RCB ಪವರ್ ಹಿಟ್ಟರ್ ಪಾಟಿದಾರ್ – ಸ್ಪಿನ್ನರ್ ಗಳನ್ನು DESTROY ಮಾಡಿದ್ರಾ?
ಬೆಂಗಳೂರಿಗೆ ಬ್ಯಾಟಿಂಗ್ ರಜತೋತ್ಸವ

RCB ಪವರ್ ಹಿಟ್ಟರ್ ಪಾಟಿದಾರ್ – ಸ್ಪಿನ್ನರ್ ಗಳನ್ನು DESTROY ಮಾಡಿದ್ರಾ?ಬೆಂಗಳೂರಿಗೆ ಬ್ಯಾಟಿಂಗ್ ರಜತೋತ್ಸವ

ಬ್ಯಾಟಿಂಗ್, ಬೌಲಿಂಗ್ ಹಾಗೇ ಫೀಲ್ಡಿಂಗ್​ನಲ್ಲಿ ಸಾಲಿಡ್ ಪ್ರದರ್ಶನ ನೀಡ್ತಿರೋ ಆರ್​ಸಿಬಿ ಈ ಸಲ ನಾಲ್ಕು ಮ್ಯಾಚ್​ಗಳಲ್ಲಿ ಮೂರು ಪಂದ್ಯಗಳನ್ನ ವಿನ್ ಆಗಿದೆ. ರಾಜಸ್ಥಾನ ವಿರುದ್ಧ ಸೋತ್ರೂ ಮುಂಬೈ ವಿರುದ್ಧ ಗೆದ್ದು ಮೇಕ್ ಓವರ್ ಮಾಡಿದ್ದಾರೆ. ಕಳೆದ ನಾಲ್ಕೂ ಪಂದ್ಯಗಳಲ್ಲೂ ಆರ್​ಸಿಬಿ ಬ್ಯಾಟಿಂಗ್ ಅಂತೂ ಬೊಂಬಾಟ್. ಆರ್​ಆರ್​ ವಿರುದ್ಧ ಸ್ಟ್ರಗಲ್ಸ್ ಕಂಡ್ರೂ ಕೂಡ 200+ ಟಾರ್ಗೆಟ್ ಅಂತೂ ಸೆಟ್ ಮಾಡಿದ್ರು. ಬೆಂಗಳೂರು ತಂಡ ಗೆದ್ದಿರೋ ಮೂರು ಪಂದ್ಯಗಳಲ್ಲೂ ಬ್ಯಾಟಿಂಗ್ ಡಾಮಿನೇಷನ್ ಎದ್ದು ಕಾಣ್ತಿತ್ತು. ಆರ್​ಸಿಬಿಯ ಈ ಪವರ್​ಫುಲ್ ಬ್ಯಾಟಿಂಗ್​ನಲ್ಲಿ ಪವರ್ ಹಿಟ್ಟರ್ ಆಗಿ ಕಾಣಿಸಿಕೊಳ್ತಿರೋದೇ ಕ್ಯಾಪ್ಟನ್ ರಜತ್ ಪಾಟಿದಾರ್. ಒಬ್ಬ ನಾಯಕನಾಗಿ ತಂಡವನ್ನ ಸಮರ್ಥವಾಗಿ ನಿಭಾಯಿಸೋದ್ರ ಜೊತೆಗೆ ಬ್ಯಾಟರ್ ಆಗಿಯೂ ಬ್ಯಾಕ್​ಬೋನ್ ಆಗಿದ್ದಾರೆ.

ಇದನ್ನೂ ಓದಿ : ಗೆಲುವಿನ ಟ್ರ್ಯಾಕ್ RCBಗೋ.. MIಗೋ? – 4ನೇ ಮ್ಯಾಚಲ್ಲೂ ಬರುತ್ತಾ 200+ ರನ್ಸ್?

