RCBಗಾಗಿ ಮದುವೆಯೇ ರದ್ದು! – ಅಂದಿನ ತ್ಯಾಗ.. ಈಗ ಕೋಟಿಗಳ ಒಡೆಯ

ಆರ್‌ಸಿಬಿ.. ಈ ಸಲ ಕಪ್ ನಮ್ದೇ.. ಕಳೆದ 17 ವರ್ಷಗಳಿಂದ ಕಪ್ ಗೆಲ್ಲದಿದ್ರೂ, ಪ್ರತಿ ಆರ್ಸಿಬಿ ಫ್ಯಾನ್ಸ್ ಹೃದಯದ ಮಾತು ಇದೇ.. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಆರಂಭವಾಗಿದೆ. 2025 ರ ಐಪಿಎಲ್ನಲ್ಲಿ ರಜತ್ ಪಾಟೀದಾರ್ ಆರ್ಸಿಬಿ ತಂಡವನ್ನ ಮುನ್ನಡೆಸ್ತಿದ್ದಾರೆ.. ಟ್ರೋಫಿ ಗೆಲ್ಲುವ ಬರವನ್ನು ನೀಗಿಸುವ ದೊಡ್ಡ ಚಾಲೆಂಜ್ ಪಾಟೀದಾರ್ ಮೇಲಿದೆ. ಇದೀಗ ಆರ್ಸಿಬಿ ತಂಡದ ನಾಯಕನ ಆಟದ ಜೊತೆಗೆ ಅವ್ರ ವೈಯಕ್ತಿಕ ಜೀವನ ಕೂಡ ಭಾರಿ ಚರ್ಚೆಯಲ್ಲಿದೆ. ಪಾಟೀದಾರ್ ತಂಡ ಅಂತ ಬಂದಾಗ ಯಾವ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್.. ಅವ್ರ ಮದುವೆ.. ಆರ್ ಸಿಬಿ ತಂಡದಲ್ಲಿ ಆಟವಾಡಲು ರಜತ್ ತಮ್ಮ ಮದುವೆಯನ್ನೇ ರದ್ದು ಮಾಡಿದ್ರು..
ಇದನ್ನೂ ಓದಿ: ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ – ಮ್ಯಾಚ್ ಕ್ಯಾನ್ಸಲ್ ಆದ್ರೆ ಯಾರಿಗೆ ಲಾಭ?
ರಜತ್ ಪಾಟೀದಾರ್.. ಆರ್ಸಿಬಿಯ ನೂತನ ಸಾರಥಿ.. 2021ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ರು.. ಅದೂ ಕೂಡ ಆರ್ಸಿಬಿ ತಂಡದ ಮೂಲಕವೇ.. ಆದ್ರೆ 2021ರಲ್ಲಿ ಆರ್ಸಿಬಿ ಪರ ಆಡಿದ ಪಾಟೀದಾರ್ ಅವರನ್ನು 2022 ಆವೃತ್ತಿಯಲ್ಲಿ ಕೈಬಿಡಲಾಗಿತ್ತು. 2022 ರಲ್ಲಿ ನಡೆದ ಹರಾಜಿನಲ್ಲಿ ಅವರನ್ನು ಯಾರೂ ಖರೀದಿ ಮಾಡಲಿಲ್ಲ. ಹೀಗಾಗಿ ಐಪಿಎಲ್ನಿಂದ ದೂರ ಉಳಿದಿದ್ದ ರಜತ್, ತಮ್ಮ ವೈಯುಕ್ತಿಕ ಜೀವನದತ್ತ ಗಮನ ಹರಿಸಿದ್ರು.. ಹೀಗಾಗೇ ಅವ್ರು ಮದುವೆ ಆಗೋದಿಕ್ಕೆ ಮುಂದಾಗಿದ್ರು.. ಮಧ್ಯಪ್ರದೇಶದ ರತ್ಲಂ ಮೂಲದ ಗುಂಜನ್ ಪಾಟೀದಾರ್ ಎಂಬ ಯುವತಿಯನ್ನ ಮದುವೆ ಆಗಲು ಮುಂದಾಗಿದ್ರು.. 2022, ಮೇ 9 ರಂದು ಮದುವೆ ದಿನಾಂಕ ನಿಗಧಿ ಮಾಡಿದ್ರು.. ಆದ್ರೆ ವಿಧಿ ಅವರ ಹಣೆಯಲ್ಲಿ ಬೇರೆಯೇ ಬರೆದಿತ್ತು.. ಇದ್ರಿಂದಾಗಿ ಅಂದು ನಡೆಯಬೇಕಿದ್ದ ಮದುವೆಯನ್ನ ರಜತ್ ರದ್ದು ಮಾಡಿದ್ರು.. ಅದೇ ನೋಡಿ ಪಾಟೀದಾರ್ ಲೈಫ್ ಟರ್ನಿಂಗ್ ಪಾಯಿಂಟ್..
