ರಾಜಸ್ತಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ಸೆಣಸಾಟ – ಗೆದ್ದರೆ ಆರ್‌ಆರ್‌ ಅಧಿಕೃತವಾಗಿ ಪ್ಲೇಆಫ್ ಪ್ರವೇಶ

ರಾಜಸ್ತಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ಸೆಣಸಾಟ – ಗೆದ್ದರೆ ಆರ್‌ಆರ್‌ ಅಧಿಕೃತವಾಗಿ ಪ್ಲೇಆಫ್ ಪ್ರವೇಶ

ಪಾಯಿಂಟ್ಸ್ ಟೇಬಲ್ ನಲ್ಲಿ ಟಾಪ್ ಪ್ಲೇಸ್‌ನಲ್ಲಿರೋ ರಾಜಸ್ತಾನ್ ರಾಯಲ್ಸ್ ಇವತ್ತು ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ತಂಡವು ಈ ಪಂದ್ಯದಲ್ಲಿ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ.

ಇದನ್ನೂ ಓದಿ: 10 ಪಂದ್ಯ.. 7 ಸೋಲು.. 3 ಜಯ – RCB ಪ್ಲೇ ಆಫ್ ಚಾನ್ಸ್ ಇನ್ನೂ ಇದ್ಯಾ?

ಭರ್ಜರಿ ಫಾರ್ಮ್‌ನಲ್ಲಿರೋ ಆರ್ ಆರ್ ಟೀಮ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಈಗಾಗ್ಲೇ ಟಿ20 ವಿಶ್ವಕಪ್‌ನ ಟೀಮ್ ಇಂಡಿಯಾ ಸ್ಕ್ವ್ಯಾಡ್ ಗೆ ಸೆಲೆಕ್ಟ್ ಆಗಿದ್ದಾರೆ. ಇದೇ ಜೋಶ್‌ನಲ್ಲೇ ಇವತ್ತು ಸಂಜು ಬ್ಯಾಟ್ ಬೀಸ್ತಾರಾ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ಗೂ ಇದೆ. ಜೊತೆಗೆ ಜೈಸ್ವಾಲ್ ಕೂಡಾ ಟೀಮ್ ಇಂಡಿಯಾದಲ್ಲಿ ಸೆಲೆಕ್ಟ್ ಆಗಿರೋ ಖುಷಿಯಲ್ಲಿದ್ದಾರೆ. ಯುಜ್ವೇದ್ರ ಚಹಾಲ್ ಕೂಡಾ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವ ವಿಶ್ವಾಸದಲ್ಲಿದ್ದಾರೆ.

ಐಪಿಎಲ್‌ನ ಈ ಸೀಸನ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿ ರನ್ ಮಳೆ ಸುರಿಸುತ್ತಿರೋ ಸನ್‌ರೈಸರ್ಸ್ ಹೈದ್ರಾಬಾದ್ ತಂಡ ಚೇಸಿಂಗ್ ಅಂತಾ ಬಂದಾಗ ಎಡವುತ್ತಿದೆ. ಚೇಸಿಂಗ್ ಸಿಕ್ಕಾಗಲೆಲ್ಲಾ ಸೋಲನ್ನೇ ಕಾಣುತ್ತಿರೋ ಹೈದ್ರಾಬಾದ್ ತಂಡಕ್ಕೆ ಇವತ್ತಿನ ಎದುರಾಳಿ ರಾಜಸ್ತಾನ್ ರಾಯಲ್ಸ್. ಟೇಬಲ್ ಟಾಪರ್ ಆರ್ ಆರ್ ತಂಡದ ವಿರುದ್ಧ ಎಸ್ ಆರ್ ಹೆಚ್ ಫೈಟ್ ಮಾಡಲಿದೆ. ಸತತ 2 ಸೋಲಿನ ಬಳಿಕ ಟಾಪ್ ಫೋರ್ ಪ್ಲೇಸ್‌ನಿಂದ ಕೆಳಗೆ ಬಿದ್ದಿರೋ ಪ್ಯಾಟ್ ಕಮಿನ್ಸ್ ಟೀಮ್ ಇವತ್ತು ಯಾವ ಜಾದು ಮಾಡಲಿದೆ ಅಂತಾ ನೋಡ್ಬೇಕಿದೆ.

 

Sulekha

Leave a Reply

Your email address will not be published. Required fields are marked *