BBK ಯಲ್ಲಿ Tom & Jerry.. ಚೈತ್ರಾ ಆಟ.. ರಜತ್‌ ವಿಲ ವಿಲ!! – “ಮಾತಿನ ಮಲ್ಲಿ”ಗೆ ಚುಚ್ಚಿದ್ರೆ ನಾಟುತ್ತಾ?

BBK ಯಲ್ಲಿ Tom & Jerry.. ಚೈತ್ರಾ ಆಟ.. ರಜತ್‌ ವಿಲ ವಿಲ!! – “ಮಾತಿನ ಮಲ್ಲಿ”ಗೆ ಚುಚ್ಚಿದ್ರೆ ನಾಟುತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ನಲ್ಲಿ ಟಾಮ್‌ ಆಂಡ್‌ ಜೆರ್ರಿ ಕಿತ್ತಾಟ ವೀಕ್ಷಕರಿಗೆ ನೋಡುವಂತಾಗಿದೆ.. ಬಿಗ್‌ ಬಾಸ್‌ ಮನೆಯ ಟಾಮ್‌ ಆಂಡ್‌ ಜೆರ್ರಿ ಬೇರೆ ಯಾರು ಅಲ್ಲ.. ಚೈತ್ರಾ ಕುಂದಾಪುರ ಮತ್ತು ರಜತ್..‌ ಅಬ್ಬಾ.. ಇವರಿಬ್ಬರ ಕಿತ್ತಾಟಕ್ಕೆ ಕಾರಣವೇ ಬೇಕಂತ ಇಲ್ಲ.. ಸಣ್ಣ ವಿಷ್ಯಾ ಸಿಕ್ಕಿದ್ರೆ ಸಾಕು ಇಡೀ ದಿನ ಕಿತ್ತಾಡ್ತಾರೆ.. ಚೈತ್ರಾಗೆ ಮಾತೇ ಬಂಡವಾಳ.. ರಜತ್‌ ಗೆ ಚೈತ್ರಾ ಮಾತೇ ಇರಿಟೇಷನ್..‌ ಅಷ್ಟಕ್ಕೂ ರಜತ್‌ ಯಾಕೆ ಚೈತ್ರಾ ಜೊತೆ ಅಷ್ಟು ಜಗಳ ಮಾಡ್ತಾರೆ.. ಚೈತ್ರಾ ಕಂಡ್ರೆ ರಜತ್‌ ಗೆ ಭಯಾನಾ? ಅದಕ್ಕೋಸ್ಕರ ಚೈತ್ರಾನಾ ಟಾರ್ಗೆಟ್‌ ಮಾಡ್ತಿದ್ದಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: HMPV ಸೋಂಕಿತ ಮಗುವಿನ ಆರೋಗ್ಯದಲ್ಲಿ ಚೇತರಿಕೆ – ಇಂದು ಡಿಸ್ಚಾರ್ಜ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗ ಕೊನೆಯ ಹಂತಕ್ಕೆ ಬಂದಿದೆ. ಇದೀಗ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಕಪ್‌ ತಮ್ಮದಾಗಿಸಿಕೊಳ್ಳಬೇಕು ಅನ್ನೋ ತವಕದಲ್ಲಿದ್ದಾರೆ. ಹೀಗಾಗಿ ಸ್ಪರ್ಧಿಗಳು ಟಾಸ್ಕ್‌ ಜೊತೆಗೆ ಮೈಂಡ್‌ ಗೇಮ್‌ ಅನ್ನ ಕೂಡ ಶುರುಮಾಡ್ಕೊಂಡಿದ್ದಾರೆ.. ಇದೀಗ ರಜತ್‌ ಹಾಗೂ ಚೈತ್ರಾ ಕುಂದಾಪುರ ಮಾತ್ರ ದೊಡ್ಮನೆಯಲ್ಲಿ ತುಂಬಾ ಹೈಲೈಟ್‌ ಆಗಿದ್ದಾರೆ.. ಚೈತ್ರಾಗೆ ಮಾತೇ ಬಂಡವಾಳ.. ಹೀಗಾಗಿ ಆಕೆ ನಾನ್‌ ಸ್ಟಾಪ್‌ ಭಾಷಣ ಬಿಗಿತಾ ಇರ್ತಾರೆ.. ಆದ್ರೆ ರಜತ್‌ ಗೆ ಚೈತ್ರಾ ಮಾತು ಸಿಕ್ಕಾಪಟ್ಟೆ ಇರಿಟೇಷನ್‌.. ಹೀಗಾಗಿ ಚೈತ್ರಾಗೆ ಮನಮಂದಂತೆ ಟಾಂಗ್‌ ಕೊಡ್ತಾ ಇದ್ದಾರೆ.. ದೊಡ್ಮನೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡೋ ಜೋಡಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ.. ಬಿಗ್‌ ಬಾಸ್‌ ಮನೆಯ ಟಾಮ್‌ ಆಂಡ್‌ ಜೆರ್ರಿ ಅಂತಾ ಟ್ರೋಲ್‌ ಆಗ್ತಿದ್ದಾರೆ. ಅವರಿಬ್ಬರು ಕಿತ್ತಾಡೋ ಸೀನ್‌ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ಹೌದು.. ರಜತ್‌  ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್‌’ ಮನೆಗೆ ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದಲೂ ಚೈತ್ರಾ ಕುಂದಾಪುರಗೆ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇದ್ದಾರೆ. ಬಿಗ್‌ ಬಾಸ್‌ ಗೆ ಬಂದ ಮೊದಲ ದಿನದಿಂದಲೇ ಚೈತ್ರಾಳನ್ನ ಬಾಸ್‌ ಅಂತಾ ಕರಿತಾ ಇದ್ದಾರೆ.. ಇದು ಚೈತ್ರಾಗೂ ಕಿರಿಕಿರಿ ಅನ್ನಿಸಿತ್ತು. ಇದನ್ನ ಸುದೀಪ್‌ ಮುಂದೆ ಚೈತ್ರಾ ಹೇಳಿದ್ರು… ಆದ್ರೆ ರಜತ್‌ ಮಾತ್ರ ಚೈತ್ರಾಳನ್ನ ಯಾಕೋ ಟಾರ್ಗೆಟ್‌ ಮಾಡಿದಂತೆ ಕಾಣ್ತಿದೆ.. ಸಣ್ಣ ಪುಟ್ಟ ವಿಚಾರಕ್ಕೆ ಶುರುವಾದ ಜಗಳ ಕೆಲವೊಮ್ಮ ಅತಿರೇಕಕ್ಕೂ ಹೋಗಿದ್ದುಂಟು. ಅಷ್ಟರಮಟ್ಟಿಗೆ ಇವರು ಕಿತ್ತಾಡಿಕೊಂಡಿದ್ದಾರೆ. ವ್ಯಂಗ್ಯ ಮಾಡುತ್ತಲೇ, ತಮಾಷೆ ಮಾಡುತ್ತಲೇ ಚೈತ್ರಾ ಕುಂದಾಪುರ ಅವರ ಕಾಲೆಳೆಯುವ ರಜತ್, ‘ಬಿಗ್ ಬಾಸ್‌ ಮನೆಯಲ್ಲಿ ಯಾಕಿದಿಯಾ? ದಮ್ಮಯ್ಯ ಅಂತೀನಿ.. ಮನೆಗೆ ಹೊರಡಮ್ಮ ಅಂತ ಹೇಳಿದ್ದು ಇದೆ..

ರಜತ್‌ ಟಾಸ್ಕ್‌ ವಿಚಾರವಾಗಿ ಮಾತ್ರವಲ್ಲದೇ ವೈಯಕ್ತಿಕವಾಗಿಯೂ ಚೈತ್ರಾಳನ್ನ ನಿಂದಿಸ್ತಿದ್ದಾರೆ. ಚೈತ್ರಾ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರುವುದನ್ನ ಕೂಡ ರಜತ್‌ ವ್ಯಂಗ್ಯವಾಡಿದ್ರು.. ರಜತ್‌ ಚುಚ್ಚು ಮಾತಿನಿಂದಾಗಿ ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ರು.. ರಜತ್‌  ವರ್ತನೆ ಚೈತ್ರಾ ಮಾತ್ರವಲ್ಲದೇ ಸಹಸ್ಪರ್ಧಿಗಳಿಗೂ ಸಿಟ್ಟು