ರಜತ್ ಜೈಲಿನಲ್ಲಿದ್ರೂ ಮನೆಮಂದಿಗೆ ತಲೆನೋವು – ಏನ್ ಕ್ವಾಟ್ಲೆ ಗುರೂ..!

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸಿದೆ. ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ಆಟ ವರಸೆ ಈಗ ಬದಲಾಗಿದೆ. ರಜತ್ ಹಾಗೂ ಶೋಭಾ ಬಂದ ದಿನದಿಂದಲೇ ಭಾರಿ ಸದ್ದು ಮಾಡಿದ್ದಾರೆ. ರಜತ್ ಈ ವಾರ ಕಳಪೆ ಪಟ್ಟ ತೆಗೆದುಕೊಂಡು ಜೈಲು ಸೇರಿದ್ದಾರೆ. ಇದೀಗ ಜೈಲಿನಲ್ಲಿದ್ದುಕೊಂಡೆ ಉಳಿದ ಸ್ಪರ್ಧಿಗಳಿಗೆ ಚಮಕ್ ಕೊಟ್ಟಿದ್ದಾರೆ ರಜತ್.
ಇದನ್ನೂ ಓದಿ :ಕಾಂಗ್ರೆಸ್, JDS ಮಧ್ಯೆ ಬೆಟ್ಟಿಂಗ್ ಭರಾಟೆ – ಯೋಗೇಶ್ವರ್ ಪರ 15 ಕೋಟಿ ಬಾಜಿ!?
ಕಳೆದ ಸಂಚಿಕೆಯಲ್ಲಿ ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ. ರಜತ್ ಜೈಲು ವಾಸದಲ್ಲಿದ್ರೂ ಮನೆ ಮಂದಿಗೆ ತಲೆ ನೋವಾಗಿದೆ. ಮನೆಮಂದಿಗೆ ರಜತ್ ಸರಿಯಾಗೇ ಕ್ವಾಟ್ಲೆ ಕೊಟ್ಟಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ.
ಜೈಲು ಸೇರಿದ ರಜತ್ ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಭವ್ಯಾ ಗೌಡ ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್ ಗೆ ನೀಡುತ್ತಾರೆ. ನಾನು ಕಟ್ ಮಾಡುತ್ತೇನೆ. ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ ಕಟ್ ಮಾಡ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.
ನನಗೆ ಕಳಪೆ ಕೊಡುತ್ತೀರಾ? ಎಲ್ಲರೂ ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ. ಏನ್ ಮಾಡ್ತೀರಿ ಇವಾಗ ಏನೂ ಮಾಡೋಕೆ ಆಗಲ್ಲ. ನನಗೂ ಹೊಟ್ಟೆ ಉರಿತಾ ಇಲ್ವಾ ಎಂದು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ರಜತ್ ಗೆ ಚೆಲ್ಲಾಟ ಆಗಿದ್ರೆ, ಮನೆ ಮಂದಿಗೆ ಸಂಕಟ ಆಗ್ತಿರೋದಂತೂ ಗ್ಯಾರಂಟಿ.