OUT Or NOT OUT – RCBಗೆ ಮೋಸ ಆಯ್ತಾ?, ಐಪಿಎಲ್ ಕ್ಯಾಚ್ ರೂಲ್ಸ್ ಏನು?
ರನ್ಗಳಿಸದೇ RCBಗೆ ಹೊರೆಯಾದ್ರಾ?

ಆರ್‌ಸಿಬಿ ಮತ್ತು GT ಮ್ಯಾಚ್ ಮುಗಿದ ಮೇಲೆ ಬಿಸಿಬಿಸಿ ಚರ್ಚೆ ಆಗ್ತಾ ಇರೋರ್ ರಜತ್ ಪಟಿದಾರ್ ಔಟ್ ಬಗ್ಗೆ.. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಕಿಡಿ ಹೊತ್ತಿಕೊಂಡಿದೆ.. ಆರ್‌ಸಿಬಿಗೆ ಮೋಸ ಆಯ್ತು? ಅಂಪೈರ್ ಸರಿಯಾಗಿ ನೋಡದೇ ಔಟ್ ಕೊಟ್ಟಿದ್ದಾರೆ ಅಂತ.. .
GT ವಿರುದ್ಧದ ಪಂದ್ಯದಲ್ಲಿ ಎಂಟನೇ ಓವರ್‌ನಲ್ಲಿ ಪಾಟೀದಾರ್ ಹೊಡೆದ ಬಾಲ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಕಡೆ ಹೋಗಿತ್ತು.. ಆಗ ಜೇಸನ್ ಹೋಲ್ಡರ್ ಅವರು ಬಾಲ್ ಅನ್ನೇ ನೋಡುತ್ತಾ ಬಂದು, ಅದನ್ನು ಕೈಗೆ ತೆಗೆದುಕೊಂಡರು. ನಂತರ ನೆಲಕ್ಕೆ ಬೀಳ್ತಾರೆ. ಬಾಲ್ ಅವರ ಕೈಯಲ್ಲೇ ಇದ್ದರೂ ಅದು ನೆಲಕ್ಕೆ ಉಜ್ಜುತ್ತಾ ಹೋಗುತ್ತೆ.. ಅಷ್ಟೇ ಅಲ್ಲ ಬಾಲ್ ಹಿಡಿದ ಕೈಯನ್ನೇ ಊರಿ ಮೇಲಕ್ಕೆ ಎಳ್ತಾರೆ.. ಇದು ವಿಡಿಯೋದಲ್ಲಿ ಕ್ಲಿಯರ್ ಆಗಿ ಗೊತ್ತಾಗುತ್ತೆ.. ಚಿಕ್ಕ ಮಕ್ಕಳು ಸಹ ಔಟ್ ಅಂತ ಹೇಳ್ತಾರೆ.. ನಿನ್ನೆ ಕೂಡ ಇದ್ದನ್ನ ನೋಡಿ ನಾಟೌಟ್ ಕೊಡುತ್ತಾರೆ ಎಲ್ಲಾ ಅಂದ್ಕೊಂಡಿದ್ರು. ಆದರೆ, ಔಟ್ ಕೊಡಲಾಯಿತು. ಆದ್ರೆ ಇದು ನಾಟೌಟ್ ಅಂತ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಆರ್ ಅಶ್ವಿನ್, ಇರ್ಫಾನ್ ಪಠಾಣ್, ಆಕಾಶ್ ಚೋಪ್ರಾ ದೊಡ್ಡ ಗಣೇಶ್ ಅವರಂತಹ ಮಾಜಿ ಆಟಗಾರರು ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದಾರೆ. ಇದು ಖಂಡಿತವಾಗಿಯೂ ಲೀಗಲ್ ಕ್ಯಾಚ್ ಅಲ್ಲ, ಹೋಲ್ಡರ್ ಬಾಲ್ ಅನ್ನು ನೆಲಕ್ಕೆ ತಗಲಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಂಪೈರ್ ಇಡೀ ಫೂಟೇಜ್ ಸರಿಯಾಗಿ ನೋಡದೆ ಬೇಕಾಬಿಟ್ಟಿ ನಿರ್ಧಾರ ಕೊಟ್ಟಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.
ಅಂಪೈರ್ ಮೇಲೆ ಕೊಹ್ಲಿ ಆಕ್ರೋಶ!
