ನೀವು ಗಂಡಸಲ್ವಾ?.. ಏ ಥೂ.. ಕ*ಚಡಾ! – ನಾಮಿನೇಟ್‌ ಮಾಡಿದ ರಜತ್‌ಗೆ ಅಶ್ವಿನಿ ಬೈಯ್ಯೋದು ಹೀಗಾ!?

ನೀವು ಗಂಡಸಲ್ವಾ?.. ಏ ಥೂ.. ಕ*ಚಡಾ! – ನಾಮಿನೇಟ್‌ ಮಾಡಿದ ರಜತ್‌ಗೆ ಅಶ್ವಿನಿ ಬೈಯ್ಯೋದು ಹೀಗಾ!?

ಬಿಗ್‌ಬಾಸ್‌ ಮನೆಯಲ್ಲಿ ಒಂದೆರಡು ವಾರ ಕೊಂಚ ಸೈಲೆಂಟ್‌ ಆಗಿದ್ದ ಅಶ್ವಿನಿ ಗೌಡ ಮತ್ತೆ ಉಗ್ರ ರೂಪ ತಾಳಿದ್ದಾರೆ. ಅದೂ ಕೂಡ ನಾಮಿನೇಷನ್‌ ವಿಚಾರಕ್ಕೆ. ರಜತ್‌ ಅಶ್ವಿನಿ ಹೆಸರು ತೆಗೆದುಕೊಳ್ಳುತ್ತಿದ್ದಂತೆ ಅಶ್ವಿನಿ ಗೌಡ ರಜತ್‌ಗೆ ನೀನು ಗಂಡಸಾ ಎಂದು ಪ್ರಶ್ನಿಸಿದ್ದಾರೆ. ಅಶ್ವಿನಿ, ರಜತ್‌ ಕಿತ್ತಾಟವನ್ನ ಕಂಡು ಬಿಗ್‌ಬಾಸ್‌ ಟೀಂ ಕೂಡ ಶಾಕ್‌ ಆದಂತೆ ಕಾಣ್ತಿದೆ.

ಇದನ್ನೂ ಓದಿ: ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ –  50ಕ್ಕೂ ಹೆಚ್ಚು ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ!

ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಬರೀ ಜಗಳದಿಂದಲೇ ಹೆಚ್ಚು ಹೈಲೈಟ್‌ ಆಗಿದ್ದಾರೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ರು. ಹೀಗಾಗಿ ಒಂದೆರಡು ವಾರ ಅಶ್ವಿನಿ ಗೌಡ ಕೊಂಚ ಸೈಲೆಂಟ್‌ ಆದಂತೆ ಕಾಣುತ್ತಿದ್ದರು. ಆದ್ರೀಗ ರಜತ್‌ ನಾಮಿನೇಟ್‌ ಮಾಡ್ತಿದ್ದಂತೆ ಮತ್ತೆ ವೈಲೆಂಟ್‌ ಆಗಿದ್ದಾರೆ. ಇದೀಗ ಕಲರ್ಸ್‌ ಕನ್ನಡ ಪ್ರೋಮೋ ರಿಲೀಸ್‌ ಮಾಡಿದೆ. ಈ ವಿಡಿಯೋಗೆ ಕ್ಯಾಪ್ಷನ್ ಅಗತ್ಯ ಇಲ್ಲ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ.

ಈ ಪ್ರೋಮೋದಲ್ಲಿ, ಬಿಗ್‌ ಬಾಸ್‌ ಮನೆಯಲ್ಲಿ ಈಗ ಅಶ್ವಿನಿ ಗೌಡ ಮತ್ತು ರಜತ್‌ ಮಧ್ಯೆ ದೊಡ್ಡ ಜಗಳವಾಗಿದೆ. ಧ್ರುವಂತ್‌ ಟಿ – ಗಾಂಚಲಿ ಎಂದಾಗಲೇ ಸುಮ್ಮನೆ ಇದ್ದ ಅಶ್ವಿನಿ ಗೌಡ ಅವರು, ರಘು ಸರ್‌ ಒಂದು ಮಾತು ಹೇಳಿದ ತಕ್ಷಣ, ಹಂಗೆ ಹೇಳಬಾರದು, ಹಿಂಗೆ ಹೇಳಬಾರದು ಅಂತ ನಿಂತ್ಕೊಂಡ್ರು. ಅಲ್ಲದೆ, ಇವರ ಜೊತೆಗೆ ನಾವು ಫೈಟ್‌ ಕೂಡ ಆಡೋಕೆ ಆಗಲ್ಲ. ಸೋ ಬೆಟರ್‌ ಇವರು ಮನೆಗೆ ಹೋಗೋದು ಉತ್ತಮ ಎಂದು ಅಶ್ವಿನಿ ಗೌಡ ಮೇಲೆ ಬಾತಿನ ಬಾಣ ಬಿಟ್ಟಿದ್ದಾರೆ ರಜತ್‌. ಇದಕ್ಕೆ ಅಶ್ವಿನಿ ಗೌಡ ಕಡೆಯಿಂದಲೂ ಪ್ರತ್ಯುತ್ತರ ಸಿಕ್ಕಿದೆ.

ನಿಮ್ಮಷ್ಟು ಥರ್ಡ್‌ ರೇಟೆಡ್‌ ಭಾಷೆಯನ್ನು ಇಲ್ಲಿ ಇರೋರು ಯಾರೂ ಬಳಸಿಲ್ಲ. ನಾವು ಗಂಡಸರ ಜೊತೆಗೆ ಗುದ್ದಾಡ್ತಿವಿ ಅಂತೀರಿ. ನೀವು ಗಂಡಸಲ್ವಾ? ಕೇಳಬೇಕಿತ್ತು.. ಎಂದು ಅಶ್ವಿನಿ ಆವಾಜ್‌ ಹಾಕಿದ್ದಾರೆ. ಅದಕ್ಕೆ ನಾವು ಹೊಡೆದಾಡಿದ್ರೆ ಗಂಡಸರ ಜೊತೆಗೆ ಹೊಡೆದಾಡೋದು ಎಂದು ರಜತ್‌ ಮರುಉತ್ತರ ನೀಡಿದ್ದಾರೆ. ಬಳಿಕ ಅಶ್ವಿನಿ ಗೌಡ ಅವರನ್ನು ಸ್ವಿಮ್ಮಿಂಗ್‌ ಪೂಲ್‌ಗೆ ತಳ್ಳಿದ್ದಾರೆ. ನಂತರ ಅಶ್ವಿನಿ ಗೌಡ, ಹೇ ಕಚಡಾ.. ಎಂದು ಅಬ್ಬರಿಸಿದ್ದಾರೆ. ಆಗ ರಜತ್‌, ಹೇ ಕಚಡಾ…. ನೀನೇನು ನನಗೆ ಕಚಡಾ ಅಂತ ಹೇಳೋದು ಕಚಡಾ.. ಎಂದು ಕೌಂಟರ್‌ ಕೊಟ್ಟಿದ್ದಾರೆ. ಇವರಿಬ್ಬರನ್ನು ಸಮಾಧಾನ ಮಾಡಲು ಮನೆ ಮಂದಿಯೆಲ್ಲಾ ಭಾರಿ ಪ್ರಯತ್ನ ಮಾಡಿದ್ದಾರೆ.

 

Shwetha M