ಶ್ರೇಷ್ಠಾಗೆ ತಾಂಡವ್‌ ಟಾಟಾ.. ಬೈಬೈ.. ಭಾಗ್ಯಗೆ ಮತ್ತೆ ಶೆಫ್‌ ಕೆಲಸ? – ಅತ್ತೆ ಸೊಸೆ ಪ್ಲ್ಯಾನ್ಸ್‌ ಸಕ್ಸಸ್‌?

ಶ್ರೇಷ್ಠಾಗೆ ತಾಂಡವ್‌ ಟಾಟಾ.. ಬೈಬೈ.. ಭಾಗ್ಯಗೆ ಮತ್ತೆ ಶೆಫ್‌ ಕೆಲಸ? – ಅತ್ತೆ ಸೊಸೆ ಪ್ಲ್ಯಾನ್ಸ್‌ ಸಕ್ಸಸ್‌?

ಭಾಗ್ಯಗೆ ಸಂಕಷ್ಟ ಮುಗಿಯಲ್ಲ.. ತಾಂಡವ್‌ ನ ಉದ್ಧಾರ ಆಗೋದಿಕ್ಕೆ ಶ್ರೇಷ್ಠಾ ಬಿಡಲ್ಲ.. ಇದು ಭಾಗ್ಯಲಕ್ಷ್ಮೀ ಸಿರಿಯಲ್‌ ಸದ್ಯದ ಸ್ಟೋರಿ. ಶ್ರೇಷ್ಠಾ ಹಾಗೂ ಕನ್ನಿಕಾ ಕುತಂತ್ರದಿಂದ ಭಾಗ್ಯ ಕೆಲಸ ಕಳೆದುಕೊಂಡಿದ್ದಾಳೆ. ಇದೀಗ ಭಾಗ್ಯ ಕನ್ನಿಕಾಗೆ ಎಲ್ಲರ ಮುಂದೆ ಅವಮಾನ ಮಾಡಿ, ಆಕೆಗೆ ಎಚ್ಚರಿಕೆ ಕೊಟ್ಟು ಬಂದಿದ್ದಾಳೆ. ಆದ್ರೀಗ ತಾಂಡವ್‌ ಗೆ  ಶ್ರೇಷ್ಠಾ ಕಾಟ ತಡೆದುಕೊಳ್ಳಲಿಕ್ಕೆ ಆಗ್ತಿಲ್ಲ.. ಆತನ ಪ್ಲ್ಯಾನ್‌ ಎಲ್ಲಾ ಉಲ್ಟಾ ಮಾಡ್ತಿದ್ದಾಳೆ.. ಇದೀಗ ತಾಂಡವ್‌ ಆತನಿಗೆ ಸರಿಯಾಗೆ ಮಂಗಳಾರತಿ ಮಾಡಿದ್ದಾನೆ.. ಹಾಗಾದ್ರೆ ತಾಂಡವ್‌ ಶ್ರೇಷ್ಠಾಳನ್ನ ಬಿಡ್ತಾನಾ? ತಾಂಡವ್‌ಗೆ ಭಾಗ್ಯನೇ ಗತಿನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ರಜತ್ ಪಾಟೀದಾರ್ ಗೆ RCB ಪಟ್ಟಾಭಿಷೇಕ – ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಕಟ್ಟಿದ್ದೇಕೆ?  

ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಶ್ರೇಷ್ಠಾ, ಕನ್ನಿಕಾ ಕುತಂತ್ರದಿಂದ ಭಾಗ್ಯ ಶೆಫ್‌ ಕೆಲಸ ಕಳೆದುಕೊಂಡಿದ್ದಾಳೆ. ಇದೀಗ ಕನ್ನಿಕಾ ಆಫೀಸ್‌ ಗೆ ಬಂದು ಭಾಗ್ಯ ರಂಪಾಟ ಮಾಡಿದ್ದಾಳೆ. ಅತ್ತೆ ಮಾವನಿಗೆ ಅವಮಾನ ಮಾಡಿದ್ದಕ್ಕೆ ಸರಿಯಾಗೆ ಕ್ಲಾಸ್‌ ತೆಗೆದುಕೊಂಡಿದ್ದಾಳೆ.. ತನ್ನ ಸಹವಾಸಕ್ಕೆ ಬರ್ಬೇಡ, ನಿನ್ನನ್ನ ಹೇಗೆ ವಿಚಾರಿಸಿಕೊಳ್ಬೇಕು ಅನ್ನೋದು ತನಗೆ ಗೊತ್ತಿದೆ ಅಂತಾ ಸವಾಲ್‌ ಹಾಕಿ ಹೋಗಿದ್ದಾಳೆ. ಇದೀಗ ಭಾಗ್ಯ ಮುಂದೇನು ಮಾಡ್ತಾಳೆ.. ಕನ್ನಿಕಾ ಬಣ್ಣ ಹೇಗೆ ಬಯಲು ಮಾಡ್ತಾಳೆ ಅಂತಾ ವೀಕ್ಷಕರು ಕುತೂಹಲದಿಂದ ನೋಡ್ತಿದ್ದಾರೆ.

ಮತ್ತೊಂದ್ಕಡೆ ತಾಂಡವ್‌ ಪ್ಲ್ಯಾನ್‌ ನನ್ನ ಶ್ರೇಷ್ಠಾ ಹಾಳು ಮಾಡ್ತಿದ್ದಾಳೆ. ಇದ್ರಿಂದ ಆಕೆ ಸಿಟ್ಟಾಗಿದ್ದಾಳೆ. ಹೌದು, ತಾಂಡವ್‌ ತನ್ವಿ ಕಾಲೇಜ್‌ ಫೀಸ್‌ ಕಟ್ಟಿದ್ದ.. ಇದನ್ನ ಶ್ರೇಷ್ಠಾಗೆ ಸಹಿಸಿಕೊಳ್ಳೊದಿಕ್ಕೆ ಆಗಿಲ್ಲ. ಭಾಗ್ಯ ಮನೆಗೆ ಹೋಗಿ ಶ್ರೇಷ್ಠಾ ರಂಪಾಟ ಮಾಡಿದ್ಲು.. ಭಾಗ್ಯ ಮಕ್ಕಳನ್ನ ಮುಂದೆ ಇಟ್ಕೊಂಡು ದುಡ್ಡು ಹೊಡಿತಿದ್ದಾಳೆ. ತಾನು ಸುಮ್ನೆ ಇರಲ್ಲ ಅಂತಾ ಕೂಗಾಡಿದ್ಲು.. ಆದ್ರೆ ತಾಂಡವ್‌ ಅಲ್ಲಿಗೆ ಬಂದು ಶ್ರೇಷ್ಠಾಗೆ ಕಪಾಳಮೋಕ್ಷ ಮಾಡಿದ್ದಾನೆ.. ನನಗೆ ನಿನ್ನಕ್ಕಿಂತ ನನ್ನ ಹೆತ್ತವರು ಹಾಗೂ ನಾನು ಹೆತ್ತ ಮಕ್ಕಳು ಮುಖ್ಯ ಎಂದು ಹೇಳಿದ್ದಾನೆ. ಇದ್ರಿಂದ ಶ್ರೇಷ್ಠಾಗೆ ಶಾಕ್‌ ಆಗಿದೆ. ಬಳಿಕ ತಾಂಡವ್‌ ತನ್ನ ಪ್ಲ್ಯಾನ್‌ ಎಲ್ಲ ಹಾಳು ಮಾಡಿಬಿಟ್ಟೆ ಅಂತಾ ಕೂಗಾಡಿದ್ದಾನೆ.

ಹೌದು ತಾಂಡವ್‌ ಭಾಗ್ಯಗೆ ಸವಾಲ್‌ ಹಾಕಿದ್ದ. ಮಕ್ಕಳು ಹಾಗೂ ಅಪ್ಪ ಅಮ್ಮ ತನ್ನ ಹಿಂದೆ ಬರೋತರ ಮಾಡ್ತೇನೆ ಅಂತಾ ಹೇಳಿದ್ದ.. ಅದ್ರ ಮೊದಲ ಟಾರ್ಗೆಟ್‌ ಆಗಿ ತನ್ವಿ. ಹೀಗಾಗಿ ಆತ ತನ್ವಿ ಕಾಲೇಜ್‌ ಫೀಸ್‌ ಕಟ್ಟಿದ್ದ. ಇದ್ರಿಂದ ತನ್ವಿ ಇಂಪ್ರೆಸ್‌ ಆಗ್ತಾಳೆ.. ಅವಳು ತನ್ನ ಪರ ನಿಲ್ತಾಳೆ.. ಅವಳು ತಾಂಡವ್‌ ಸೈಡ್‌ ಬಂದ್ರೆ ಗುಂಡಣ್ಣ, ಅಪ್ಪ ಅಮ್ಮ ಕೂಡ ತನ್ನ ಸೈಡ್‌ ಬರ್ತಾರೆ ಅಂತಾ ಅಂದ್ಕೊಂಡಿದ್ದ.. ಆದ್ರೆ ಶ್ರೇಷ್ಠಾ ಈ ಪ್ಲ್ಯಾನ್‌ ನ ಉಲ್ಟಾ ಮಾಡಿದ್ಲು.. ಇದೀಗ ಮತ್ತೆ ಶ್ರೇಷ್ಠಾ ತಾಂಡವ್‌ ತನ್ವಿಯನ್ನ ಟಾರ್ಗೆಟ್‌ ಮಾಡಿದ್ದಾರೆ. ತನ್ವಿ ಬರ್ತಡೇ ಸೆಲೆಬ್ರೇಟ್‌ ಮಾಡ್ಬೇಕು.. ಆಕೆಗೆ ಸರ್‌ಪ್ರೈಸ್‌ಕೊಡ್ಬೇಕು ಅಂತಾ ಶ್ರೇಷ್ಠಾ ಪ್ಲ್ಯಾನ್‌ ಮಾಡಿದ್ದಾಳೆ.. ತಾಂಡವ್‌ ಕೂಡ ಆಫೀಸ್‌ ಗೆ ರಜೆ ಹಾಕಿದ್ದಾನೆ. ಆದ್ರೆ ಆ ಪ್ಲ್ಯಾನ್‌ ಸಕ್ಸಸ್‌ ಆಗುತ್ತಾ? ಅಥವಾ ಈ ಪ್ಲ್ಯಾನ್‌ ಫ್ಲಾಪ್‌ ಆಗಿ ತಾಂಡವ್‌ ಶ್ರೇಷ್ಠಾ ಸಹವಾಸ ಸಾಕು ಅಂತಾ ಬಿಟ್ಟು ಹೋಗ್ತಾನಾ ಅಂತಾ ಕಾದುನೋಡ್ಬೇಕು..

ಇನ್ನು ಭಾಗ್ಯ ಯಾವ ಕೆಲಸ ಮಾಡಬೇಕು?’ ಎಂದು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ವೀಕ್ಷಕರ ಸಲಹೆ ಕೇಳಿದೆ. ಜೊತೆಗೆ 4 ಆಯ್ಕೆಯನ್ನೂ ಕೊಟ್ಟಿದೆ. ಅಡುಗೆ ಕೆಲಸ ಹುಡುಕಲಿ, ಬಿಸಿನೆಸ್ ಸ್ಟಾರ್ಟ್ ಮಾಡಲಿ, ಗೃಹಿಣಿಯಾಗೇ ಇರಲಿ, ಬೇರೆ ಏನಾದರೂ ಹೊಸತು ಎಂಬ 4 ಆಯ್ಕೆಗಳನ್ನೂ ವೀಕ್ಷಕರ ಮುಂದೆ ಕಲರ್ಸ್ ಕನ್ನಡ ವಾಹಿನಿ ಇಟ್ಟಿದೆ. ಇದಕ್ಕೆ ವೀಕ್ಷಕರಿಂದ ತರಹೇವಾರಿ ಕಾಮೆಂಟ್ಸ್ ಬಂದಿವೆ.

ಕುಸುಮಾ, ಸುನಂದಾ, ಭಾಗ್ಯ.. ಮೂರೂ ಜನ ಬಡ್ಡಿ ವ್ಯವಹಾರ ಮಾಡಲಿ. ಮೂವರೂ ಕೈ ಎತ್ತಿ ಹೊಡೆಯುವುದರಲ್ಲಿ ಹುಷಾರು. ಕೊಟ್ಟ ದುಡ್ಡು ವಾಪಾಸ್ ಬರುತ್ತೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಭಾಗ್ಯ ತನ್ನ ಬಜೆಟ್‌ನಲ್ಲಿ ತಕ್ಕಮಟ್ಟಿಗೆ ಹೋಟೆಲ್ ವ್ಯವಹಾರ ಮಾಡಬೇಕು. ಆಕೆಯ ಕೈರುಚಿ ಸವಿದ ಗಿರಾಕಿಗಳು ಹೊಗಳಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸಿ, ಗಿರಾಕಿಗಳು ತುಂಬುವ ಕಾರಣ ಬ್ಯಾಂಕ್‌ನಲ್ಲಿ ಸಾಲ ಪಡೆದು ಕನ್ನಿಕಾ ಎದುರಿಗೆ ದೊಡ್ಡ ಹೋಟೆಲ್ ತೆರೆದು ಬೇಗ ಶ್ರೀಮಂತಳಾಗಲಿ. ಹೆಂಡತಿಯ ಸಾಧನೆಗೆ ಸೋತು ಗಂಡನಿಗೆ ಬುದ್ಧಿ ಬರಲಿ. ನಾನು ಇಷ್ಟೆಲ್ಲಾ ಕಾಟ ಕೊಟ್ಟರೂ ಭಾಗ್ಯ ಗೆದ್ದಳಲ್ಲ ಅಂತ ಶ್ರೇಷ್ಠಾ ಬೆಪ್ಪು ಮೋರೆ ಹಾಕಿಕೊಂಡು ತನ್ನ ಕಾಲೇಜು ಗೆಳೆಯನನ್ನು ಮದುವೆಯಾಗಲಿ ಎಂದು ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *