ಮುಂಬೈ ಇಂಡಿಯನ್ಸ್‌ಗೆ ರಾಜಸ್ತಾನ್ ರಾಯಲ್ಸ್ ಸವಾಲ್- ಹಿಂದಿನ ಸೋಲಿನ ಸೇಡು ತೀರಿಸಿಕೊಳ್ತಾರಾ ಹಾರ್ದಿಕ್ ಪಾಂಡ್ಯ?

ಮುಂಬೈ ಇಂಡಿಯನ್ಸ್‌ಗೆ ರಾಜಸ್ತಾನ್ ರಾಯಲ್ಸ್ ಸವಾಲ್- ಹಿಂದಿನ ಸೋಲಿನ ಸೇಡು ತೀರಿಸಿಕೊಳ್ತಾರಾ ಹಾರ್ದಿಕ್ ಪಾಂಡ್ಯ?

ಗೆಲುವಿನ ಸವಾರಿ ಮುಂದುವರೆಸಿರುವ ಮುಂಬೈ ಇಂಡಿಯನ್ಸ್ ಇವತ್ತು ಆರ್ ಆರ್ ವಿರುದ್ಧ ಸೆಣಸಾಡಲಿದೆ. ಹಿಂದಿನ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಸೋತಿರುವ ಮುಂಬೈ ಇವತ್ತಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಮುಂಬೈ ಬ್ಯಾಟಿಂಗ್ ವಿಭಾಗದಲ್ಲಿ ಸಖತ್ ಸ್ಟ್ರಾಂಗ್ ಆಗುತ್ತಿದೆ. ಬೌಲಿಂಗ್‌ನಲ್ಲಿ ಬೂಮ್ರಾ ಶಸ್ತ್ರ ಎದುರಾಳಿಗಳಿಗೆ ನಡುಕ ಹುಟ್ಟಿಸೋದಂತೂ ಗ್ಯಾರಂಟಿ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಕೂಡಾ ಗೆಲುವಿನ ಗುಂಗಿನಲ್ಲಿದ್ದು, ಮುಂಬೈ ಉತ್ಸಾಹದಲ್ಲಿಯೇ ಮೈದಾನಕ್ಕಿಳಿಯಲಿದೆ.

ಇದನ್ನೂ ಓದಿ: ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ರೋಚಕ ಸೋಲು – ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ 7 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಮುಂಬೈ ಇಂಡಿಯನ್ಸ್ ತಂಡವು ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಟಿಮ್ ಡೇವಿಡ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬಲಾಢ್ಯ ರಾಜಸ್ಥಾನ ರಾಯಲ್ಸ್ ತಂಡವನ್ನು ಕಟ್ಟಿಹಾಕಬೇಕಿದ್ದರೇ, ಜಸ್ಪ್ರೀತ್ ಬುಮ್ರಾ, ಗೆರಾಲ್ಡ್ ಕೋಟ್ಜೀ, ಶ್ರೇಯಸ್ ಗೋಪಾಲ್ ಅವರು ಮಾರಕ ದಾಳಿ ನಡೆಸಬೇಕಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಫಸ್ಟ್ ಪ್ಲೇಸ್‌ನಲ್ಲಿದೆ ರಾಜಸ್ತಾನ್ ರಾಯಲ್ಸ್ ಟೀಮ್. ಇವತ್ತು ಆರ್‌ಆರ್ ಟೀಮ್ ಬಲಿಷ್ಠ ಮುಂಬೈ ಇಂಡಿಯನ್ಸ್‌ ನ ಸವಾಲ್ ಸ್ವೀಕರಿಸಲಿದೆ. ಆರ್ ಆರ್ ಬೌಲಿಂಗ್ ಪಡೆಯಲ್ಲಿ ಆರ್ ಅಶ್ವಿನ್ ಸ್ವಲ್ಪ ಡಲ್ ಆದ್ರೂ, ಯಜ್ವೇಂದ್ರ ಚಹಲ್, ಕುಲ್ದೀಪ್ ಸೇನ್, ಆವೇಶ್ ಖಾನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅಸ್ಸಾಂ ಮೂಲದ ಬ್ಯಾಟರ್ ರಿಯಾನ್ ಪರಾಗ್ ಅಬ್ಬರ ಕೂಡಾ ಆರ್ ಆರ್ ಟೀಮ್‌ ಗೆ ಪ್ಲಸ್ ಪಾಯಿಂಟ್ ಆಗಲಿದೆ. ಬಟ್ಲರ್, ಹೆಟ್ಮಾಯಿರ್ ಕೂಡಾ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಸಂಘಟಿತ ಹೋರಾಟ ತಂಡದ ಪ್ಲಸ್‌ ಪಾಯಿಂಟ್‌. ಮುಂಬೈ ವಿರುದ್ಧವೂ ತವರಿನ ಪಿಚ್‌ನ ಲಾಭವೆತ್ತಿ ಗೆಲುವು ಸಾಧಿಸಲು ಸಂಜು ಸ್ಯಾಮ್ಸನ್‌ ಪಡೆ ಕಾಯುತ್ತಿದೆ.

 

Sulekha