ವಿನಮ್ರತೆ, ಸರಳತೆ ಮತ್ತು ಶಾಶ್ವತ ಸಕಾರಾತ್ಮಕತೆಯ ಸ್ಫೂರ್ತಿಗಿದ್ದೀರಿ ಸರ್ ಎಂದು ಬರೆದಿದ್ದಾರೆ.
ರಜನಿಕಾಂತ್ ಅವರ 75 ನೇ ಹುಟ್ಟುಹಬ್ಬಕ್ಕೆ ಧನುಷ್ ವಿಶ್ ಮಾಡಿದ್ದಾರೆ. ಜನ್ಮದಿನದ ಶುಭಾಶಯಗಳು ತಲೈವಾ ಎಂದು ಧನುಷ್ ಬರೆದುಕೊಂಡಿದ್ದಾರೆ.

ನೋಡಿರಿ