ನಾಳೆ ನನ್ನ ಮದುವೆ ಅಂತಾ ಪಾಟೀದಾರ್ ಸಂಭ್ರಮದಲ್ಲಿರ್ಬೇಕಾದ್ರೆ.. ರಜತ್ ಗೆ ಒಂದು ಕಾಲ್ ಬರುತ್ತೆ.. ಆರ್ಸಿಬಿ ತಂಡದಲ್ಲಿ ನಿಮ್ಮ ಅವಶ್ಯಕತೆ ಇದೆ ಅಂತಾ.. ಆರ್ಸಿಬಿಯ ಅಂದಿನ ಆಟಗಾರ ಲವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರು. ಅವರ ಬದಲಿಗೆ ಆಡಲು ಬರುವಂತೆ ಟೀಮ್ ಗೆ ಜಾಯಿನ್ ಆಗಿ ಅಂತಾ ಕರೆ ಬರುತ್ತೆ.. ರಜತ್ ಗೆ ತಂಡದಿಂದ ಕರೆ ಬಂದಿದ್ದೇ ತಡ.. ಮೇ 9 ರಂದು ನಡೆಯಬೇಕಿದ್ದ ಮದುವೆಯನ್ನ ರದ್ದು ಮಾಡಿ ಪಾಟೀದಾರ್ ಟೀಮ್ ಗೆ ಜಾಯಿನ್ ಆಗ್ತಾರೆ.. ಆ ಟೈಮ್ ನಲ್ಲಿ ರಜತ್ ಪಾಟೀದಾರ್ ಅವರನ್ನ ಆರ್ಸಿಬಿ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತು. ಅವತ್ತು ಅವರ ನಿರ್ಧಾರಕ್ಕೆ ಅವರ ಭಾವಿ ಪತ್ನಿ, ಕುಟುಂಬಸ್ಥರೆಲ್ಲಾ ಒಪ್ಪಿಗೆ ನೀಡಿದ್ರು.. ಇಲ್ಲಿಂದಲೇ ಆರ್ಸಿಬಿ ಟೀಮ್ ನಲ್ಲಿ ರಜತ್ ಸ್ಥಾನ ಭದ್ರವಾಯ್ತು. ಇನ್ನು ಐಪಿಎಲ್ ಮುಗಿಯುತ್ತಿದ್ದಂತೆ ಮತ್ತೆ ಮದುವೆ ದಿನಾಂಕ ನಿಗಧಿ ಮಾಡಿದ್ರು.. ರಜತ್ ಪಾಟಿದಾರ್ ಗುಂಜನ್ ಜೊತೆ ಅದೇ ವರ್ಷ ಜುಲೈನಲ್ಲಿ ಮದುವೆ ಆಗ್ತಾರೆ..
ಲೈಫ್ ನಲ್ಲಿ ಏಳುಬೀಳು ಕಂಡಿರುವ ರಜತ್ ಈಗ ಕೋಟಿಗಳ ಒಡೆಯ.. ಕ್ರಿಕೆಟ್ನಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಐಪಿಎಲ್ ವೇತನ ಹೆಚ್ಚುತ್ತಲೇ ಇದೆ. 2022ರ ಐಪಿಎಲ್ ಸಂದರ್ಭದಲ್ಲಿ ರಜತ್ ನನ್ನ ಆರ್ಸಿಬಿ ಖರೀದಿಸಿದ್ದು, ಜಸ್ಟ್ 20 ಲಕ್ಷ ರೂಗೆ. ನಂತರ 2023ರ ಆವೃತ್ತಿಯಲ್ಲಿ 20 ಲಕ್ಷಕ್ಕೆ ಆರ್ಸಿಬಿ ಫ್ರಾಂಚೈಸಿ ಉಳಿಸಿಕೊಂಡಿತ್ತು.. 2024ರಲ್ಲಿ ಆರ್ಸಿಬಿ ರಜತ್ ಗೆ 50 ಲಕ್ಷ ರೂಪಾಯಿಗೆ ಉಳಿಸಿಕೊಂಡಿತ್ತು. ಆದರೆ, ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಪಾಟಿದಾರ್ ಸುಮಾರು 11 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಇದು ಕೂಡ ಅವರ ಆದಾಯ ಗಳಿಕೆ ಹೆಚ್ಚಲು ಕಾರಣವಾಗಿದೆ. ಇನ್ನು 2024 ರಲ್ಲಿ, ರಜತ್ ಬಿಸಿಸಿಐನೊಂದಿಗೆ ಗ್ರೇಡ್ ಸಿ ಒಪ್ಪಂದವನ್ನು ಪಡೆದುಕೊಂಡಿದ್ದಾರೆ. ಇದ್ರಿಂದ ರಜತ್ ಗೆ ವರ್ಷಕೆ 1 ಕೋಟಿ ರೂ. ವೇತನ ಸಿಗ್ತಿದೆ. ಹೀಗಾಗೇ ರಜತ್ ಪಾಟಿದಾರ್ ಅವರ ನಿವ್ವಳ ಮೌಲ್ಯ 16-17 ಕೋಟಿಗೂ ಅಧಿಕ ಇದೆ ಅಂತಾ ವರದಿಯಲ್ಲಿ ಬಹಿರಂಗವಾಗಿದೆ.