ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫೈಟ್ – ಸಂಜು ಸ್ಯಾಮ್ಸನ್ ಹಾಗೂ ರಿಷಬ್ ಪಂತ್ ನಡುವೆ ಗೆಲ್ಲೋರು ಯಾರು?

ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿರೋ ಜೋಶ್ನಲ್ಲಿದೆ ರಾಜಸ್ಥಾನ್ ರಾಯಲ್ಸ್ ಟೀಮ್. ಐಪಿಎಲ್ನಲ್ಲಿರುವ ಮತ್ತೊಂದು ಸ್ಟ್ರಾಂಗ್ ಟೀಮ್ ಅಂದ್ರೆ ಆರ್ಆರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಈಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಲು ಸಂಜು ಬಾಯ್ಸ್ ಫುಲ್ ರೆಡಿಯಾಗಿದ್ದಾರೆ. ಯಂಗ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಜೊತೆಗೆ ಬಟ್ಲರ್, ಧ್ರುವ ಜುರೆಲ್, ಆರ್, ಅಶ್ವಿನ್ ಹಾಗೂ ನಾಯಕ ಸಂಜು ಸಾಮ್ಸನ್ ಆರ್ ಆರ್ ಟೀಮ್ನ ಬಲ. ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 193 ರನ್ ಗಳಿಸುವ ಮೂಲಕ ತನ್ನ ಬ್ಯಾಟಿಂಗ್ ಶಕ್ತಿಯನ್ನು ಆರ್ಆರ್ ತೋರಿಸಿಕೊಟ್ಟಿದೆ.. ಅಲ್ಲದೆ ಬೌಲಿಂಗ್ನಲ್ಲಿ ಎಲ್ಎಸ್ಜಿಯನ್ನು 173 ರನ್ಗಳಿಗೆ ಕಟ್ಟಿಹಾಕಿ, ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವ ಶಕ್ತಿ ತನಗಿದೆ ಎಂಬ ಆರ್ಆರ್ನ ಬೌಲಿಂಗ್ ಯುನಿಟ್ ಕೂಡ ಸಾಬೀತುಪಡಿಸಿದೆ..
ಇದನ್ನೂ ಓದಿ: ಶಿವಂ ದುಬೆ, ರಚಿನ್ ರವೀಂದ್ರ ಬೊಂಬಾಟ್ ಬ್ಯಾಟಿಂಗ್ – ಧೋನಿ ತಂತ್ರಗಾರಿಕೆ ವರ್ಕೌಟ್ ಆಗಿದ್ದು ಹೇಗೆ?
ಆರ್ ಆರ್ ಟೀಮ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಅನುಭವಿ ಹಾಗೂ ಸ್ಫೊಟಕ ಆಟಗಾರರು ತಂಡದಲ್ಲಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ, ವೇಗ ಹಾಗೂ ಸ್ಪಿನ್ ಬೌಲಿಂಗ್ ಕೂಡಾ ಖರಾರುವಕ್ ಆಗಿದೆ. ಐಪಿಎಲ್ನ ಕಳೆದ ಆವೃತ್ತಿಯಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿದ್ದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್, ಈ ಬಾರಿಯೂ ಅಗ್ರ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ನ ವಿಶ್ವಾಸ ಮೂಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್ ಮೇಲೆ ನಂಬಿಕೆಯಿಡಬಹುದು.. ಜೊತೆಗೆ ಇತ್ತೀಚೆಗೆ ಟೀಂ ಇಂಡಿಯಾದಲ್ಲೂ ಚಾನ್ಸ್ ಪಡೆದಿದ್ದ ಧ್ರುವ ಜುರೇಲ್ ಕೂಡ ಒಳ್ಳೆಯ ಆತ್ಮ ವಿಶ್ವಾಸದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.. ಅದರಲ್ಲೂ ನಾಯಕ ಸಂಜು ಸ್ಯಾಮ್ಸನ್ ಕಳೆದ ಐದು ಸೀಸನ್ಗಳಲ್ಲಿ ಐಪಿಎಲ್ನ ಮೊದಲ ಪಂದ್ಯದಲ್ಲಿ ಹಾಫ್ ಸೆಂಚುರಿ ಅಥವಾ ಸೆಂಚುರಿ ಭಾರಿಸಿದ ವಿಶೇಷ ದಾಖಲೆ ಹೊಂದಿದ್ದಾರೆ.. ಈ ಬಾರಿಯೂ ಅದೇ ಸ್ವರೂಪದಲ್ಲಿ ಮೊದಲ ಪಂದ್ಯದಲ್ಲಿ ಬ್ಯಾಟ್ ಬೀಸಿದ್ದ ಸಂಜು, 52 ಎಸೆತಗಳಲ್ಲಿ 82 ರನ್ ಹೊಡೆದಿದ್ದರು.. ಇದು ಸಹಜವಾಗಿಯೇ ಆರ್ಆರ್ ತಂಡವನ್ನು ಗೆಲುವಿನ ದಡ ಸೇರಿಸಿತ್ತು.. ಅಲ್ಲದೆ ಸಂಜು ಈ ಬಾರಿಯ ಸೀಸನ್ನಲ್ಲಿ ಮತ್ತೆ ಅಬ್ಬರಿಸುವ ವಿಶ್ವಾಸ ಮೂಡಿಸಿದ್ದಾರೆ.. ಆರ್ ಆರ್ ಟೀಮ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂವರು ವಿಕೆಟ್ಕೀಪರ್ಗಳಿರುವುದು ವಿಶೇಷ… ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಧೃವ್ ಜುರೇಲ್ ಮೂವರೂ ಕೂಡಾ ವೃತ್ತಿಪರ ವಿಕೆಟ್ ಕೀಪರ್ಗಳು.. ಆದ್ರೆ ವಿಕೆಟ್ ಹಿಂದಿನ ಜವಾಬ್ದಾರಿಯನ್ನು ನಾಯಕ ಸಂಜು ಸ್ಯಾಮ್ಸನ್ ಮಾಡ್ತಾರೆ.. ರಾಯಲ್ಸ್ ತಂಡಕ್ಕೆ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್ ಬಲ ತುಂಬುತ್ತಿದ್ದು ಸ್ಕೋರ್ ಡಿಫೆಂಡ್ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಈ ಮೂವರಲ್ಲಿದೆ.. ಸಂದೀಪ್ ಶರ್ಮಾ ಹಾಗೂ ಆವೇಶ್ ಖಾನ್ ಕೂಡ ಉತ್ತಮ ಫಾರ್ಮ್ನಲ್ಲಿರುವುದರಿಂದ ಆರ್ಆರ್ ಬೌಲಿಂಗ್ ಐಪಿಎಲ್ನ ಉಳಿದ ತಂಡಗಳಿಗೆ ಹೋಲಿಸಿದ್ರೆ ಹೆಚ್ಚು ವೇರಿಯೇಷನ್ನಿಂದ ಕೂಡಿದೆ..
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ರಿಷಭ್ ಪಂತ್ ಗ್ರೇಟ್ ಕಮ್ ಬ್ಯಾಕ್ ನಂತರವೂ ಮೊದಲ ಪಂದ್ಯ ಸೋತಿದೆ.. ಮೊದಲ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬ್ಯಾಟ್ನಿಂದ ದೊಡ್ಡ ಸದ್ದು ಮಾಡಲಿಲ್ಲ. ಜೊತೆಗೆ ಡೆಲ್ಲಿಯ ಬ್ಯಾಟಿಂಗ್ ವಿಭಾಗ ತನ್ನ ಶಕ್ತಿಗೆ ತಕ್ಕಂತೆ ಮೊದಲ ಪಂದ್ಯದಲ್ಲಿ ಆಡದೇ ಇರುವುದು ನಾಯಕ ರಿಷಬ್ ಪಂತ್ ಅವರನ್ನು ಚಿಂತೆಗೆ ದೂಡಿದೆ.. ಆದರೆ, ವಿಕೆಟ್ ಹಿಂಭಾಗದಲ್ಲಿ ಅವರು ತೋರಿದ ಚಾಣಾಕ್ಷತೆ ಮಾತ್ರ ಪವರ್ ಫುಲ್ ಆಗಿತ್ತು. ವಿಕೆಟ್ ಕೀಪಿಂಗ್ನಲ್ಲಿ ಪಂತ್ ಮೊದಲಿಗಿಂತ ಚುರುಕಾಗಿ ಕಾಣುತ್ತಿದ್ದರು. ಅವರನ್ನು ನೋಡಿದರೆ 16 ತಿಂಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದಂತೆ ಕಾಣುತ್ತಲೇ ಇರಲಿಲ್ಲ. ಇನ್ನು ಫಸ್ಟ್ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ವೇಳೆ ಡೆಲ್ಲಿ ತಂಡ ಆರಂಭದಲ್ಲಿ ಅಬ್ಬರಿಸಿತ್ತು. ಆದರೆ ಪವರ್ ಪ್ಲೇ ನಂತರ ಪಂಜಾಬ್ ಬೌಲರ್ಗಳ ಮುಂದೆ ತತ್ತರಿಸಿತು. ವಾರ್ನರ್ ಮತ್ತು ಪೃಥ್ವಿ ಶಾ ಸಿಡಿದರೆ, ಎದುರಾಳಿ ಕ್ಯಾಫ್ಟನ್ಗೆ ಬೌಲಿಂಗ್ ಚೇಂಜ್ ಮಾಡುವುದೇ ಚಿಂತೆಯಾಗಲಿದೆ.. ಆದ್ರೆ ಸದ್ಯ ಅವರಿಂದ ದೊಡ್ಡ ಕೊಡುಗೆ ಟೀಂಗೆ ಸಿಕ್ಕಿಲ್ಲ.. ಈ ಜೋಡಿಯ ಜೊತೆಗೆ ಶಾಹಿ ಹೋಮ್ಸ್, ಮಿಚೆಲ್ ಮಾರ್ಷ್ ಹಾಗೂ ನಾಯಕ ರಿಷಬ್ ಪಂತ್ ಸೇರಿದರೆ ಒಳ್ಳೆಯ ಸ್ಕೋರ್ ದಾಖಲಿಸಿಕೊಳ್ಳಬಹುದು.. ಆದ್ರೆ ಕಳೆದ ಪಂದ್ಯದಲ್ಲಿ ಪೃಥ್ವಿ ಶಾ ಆಡಿರಲಿಲ್ಲ.. ಈ ಬಾರಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.. ಜೊತೆಗೆ ಪಂಜಾಬ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ಅಭಿಷೇಕ್ ಪೊರೆಲ್, ಹೊಸ ಭರವಸೆ ಮೂಡಿಸಿದ್ದಾರೆ.. ಅದರಲ್ಲೂ ಕಡೆಯ ಓವರ್ನಲ್ಲಿ ಹರ್ಷೆಲ್ ಪಟೇಲ್ಗೆ 25 ರನ್ ಬಾರಿಸಿದ್ದ ಪೊರೆಲ್, ಈಗ ಡಿಸಿಯ ಹೊಸ ಭರವಸೆಯಾಗಿ ನಿಂತಿದ್ದಾರೆ.. ಬಾಲ್ ಇರೋದೇ ಹೊಡೆಯೋದಕ್ಕೆ ಎನ್ನುವ ಧೋರಣೆಯಲ್ಲಿ ಆಡುವ ಅಭಿಷೇಕ್, ಯಾವುದೇ ಬೌಲರ್ ಮೇಲೆ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿರುವುದು ಡಿಸಿಗೆ ಹೊಸ ಹುಮ್ಮತ್ತು ತಂದಿದೆ.. ಇನ್ನು ಬೌಲಿಂಗ್ನಲ್ಲೂ ಟೀಂ ಚೆನ್ನಾಗಿಯೇ ಇದೆ.. ಇಶಾಂತ್ ಶರ್ಮ, ಖಲೀಲ್ ಅಹಮದ್ ಜೊತೆಗೆ ಮಿಚೆಲ್ ಮಾರ್ಷ್ ಸೇರಿಕೊಂಡು ವೇಗದ ಬೌಲಿಂಗ್ಗೆ ಬಲ ತುಂಬಿದ್ದಾದೆ.. ಜೊತೆಗೆ ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ ಶಕ್ತಿಯಾಗಿದ್ದಾರೆ.. ಹೀಗಾಗಿ ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಿಂದ ಕೂಡಿವೆ.. ಉತ್ಸಾಹಿ ಕ್ಯಾಫ್ಟನ್ಗಳಾದ ಸಂಜು ಸ್ಯಾಮ್ಸನ್ ಹಾಗೂ ರಿಷಬ್ ಪಂತ್ ನಡುವೆ ಈ ಬಾರಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದೇ ಈಗ ಅಭಿಮಾನಿಗಳಿಗಿರುವ ಕುತೂಹಲ..