ಮಾಡ್ರೆನ್ ಕ್ರಿಕೆಟ್​ನ ಫೇವರೆಟ್ ಫಾರ್ಮೆಟ್ ಆಗಿರೋ ಐಪಿಎಲ್​ನಲ್ಲಿ ಬ್ಯಾಟರ್​ಗಳು ಪಾರುಪತ್ಯ ಮೆರೀತಿದ್ದಾರೆ. 150+ ಸ್ಟ್ರೈಕ್ ರೇಟ್ ಎಲ್ಲಾ ನಾರ್ಮಲ್ ಅನ್ನೋ ಥರ ಆಗೋಗಿದೆ.. ಈಗೇನಿದ್ರೂ 200 ಪ್ಲಸ್ ಸ್ಕ್ರೈಕ್ ರೇಟ್ ಇದ್ರೆ ಮ್ಯಾಚ್ ವಿನ್ನಿಂಗ್ ಪಾಸಿಬಿಲಿಟಿಸ್ ಜಾಸ್ತಿ ಇರುತ್ತೆ. ಆರ್​ಸಿಬಿ ಪರ ಕಳೆದ ಮೂರೂ ಪಂದ್ಯಗಳಲ್ಲೂ ಇಂಥಾದ್ದೊಂದು ಮ್ಯಾಜಿಕ್ ಮಾಡಿರೋದು ರಜತ್ ಪಾಟಿದಾರ್. ಅದ್ರಲ್ಲೂ ಮಿಡಲ್ ಓವರ್​ಗಳಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದ್ದಾರೆ.

ಸ್ಪಿನ್ನರ್ಸ್ ಎದುರಲ್ಲಿ ಪವರ್ ಹಿಟ್ಟರ್ ಪಾಟಿದಾರ್!

ಟಾಪ್ ಆರ್ಡರ್ ಬ್ಯಾಟಿಂಗ್ ಲೈನಪ್​ನಲ್ಲಿ ಕೆಲ ಬ್ಯಾಟರ್ಸ್ ಸ್ಪಿನ್ನರ್ಸ್ ಎದುರಲ್ಲಿ ಸ್ಟ್ರಗಲ್ ಮಾಡ್ತಾರೆ. ಬಿಗ್ ಸ್ಕೋರ್ ಬರಲ್ಲ. ಸೋ ಮಿಡಲ್ ಓವರ್​ನಲ್ಲಿ ರನ್ಸ್ ಸಿಗದೆ ಹಿನ್ನಡೆ ಆಗೋ ಚಾನ್ಸಸ್ ಇರುತ್ತೆ. ಬಟ್ ಆರ್​ಸಿಬಿಗೆ ಮಿಡಲ್ ಓವರ್​ನಲ್ಲಿ ಸ್ಟ್ರೆಂಥ್ ಆಗ್ತಿರೋದೇ ರಜತ್ ಪಾಟಿದಾರ್. ಸ್ಪಿನ್ನರ್ಸ್ ಎದುರಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸ್ತಾರೆ. ಆಲ್ರೆಡಿ ಈ ಸೀಸನ್​ನಲ್ಲಿ 4 ಪಂದ್ಯಗಳಲ್ಲಿ 195 ರನ್ಸ್ ಹೊಡೆದಿದ್ದಾರೆ. ಆರೆಂಜ್ ಕ್ಯಾಪ್ ರೇಸಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ. ವೈಭವ್ ಸೂರ್ಯವಂಶಿ 200 ರನ್ಸ್ ಹೊಡೆದು ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಇನ್ನು ಪಾಟಿದಾರ್ ಈ ಸೀಸನ್​ನಲ್ಲಿ ಸ್ಪಿನ್ನರ್ಸ್ ಎಗೆನೆಸ್ಟ್ 59 ಬಾಲ್​ಗಳನ್ನ ಫೇಸ್ ಮಾಡಿದ್ದಾರೆ. ಹಾಗೇ 218ರ ಸ್ಟ್ರೈಕ್​ರೇಟ್​ನಲ್ಲಿ 129 ರನ್ಸ್ ಬಂದಿದೆ. ಇದ್ರಲ್ಲಿ 9 ಫೋರ್​ಗಳಿದ್ರೆ 11 ಸಿಕ್ಸಸ್​​ಗಳಿವೆ. ಹಾಗೇ 2 ಸಲ ಸ್ಪಿನ್ನರ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಓವರ್​ ಆಲ್​ ಬ್ಯಾಟಿಂಗ್ ಆವರೇಜ್ 65 ಇದೆ. ಸೋ ಈ ನಂಬರ್​ಗಳನ್ನ ನೋಡಿದಾಗ್ಲೇ ಗೊತ್ತಾಗುತ್ತೆ ಪಾಟಿದಾರ್ ಈ ಸೀಸನ್​ನಲ್ಲಿ ಎಂಥಾ ಫಾರ್ಮ್​ನಲ್ಲಿ ಇದ್ದಾರೆ ಅನ್ನೋದು. ಸೋ ಸ್ಪಿನ್ನರ್​ಗಳನ್ನ ಅಕ್ಷರಶಃ ಡೆಸ್ಟ್ರಾಯ್ ಮಾಡ್ತಿದ್ದಾರೆ. ಕಳೆದ 4 ಮ್ಯಾಚಲ್ಲಿ ಇವ್ರೇ ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ತೋರಿಸ್ತಿದ್ದಾರೆ.