ಪಾಟೀದಾರ್ ಔಟ್ ಎಂದು ತಿಳಿದ ತಕ್ಷಣ ಡಗೌಟ್‌ನಲ್ಲಿದ್ದ ವಿರಾಟ್ ಕೊಹ್ಲಿ ಸಿಟ್ಟಿನಿಂದ ಎದ್ದು ಬಂುದ್ರ. ಬಾಲ್ ನೆಲಕ್ಕೆ ತಗುಲಿದೆ ಎಂದು ಸನ್ನೆ ಮಾಡುತ್ತಾ ರಿಸರ್ವ್ ಅಂಪೈರ್ ಜೊತೆ ಸಾಕಷ್ಟು ಕಾಲ ವಾಗ್ವಾದ ನಡೆಸಿದರು. ಆರ್‌ಸಿಬಿ ಹೆಡ್ ಕೋಚ್ ಆಂಡಿ ಫ್ಲವರ್ ಕೂಡ ಕೊಹ್ಲಿ ಜೊತೆ ಸೇರಿ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿದರು. ಪಾಟೀದಾರ್ ಕೂಡ ಕ್ರೀಸ್ ಬಿಟ್ಟು ಹೋಗದೆ ಅಂಪೈರ್ ತೀರ್ಪಿಗಾಗಿ ಕಾದಿದ್ದರು. ಆದ್ರೆ ಅಂಪೈರ್ ಔಟ್ ಕೊಟ್ರು. ಒಂದು ವೇಳೆ ರಜತ್ ಪಾಟೀದಾರ್ ಔಟ್ ಆಗಿಲ್ಲ ಅಂದಿದ್ರೆ, ಇನ್ನೂ ಒಳ್ಳೆಯ ಸ್ಕೋರ್ ಬರ್ತಾ ಇತ್ತು. ಆರ್‌ಸಿಬಿ ಗೆಲ್ಲೋ ಚಾನ್ಸ್ ಕೂಡ ಹೆಚ್ಚಿತ್ತು..
ಇದನ್ನೂ ಓದಿ: ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ! – 19 ಪುಟ ಡೆತ್‌ನೋಟ್ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ
ಮೂರು ವರ್ಷಗಳ ಹಿಂದೆ ಆ್ಯಶಸ್ ಸರಣಿಯಲ್ಲಿ ಮಿಸ್ಚೆಲ್ ಸ್ಟಾರ್ಕ್ ಕೂಡ ಇದೇ ರೀತಿ ಸ್ಲೈಡ್ ಮಾಡುತ್ತಾ ಕ್ಯಾಚ್ ಹಿಡಿದಿದ್ದರು. ಆಗ ಥರ್ಡ್ ಅಂಪೈರ್ ಅದನ್ನು ನಾಟೌಟ್ ಎಂದು ನೀಡಿದ್ದರು. ಆ ಘಟನೆಯನ್ನು ನೆನಪಿಸಿದ ಅಭಿಮಾನಿಗಳು, ಹೋಲ್ಡರ್ ವಿಷಯದಲ್ಲಿ ಮಾತ್ರ ಅಂಪೈರ್ಸ್ ಯಾಕೆ ಬೇರೆ ರೂಲ್ಸ್ ಅಪ್ಲೈ ಮಾಡಿದರು ಎಂದು ಪ್ರಶ್ನಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಆ್ಯಶಸ್ ಸರಣಿಯಲ್ಲಿ ಮಿಸ್ಚೆಲ್ ಸ್ಟಾರ್ಕ್ ಕೂಡ ಇದೇ ರೀತಿ ಸ್ಲೈಡ್ ಮಾಡುತ್ತಾ ಕ್ಯಾಚ್ ಹಿಡಿದಿದ್ದರು. ಆಗ ಥರ್ಡ್ ಅಂಪೈರ್ ಅದನ್ನು ನಾಟೌಟ್ ಎಂದು ನೀಡಿದ್ದರು. ಆ ಘಟನೆಯನ್ನು ನೆನಪಿಸಿದ ಅಭಿಮಾನಿಗಳು, ಹೋಲ್ಡರ್ ವಿಷಯದಲ್ಲಿ ಮಾತ್ರ ಅಂಪೈರ್ಸ್ ಯಾಕೆ ಬೇರೆ ರೂಲ್ಸ್ ಅಪ್ಲೈ ಮಾಡಿದರು ಎಂದು ಪ್ರಶ್ನಿಸುತ್ತಿದ್ದಾರೆ.
ಕ್ಯಾಚ್ ನಿಯಮ ಏನ್ ಹೇಳುತ್ತೆ?
ಕ್ರಿಕೆಟ್ ಕಾನೂನಿನ ಪ್ರಕಾರ, ಒಬ್ಬ ಫೀಲ್ಡರ್ ಬಾಲ್ ಮೇಲೆ ಮಾತ್ರವಲ್ಲದೆ ತನ್ನ ಚಲನೆಯ ಮೇಲೂ ಪೂರ್ಣ ನಿಯಂತ್ರಣ ಹೊಂದಿರಬೇಕು. ನಿಯಮ 33.3ರ ಪ್ರಕಾರ, ಕ್ಯಾಚ್ ಹಿಡಿದ ನಂತರ ಫೀಲ್ಡರ್ ಸ್ಲೈಡ್ ಆಗುವಾಗ ಬಾಲ್ ನೆಲಕ್ಕೆ ತಗುಲಿದರೆ ಅದನ್ನು ಔಟ್ ಎಂದು ಪರಿಗಣಿಸುವಂತಿಲ್ಲ. ಸ್ಟಾರ್ಕ್ ಪ್ರಕರಣದಲ್ಲಿ ಎಂಸಿಸಿ ಇದೇ ನಿಯಮವನ್ನು ಉಲ್ಲೇಖಿಸಿತ್ತು. ಜೆಸನ್ ಹೋಲ್ಡರ್ ಸ್ಲೈಡ್ ಮಾಡುವಾಗ ಬಾಲ್ ನೆಲಕ್ಕೆ ತಗುಲಿದೆ ಎನ್ನುವುದಕ್ಕೆ ಫೋಟೋ ಸಾಕ್ಷಿಗಳಿವೆ. ಅಷ್ಟೇ ಅಲ್ಲದೆ, ಕ್ಯಾಚ್ ಹಿಡಿದು ಮೇಲೆ ಏಳುವಾಗಲೂ ಹೋಲ್ಡರ್ ಬಾಲ್ ಸಹಾಯದಿಂದಲೇ ಬ್ಯಾಲೆನ್ಸ್ ಮಾಡಿಕೊಂಡಿದ್ದರು. ನಿಯಮದ ಪ್ರಕಾರ ಫೀಲ್ಡರ್ ಚಲನೆ ನಿಲ್ಲುವವರೆಗೆ ಬಾಲ್ ಸುರಕ್ಷಿತವಾಗಿರಬೇಕು. ಟಿವಿ ಅಂಪೈರ್ ಈ ಕ್ಯಾಚ್ ಅನ್ನು ಒಂದು ಪ್ರತ್ಯೇಕ ಆಕ್ಷನ್ ಎಂದು ನೋಡಿದ್ದಾರೆ. ಹೋಲ್ಡರ್ ಕ್ಯಾಚ್ ಹಿಡಿದ ತಕ್ಷಣವೇ ಅವರಿಗೆ ಬಾಲ್ ಮತ್ತು ಮೂವ್‌ಮೆಂಟ್ ಮೇಲೆ ಕಂಟ್ರೋಲ್ ಇತ್ತು ಎಂದು ಅಂಪೈರ್ ಭಾವಿಸಿದ್ದಾರೆ. ಸ್ಲೈಡಿಂಗ್ ಮತ್ತು ಮೇಲೆ ಏಳುವ ಪ್ರಕ್ರಿಯೆಯನ್ನು ಅವರು ಕ್ಯಾಚ್ ಪೂರ್ಣಗೊಂಡ ನಂತರದ ಘಟನೆ ಎಂದು ಪರಿಗಣಿಸಿದ್ದಾರೆ. ಆದರೆ, ಹೋಲ್ಡರ್ ನಿಯಂತ್ರಣದಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಒಟ್ನಲ್ಲಿ ಒಂದು ಕ್ಯಾಚ್ ಈಗ ಐಪಿಎಲ್‌ನಲ್ಲಿ ದೊಡ್ಡ ವಿವಾದವನ್ನ ಹುಟ್ಟುಹಾಕಿದೆ.

ನೋಡಿರಿ