ತರಿಸಿತ್ತು.. ಇದನ್ನ ಕಳೆದ ವೀಕೆಂಡ್‌ನಲ್ಲಿ ಗೌತಮಿ ಜಾಧವ್, ಹನುಮಂತ, ಚೈತ್ರಾ ಕುಂದಾಪುರ ಹೇಳಿದ್ರು.. ನೀವು ಇನ್ನೊಬ್ಬರ ತಪ್ಪುಗಳನ್ನು ತೆಗೆದುಕೊಳ್ಳುತ್ತೀರಿ, ಅದೇ ಥರ ಇನ್ನೊಬ್ಬರು ಹೇಳಿದ್ದನ್ನ ತೆಗೆದುಕೊಳ್ಳಿ” ಎಂದು ಗೌತಮಿ ಬುದ್ಧಿವಾದ ಹೇಳಿದ್ರು. ತಮಾಷೆಗೂ ಮತ್ತು ವ್ಯಂಗ್ಯ, ಅಪಹಾಸ್ಯಕ್ಕೂ ಬಹಳ ವ್ಯತ್ಯಾಸ ಇದೆ  ಎಂದು ರಜತ್‌ಗೆ ಚೈತ್ರ ಕುಂದಾಪುರ ಹೇಳಿದ್ದಾರೆ. ಆದರೆ ಹನುಮಂತ ಇವರೆಲ್ಲರಿಗಿಂತ ಭಿನ್ನವಾಗಿ ಹಾಡು ಹೇಳುವ ಮೂಲಕ ರಜತ್‌ಗೆ ಬದಲಾಗು ಎಂದು ಹೇಳಿದ್ದಾರೆ. ಸಿಟ್ಟು ಬಂದಾಗ ನಿಧಾನ ಮಾಡಣ್ಣ.. ಎಂದು ಹಾಡು ಹೇಳಿದ್ದಾರೆ ಹನುಮಂತ. ಜೊತೆಗೆ ಸಿಟ್ಟಿನ ಕೈಯಾಗ ಬುದ್ದಿ ಕೊಟ್ಟರೆ, ಅದೇ ಒಂದು ಮುಳ್ಳಾಗಬಹುದಣ್ಣ ಎಂದು ರಜತ್‌ಗೆ ಸಲಹೆ ನೀಡಿದ್ರು.. ಇನ್ನು ಚೈತ್ರಾ ಕುಂದಾಪುರ ತಾಯಿ ಹಾಗೂ ಸಹೋದರಿ ಬಿಗ್‌ ಬಾಸ್ ಮನೆಗೆ ಬಂದಿದ್ರು. ಈ ವೇಳೆ ಅವರಿಬ್ರು ರಜತ್‌ ಗೆ ಟಾಂಗ್‌ ನೀಡಿದ್ರು.. ನನ್ನ ಮಗಳು ನಿಮಗೆ ಕಳಪೆ ಆಗಿರ್ಬೇಕು.. ಆದ್ರೆ ನನಗೆ ನನ್ನ ಮಗಳು ಯಾವಾಗ್ಲೂ ಉತ್ತಮನೇ.. ಅಂತಾ ಹೇಳಿದ್ರು. ಇನ್ನು ಚೈತ್ರಾ ತಂಗಿ ರಜತ್‌ ಗೆ ಚಮಕ್‌ ಕೊಟ್ಟಿದ್ರು.. ನನ್ನ ಅಕ್ಕನಿಗೆ ನೀವು ಬಾಸ್‌ ಆದ್ರೆ ನನಗೆ ನೀವು ಬಾಸ್‌ ಅಂತಾ ಹೇಳಿದ್ರು.. ಈ ವೇಳೆ ಚೈತ್ರಾ ಭಾವುಕರಾಗಿದ್ರು.

ಇದೀಗ ರಜತ್‌ ಮಾತಿನಿಂದ ಚೈತ್ರಾ ಕುಂದಾಪುರ ಮಾನಸಿಕವಾಗಿ ಕುಗ್ಗುತ್ತಿರುವುದಂತೂ ಸ್ಪಷ್ಟವಾಗಿ ಕಾಣ್ತಿದೆ.. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡಿತಾ ಇದೆ. ಚೈತ್ರಾ ಕಂಡ್ರೆ ರಜತ್‌ ಗೆ ಭಯ.. ಜಾಸ್ತಿ ಮಾತನಾಡೋ ಕಾರಣ ಚೈತ್ರಾ ಹೆಚ್ಚು ಹೈಲೈಟ್‌ ಆಗ್ತಾರೆ ಅಂತಾ ರಜತ್‌ ಆಕೆಯನ್ನ ಕುಗ್ಗಿಸೋ ಪ್ರಯತ್ನ ಮಾಡ್ತಾರೆ. ಇದು ಸರಿಯಲ್ಲ.. ಬಿಗ್‌ ಬಾಸ್‌, ಸುದೀಪ್‌ ಯಾಕೆ ರಜತ್‌ ಗೆ ಕ್ಲಾಸ್‌ ತೆಗೆದುಕೊಳ್ತಿಲ್ಲ ಅಂತಾ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *