ರಾಜಸ್ಥಾನಕ್ಕೆ ಮೊದಲ ಜಯ- ಸಿಎಸ್‌ಕೆಗೆ 2ನೇ ಸೋಲು

ಐಪಿಎನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮೊದಲ ಗೆಲುವಿನ ನಗೆ ಬೀರಿದೆ. ಗೌಹಾತಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. 21 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ ನಿತೀಶ್ ರಾಣಾ 36 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 81 ರನ್ ಗಳಿಸಿದರು. ಸಿಎಸ್‌ಕೆ ಪರವಾಗಿ ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತಿಶಾ ಪತಿರನಾ ತಲಾ 2 ವಿಕೆಟ್ ಪಡೆದರು.
ಇನ್ನು 183 ರನ್ ಗಳಿಸಿದರೆ ಗೆಲುವು ಎಂಬ ಸವಾಲಿನ ಗುರಿಯೊಂದಿಗೆ ಕಣಕ್ಕಿಳಿದ ಸಿಎಸ್‌ಕೆಗೆ ಆರಂಭದಲ್ಲೇ ಆಘಾತ ಕಾದಿತ್ತು. ಆರಂಭಿಕ ಆಟಗಾರ ರಚಿನ್ ರವೀಂದ್ರ ರನ್ ಗಳಿಸದೆ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಕಣಕ್ಕಿಳಿದ ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ಎಂದಿನ ಟ್ರೇಡ್ ಮಾರ್ಕ್ ಶಾಟ್‌ಗಳನ್ನು ಆಡಲು ಹಿಂದೇಟು ಹಾಕಲಿಲ್ಲ, ಮತ್ತೊಂದೆಡೆ ರಾಹುಲ್ ತ್ರಿಪಾಠಿ ರನ್ ಗಳಿಸಲು ಪರದಾಡಿದರು. ನಿರಂತರವಾಗಿ ಪರದಾಡಿದ ರಾಹುಲ್ ತ್ರಿಪಾಠಿ 19 ಎಸೆತಗಳಲ್ಲಿ 23 ರನ್ ಗಳಿಸಿ ಹಸರಂಗ ಬೌಲಿಂಗ್‌ನಲ್ಲಿ ಔಟ್ ಆದರು.
ಇದಾದ ಬಳಿಕ ಕಣಕ್ಕಿಳಿದ ಸಿಕ್ಸರ್ ಕಿಂಗ್ ಶಿವಂ ದುಬೆ 2 ಸಿಕ್ಸರ್ ಬಾರಿಸಿದ ತೃಪ್ತಿಯೊಂದಿಗೆ ಪೆವಿಲಿಯನ್ ಸೇರಿದರು. ಅವರು 10 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿಯೊಂದಿಗೆ 18 ರನ್ ಗಳಿಸಿ ಹಸರಂಗ ಬೌಲಿಂಗ್‌ನಲ್ಲಿ ರಿಯಾನ್ ಪರಾಗ್ ಅವರ ಸೂಪರ್ ಕ್ಯಾಚ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇದರ ನಂತರ ಕಣಕ್ಕಿಳಿದ ತಮಿಳುನಾಡು ಆಟಗಾರ ವಿಜಯ್ ಶಂಕರ್ 9 ರನ್ ಗಳಿಸಿ ಹಸರಂಗ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನಾಯಕ ಋತುರಾಜ್ ಗಾಯಕ್ವಾಡ್ ಅದ್ಭುತವಾಗಿ ಆಡಿ 37 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು.
17ನೇ ಓವರ್‌ನಲ್ಲಿ ಸಂದೀಪ್ ಶರ್ಮಾ 9 ರನ್ ನೀಡಿದರು. 18ನೇ ಓವರ್‌ನಲ್ಲಿ ತೀಕ್ಷಣ 7 ರನ್ ಮಾತ್ರ ನೀಡಿದ್ದರಿಂದ ಕೊನೆಯ 2 ಓವರ್‌ಗಳಲ್ಲಿ 39 ರನ್ ಬೇಕಿತ್ತು. ತುಷಾರ್ ದೇಶಪಾಂಡೆ ಬೌಲಿಂಗ್ ಮಾಡಿದ 19ನೇ ಓವರ್‌ನಲ್ಲಿ ಧೋನಿ 1 ಬೌಂಡರಿ, 1 ಸಿಕ್ಸರ್ ಮತ್ತು ಜಡೇಜಾ 1 ಸಿಕ್ಸರ್ ಬಾರಿಸಿದ್ದರಿಂದ 19 ರನ್ ಬಂದವು. ಇದರಿಂದ ಕೊನೆಯ ಓವರ್‌ನಲ್ಲಿ ಗೆಲುವಿಗೆ 20 ರನ್ ಬೇಕಿತ್ತು. ಕೊನೆಯ ಓವರ್‌ನ ಮೊದಲ ಎಸೆತವನ್ನು ಎದುರಿಸಿದ ಧೋನಿ (11 ಎಸೆತಗಳಲ್ಲಿ 16 ರನ್) ಸಂದೀಪ್ ಶರ್ಮಾ ಅವರ ಸೂಪರ್ ಬೌಲಿಂಗ್‌ನಲ್ಲಿ ಹೆಟ್ಮೇಯರ್‌ಗೆ ಕ್ಯಾಚ್ ನೀಡಿದರು. ನಂತರ ಕಣಕ್ಕಿಳಿದ ಜೇಮಿ ಓವರ್ಟನ್ 1 ಸಿಕ್ಸರ್ ಬಾರಿಸಿದರೂ ಗೆಲುವಿನ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಸಂದೀಪ್ ಶರ್ಮಾ ಕೊನೆಯ ಓವರ್‌ನಲ್ಲಿ 12 ರನ್ ಮಾತ್ರ ನೀಡಿದ್ದರಿಂದ ಸಿಎಸ್‌ಕೆ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ 6 ರನ್ ಅಂತರದಿಂದ ಸೋತಿತು.
ರಾಜಸ್ಥಾನ ಆಟಗಾರ ವನಿಂದು ಹಸರಂಗ 4 ಓವರ್‌ಗಳಲ್ಲಿ 35 ರನ್ ನೀಡಿ 4 ವಿಕೆಟ್ ಪಡೆದು ಮ್ಯಾಚ್ ವಿನ್ನರ್ ಆಗಿ ಮಿಂಚಿದರು. ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ತಂಡ ಮೊದಲ ಜಯ ದಾಖಲಿಸಿದೆ. 3ನೇ ಪಂದ್ಯವಾಡುತ್ತಿರುವ ಸಿಎಸ್‌ಕೆಗೆ ಇದು 2ನೇ ಸರಣಿ ಸೋ