ಪಾಟಿದಾರ್ ಪವರ್ ಶೋ!

ಎದುರಾಳಿ                          ರನ್ಸ್                    ಸ್ಟ್ರೈಕ್ ರೇಟ್

ಹೈದ್ರಾಬಾದ್                       31(12)                     258.33

ಚೆನ್ನೈ                                   48*(19)                 252.63

ರಾಜಸ್ಥಾನ                           63(40)                    157.50

ಮುಂಬೈ ಇಂಡಿಯನ್ಸ್        53(20)                   265.00

ಇಲ್ಲಿ ಕಳೆದ ನಾಲ್ಕು ಪಂದ್ಯಗಳ ಪೈಕಿ ರಜತ್ ಪಾಟಿದಾರ್ ಮೂರು ಮ್ಯಾಚ್​ಗಳಲ್ಲಿ 250+ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ರಾಜಸ್ಥಾನ ವಿರುದ್ಧ ಮಾತ್ರವೇ ಸ್ವಲ್ಪ ಕಡಿಮೆ ಇದೆ. ಒಂದು ವೇಳೆ ಆವತ್ತು ಬ್ಯಾಟರ್ಸ್ ಬೇಗ ಬೇಗ ಔಟ್ ಆಗದೇ ಇದ್ರೆ ಪಾಟಿದಾರ್್ಮತ್ತೆ ಸುನಾಮಿ ಎಬ್ಬಿಸೋ ಚಾಸಸ್ ಕೂಡ ಇತ್ತು. ಬಟ್ ಮುಂಬೈ ಮ್ಯಾಚಲ್ಲಿ ಆ ಮೊಮೆಂಟಮ್​ನ ಬಿಟ್ಟುಕೊಡ್ಲಿಲ್ಲ.

17 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಿದ ಪಾಟಿದಾರ್!

ಮುಂಬೈ ವಿರುದ್ಧದ ಮ್ಯಾಚಲ್ಲಿ ಮಿಡಲ್ ಓವರ್​ಗಳಲ್ಲಿ ಬೆಂಗಳೂರು ಟೀಂ ಬ್ಯಾಟಿಂಗ್​ನಲ್ಲಿ ಡಾಮಿನೇಷನ್ ಮಾಡೋಕೆ ಕಾರಣವೇ ನಾಯಕ ರಜತ್ ಪಾಟಿದಾರ್. ಅದ್ಭುತವಾಗಿ ಬ್ಯಾಟ್ ಬೀಸಿದ ಪಾಟಿದಾರ್ ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಌಕ್ಚುಲಿ ಈ ಮ್ಯಾಚಲ್ಲಿ ಐಪಿಎಲ್​ನಲ್ಲಿ ಫಾಸ್ಟೆಸ್ಟ್ ಹಾಫ್ ಸೆಂಚುರಿ ಸಿಡಿಸೋ ಚಾನ್ಸ್ ಇತ್ತು. ಮೊದಲ 11 ಎಸೆತಗಳಲ್ಲಿ 44 ರನ್ ಸಿಡಿಸಿದ್ದ ರಜತ್ ಪಾಟೀದಾರ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಅವಕಾಶ ಇತ್ತು. ಬಟ್ ಅದು ಸಾಧ್ಯ ಆಗ್ಲಿಲ್ಲ. ಆದ್ರೆ 17 ವರ್ಷಗಳ ಹಿಂದೆ ಡೆಕ್ಕನ್ ಚಾರ್ಜಸ್ ತಂಡದ ಪರ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಆ್ಯಡಂ ಗಿಲ್‌ಕ್ರಿಸ್ಟ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2009ರಲ್ಲಿ ಡೆಕ್ಕನ್ ಚಾರ್ಜಸ್ ನಾಯಕನಾಗಿದ್ದ ಆ್ಯಡಂ ಗಿಲ್‌ಗ್ರಿಸ್ಟ್ 17  ಬಾಲಲ್ಲಿ ಅರ್ಧಶತಕ ಬಾರಿಸಿದ್ರು. ಇದು ಐಪಿಎಲ್‌ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ನಾಯಕ ಎಂಬ ಸಾಧನೆ ಮಾಡಿದ್ರು. ಈಗ ಪಾಟಿದಾರ್ ಕೂಡ 17 ಎಸೆತಗಳಲ್ಲೇ ಆ ಸಾಧನೆ ಮಾಡಿದ್ದಾರೆ.

Shantha Kumari