ಬರುತ್ತಿದೆ ರಜನಿಕಾಂತ್‌ ಬಯೋಪಿಕ್‌! – ಬಂಡವಾಳ ಹೂಡುತ್ತಿರವುದು ಯಾರು ಗೊತ್ತಾ?

ಬರುತ್ತಿದೆ ರಜನಿಕಾಂತ್‌ ಬಯೋಪಿಕ್‌! – ಬಂಡವಾಳ ಹೂಡುತ್ತಿರವುದು ಯಾರು ಗೊತ್ತಾ?

ಸೂಪರ್ ಸ್ಟಾರ್ ರಜನಿಕಾಂತ್‌.. ಬಸ್‌ ಕಂಡಕ್ಟರ್‌ ಆಗಿ ವೃತ್ತಿ ಜೀವನ ಶುರು ಮಾಡಿದ್ದ ತಲೈವಾ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇರೋ ನಟ.. ಈ ಸೂಪರ್ ಸ್ಟಾರ್ ತಮ್ಮ ಅಭಿನಯದಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಲೈವಾ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇದೀಗ ತಲೈವಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಇದೆ. ಹೆಸರಾಂತ ನಟ ರಜನಿಕಾಂತ್  ಅವರ ಜೀವನವನ್ನು ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಇದನ್ನೂ ಓದಿ: 70ರ ವಯಸ್ಸಿನಲ್ಲಿ ಮದುವೆ ಆಸೆ – ವಧು ಅನ್ವೇಷಣೆಯ ಜಾಹಿರಾತಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ 70ರ ವೃದ್ಧ

ಹೌದು, ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಜ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು ಅಂತಾ ಹೇಳಲಾಗುತ್ತಿದೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂದು ವರದಿಯಾಗಿದೆ.

ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರ ಬೀಳಬಹುದು.

Shwetha M

Leave a Reply

Your email address will not be published. Required fields are marked *