ODI ಆಫರ್ ಕೈಬಿಟ್ಟ ಪಾಟಿದಾರ್ – ಭಾರತದ ಬಾಗಿಲು ಶಾಶ್ವತ ಬಂದ್?
ರಣಜಿ ಆಡುವ ರಜತ್ ನೆಪ ಹೇಳಿದ್ರಾ?

ಟೀಂ ಇಂಡಿಯಾ ಜೆರ್ಸಿ ತೊಟ್ಟು ದೇಶದ ಪರ ಆಡ್ಬೇಕು ಅನ್ನೋದು ಕ್ರಿಕೆಟ್ ಆಡುವ ಪ್ರತಿ ಆಟಗಾರನ ಬಿಗ್ಗೆಸ್ಟ್ ಡ್ರೀಮ್.. ಬಟ್ ಈ ಸಲ ರಜತ್ ಪಾಟಿದಾರ್ ಸಿಕ್ಕಿರೋ ಅವಕಾಶವನ್ನ ತಾವೇ ರಿಜೆಕ್ಟ್ ಮಾಡಿದ್ದಾರೆ. ಅವ್ರ ಈ ನಿರ್ಧಾರ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಇದನ್ನೂ ಓದಿ : 34,000 ಸೀಟ್.. 90 ಲಕ್ಷ ಅರ್ಜಿ – RO-KO Vs PAK ಪಂದ್ಯಕ್ಕಾಗಿ ವಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ಗೆ ಭಾರತ ತಂಡದಲ್ಲಿ ಚಾನ್ಸ್ ಸಿಗ್ಬೇಕು ಅನ್ನೋದು ಅಭಿಮಾನಿಗಳ ಆಸೆ ಹಾಗೇ ಮಾಜಿ ಕ್ರಿಕೆಟಿಗರ ಒತ್ತಾಯ ಆಗಿತ್ತು. ACC ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ನಲ್ಲಿ ಭಾರತ ಎ ತಂಡದ ಉಪನಾಯಕನಾಗಿಯೂ ರಜತ್ ಪಾಟಿದಾರ್ಗೆ ಅವಕಾಶ ಸಿಕ್ಕಿತ್ತು. ಆದ್ರೆ ಪಾಟಿದಾರ್ ಟೂರ್ನಿಯಿಂದ ತಾವೇ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲ, ಸದ್ಯಕ್ಕೆ 50 ಓವರ್ಗಳ ಕ್ರಿಕೆಟ್ಗೆ ತಮ್ಮನ್ನು ಪರಿಗಣಿಸಬಾರದು ಎಂದು ಬಿಸಿಸಿಐಗೆ ತಿಳಿಸಿದ್ದಾರೆ.
ಪಾಟಿದಾರ್ ಔಟ್.. ಬದೋನಿಗೆ ಚಾನ್ಸ್.. ರಿಂಕು ವೈಸ್ ಕ್ಯಾಪ್ಟನ್!
ತಿಲಕ್ ವರ್ಮಾ ಕ್ಯಾಪ್ಟನ್ಸಿಯಲ್ಲಿ ಅನೌನ್ಸ್ ಆಗಿದ್ದ ತಂಡದಲ್ಲಿ ಪಾಟಿದಾರ್ಗೆ ವೈಸ್ ಕ್ಯಾಪ್ಟನ್ಸಿ ಸಿಕ್ಕಿತ್ತು. ಆದ್ರೆ ಪಾಟಿದಾರ್ ಟೂರ್ನಮೆಂಟ್ನಿಂದ ಹಿಂದೆ ಸರಿದಿದ್ದಕ್ಕೆ ಉಪನಾಯಕನ ಸ್ಥಾನವನ್ನು ರಿಂಕು ಸಿಂಗ್ ಅವರಿಗೆ ನೀಡಲಾಗಿದೆ. ತಿಲಕ್ ವರ್ಮಾ ನಾಯಕನಾಗಿ ಮುಂದುವರಿಯಲಿದ್ದಾರೆ. ಪಾಟಿದಾರ್ ಸ್ಥಾನಕ್ಕೆ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಲಾಗಿದೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬದೋನಿಗೆ ಇದೀಗ ಭಾರತ ಎ ತಂಡದಲ್ಲಿ ಅವಕಾಶ ಸಿಕ್ಕಿದೆ. ಬಿಸಿಸಿಐ ಪ್ರಕಟಣೆ ಪ್ರಕಾರ, ಪಾಟಿದಾರ್ ಗಾಯದ ಸಮಸ್ಯೆಯಿಂದ ಬಳಲ್ತಿರೋದಕ್ಕೆ 50 ಓವರ್ಗಳ ಮಾದರಿಯಲ್ಲಿ ತಮ್ಮನ್ನು ಆಯ್ಕೆಗೆ ಪರಿಗಣಿಸಬಾರದು ಎಂದು ತಿಳಿಸಿದ್ದಾರೆ. ಆದರೆ ಈ ದಿಢೀರ್ ನಿರ್ಧಾರದಿಂದ ತಂಡಕ್ಕೂ ಹಲವು ರೀತಿಯಲ್ಲಿ ಎಫೆಕ್ಟ್ ಆಗಲಿದೆ.
ಪಾಟಿದಾರ್ ನಿರ್ಧಾರದ ಪರಿಣಾಮಗಳು!
ಪಾಕಿಸ್ತಾನ ಎ ಸೇರಿದಂತೆ ಪ್ರಮುಖ ಪಂದ್ಯಗಳಲ್ಲಿ ಪಾಟಿದಾರ್ ಅವರ ಆಬ್ಸೆನ್ಸ್
50 ಓವರ್ ಗಳ ಕ್ರಿಕೆಟ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ತಪ್ಪಿದೆ
ಭವಿಷ್ಯದಲ್ಲೂ ಏಕದಿನ ತಂಡದ ಆಯ್ಕೆಗೆ ಪಾಟಿದಾರ್ ಹೆಸರು ಸಂಪೂರ್ಣ ಮಿಸ್
50 ಓವರ್ ಗಳ ಕ್ರಿಕೆಟ್ ಬೇಡ ಎಂದಿರುವ ಪಾಟಿದಾರ್ ಡೊಮೆಸ್ಟಿಕ್ ಕ್ಯಾಪ್ಟನ್
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ಕ್ಯಾಪ್ಟನ್
ಇತ್ತೀಚಿನ ರಣಜಿ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿರುವ ರಜತ್ ಪಾಟಿದಾರ್
50 ಓವರ್ ಗಳ ಮಾದರಿಯಿಂದ ದೂರ ಉಳಿದಿರುವುದು ಹಲವು ಪ್ರಶ್ನೆ

ನೋಡಿರಿ

